ರಾಜ್ಯ

ಧಾರವಾಡದ ವನಹಳ್ಳಿ ಸೀಲ್ ಡೌನ್ ಆದ್ರೂ ಸೋಂಕಿತನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ …!

ಧಾರವಾಡ prajakiran.com : ಧಾರವಾಡದ ವನಹಳ್ಳಿ ಗ್ರಾಮದಲ್ಲಿ ಇಬ್ಬರಿಗೆ ಕರೋನಾ ಸೋಂಕು ವಕ್ಕರಿಸಿರುವುದರಿಂದ ಗ್ರಾಮವನ್ನು ಸೋಮವಾರ ಬೆಳಗ್ಗೆಯೇ ಸೀಲ್ ಡೌನ್ ಮಾಡಲಾಗಿದೆ.

ಆದ್ರೂ ಸೋಂಕಿತನಿಗೆ ಮಾತ್ರ ಈವರೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಹೌದು ಇದು ಅಚ್ಚರಿಯಾದ್ರೂ ಗ್ರಾಮಸ್ಥರು ಮಾತ್ರ ಪರದಾಡುವಂತಾಗಿದೆ.

ಇಬ್ಬರಿಗೆ ಕರೋನಾ ಹರಡಿರುವುದು ಆರೋಗ್ಯ ಇಲಾಖೆ ನಿನ್ನೇ ರಾತ್ರಿಯೇ ಒಬ್ಬರಿಗೆ ದೃಢಪಡಿಸಿದೆ. ಅಲ್ಲದೆ, ಇಂದು ಬೆಳಗ್ಗೆ ಒಬ್ಬರಿಗೆ ದೃಢಪಡಿಸಿದೆ. ಆದರೆ ಸೋಮವಾರ ಸಂಜೆ 4 ಗಂಟೆ ಆದ್ರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ.

ಹಾಗಿದ್ದರೆ ಇವರಿಗೆ ಪಾಸಿಟಿವ್ ಇದೆ ಎಂದು ಹೇಳಿದ್ದು ಯಾಕೆ, ಧಾರವಾಡ ಜಿಲ್ಲಾಡಳಿತಕ್ಕೆ ಹಾಗೂ ವಿಶೇಷವಾಗಿ ರಾಜ್ಯ ಸರಕಾರಕ್ಕೆ ಮನುಷ್ಯತ್ವ ಇದೆಯೇ ?  ಪಾಸಿಟಿವ್ ಬಂದರೆ ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ಜನ ಎಲ್ಲಿ ಹೋಗಬೇಕು.

ಸಮುದಾಯಕ್ಕೆ ಹರಡಿದೆ ಎಂದು ಸರಕಾರ ಕೈ ಚೆಲ್ಲಿದರೆ ಹೇಗೆ ಧಾರವಾಡ ಗ್ರಾಮೀಣ ಶಾಸಕರನ್ನ ಸಂಪರ್ಕಿಸಿದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.

ಹೀಗಾದರೆ ಕೋವಿಡ್ ಒಂದು ಮಾರಕ ಕಾಯಿಲೆ ಎಂದು ಎಲ್ಲರಿಗೂ ಗೊತ್ತಿದ್ದರೂ ಸೋಂಕಿತರಿಗೆ ಯಾವ ತರಹ ಆತ್ಮಸ್ಥೈರ್ಯ ಹಾಗೂ ಧೈರ್ಯ ತುಂಬುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ ಎಂದು ಜೆಡಿಎಸ್  ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಧಾರವಾಡ ತಹಸೀಲ್ದಾರ್ ಅವರಿಗೆ ಮಾಹಿತಿ ಇಲ್ಲ. ಧಾರವಾಡ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲವೇ.  ಗ್ರಾಮ ಪಂಚಾಯಿತಿಯವರು ಆಶಾ ಕಾರ್ಯಕರ್ತೆಯರ ಮಾಹಿತಿ ಆಧರಿಸಿ ಸೀಲ್ ಡೌನ್ ಮಾಡಿದ್ದಾರೆ.

ಆರೋಗ್ಯ ಇಲಾಖೆ ಪಾಸಿಟಿವ್ ಬಂದಿದ್ದು ನಿನ್ನೇ ಹೇಳಿದ್ದರೂ ಕೂಡ ಧಾರವಾಡ ತಹಸೀಲ್ದಾರ್ ಹಾಗೂ  ಜಿಲ್ಲಾಡಳಿತದ ಗಮನಕ್ಕೆ ಬಾರದೆ ಇರುವುದು ಅಚ್ಚರಿಯ ಸಂಗತಿ.

ಸೋಂಕಿತನನ್ನು ಈವರೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗದಿರುವುದು ನೋವಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.   

 ನಿನ್ನೇ ಸೋಂಕು ಬಂದರೂ ಇವತ್ತು ಕರೆದುಕೊಂಡು ಹೋಗಿಲ್ಲ ಎಂದರೆ ಏನರ್ಥ. ನಿನ್ನೇ ಒಬ್ಬ ಯುವಕನಿಗೆ ಬಂದಿದೆ. ಇಂದು ಒಬ್ಬ ಮಹಿಳೆಗೆ ಬಂದಿದೆ.

ವನಹಳ್ಳಿ ಗ್ರಾಮದ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಇನ್ನೂ ಎರಡು ಮೂರು ಜನರ ವರದಿ ಬರಬೇಕಿದೆ. ಇದರಿಂದಾಗಿ ಇಡೀ ಊರು ಗಾಬರಿಗೊಂಡಿದೆ.

ಈ ಇಬ್ಬರು ಸೋಂಕಿತರು ಇಡೀ ಗ್ರಾಮ ಸಂಚರಿಸಿದ್ದಾರೆ. ಅವರ ಸಂಪರ್ಕದಿಂದ ಗ್ರಾಮಕ್ಕೆ ಆತಂಕ ಕಾದಿದೆಯಾ ಎಂಬ ಪ್ರಶ್ನೆ ಎದುರಾಗಿದೆ ಎಂದು ಗಂಗಾಧರ ಪಾಟೀಲ ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.

 ನಮ್ಮನ್ನು ನಾವು ಕಾಪಾಡಿಕೊಳ್ಳಲು ಪ್ರಯತ್ನಿಸಿದರೂ ಸರಕಾರ ನಮ್ಮನ್ನು ರಕ್ಷಿಸಲು ಮುಂದಾಗದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಮೊರಬ ಬಂದಾಗಲೇ ಹೆಬ್ಬಳ್ಳಿ ಗ್ರಾಮಸ್ಥರು ಬಸ್ ಸಂಚಾರ ಸ್ಥಗಿತಗೊಳಿಸಿದ್ದರು.

ಸೋಮಾಪುರ ಬಂದ ಮೇಲೆ ನಾವು ಕೂಡ ಬಸ್ ಬಂದ್ ಮಾಡಿದ್ದೇವು. ಆದರೂ ಜನರ ಪರದಾಟ  ತಪ್ಪಲಿಲ್ಲ. ಹಳ್ಳಿಗಳ ಸಂಕಷ್ಟ ಹೇಳತೀರದು ಎಂದು ಹೇಳಿದರು.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *