ರಾಜ್ಯ

ರಾಜ್ಯದ ಸಾರಿಗೆ ನೌಕರರನ್ನು ಉಳಿಸಿ  ಅಭಿಯಾನ ಆರಂಭ….!

ಬೆಂಗಳೂರು prajakiran.com : ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾರಿಗೆ ನೌಕರರನ್ನು ಉಳಿಸಿ. ಸರಕಾರದಿಂದಲೇ ವೇತನ ಪಾವತಿ ಮಾಡಿ. ಮತ್ತು ಸರಿಯಾದ ಸಮಯಕ್ಕೆ ಮಾಡಿ.

ಸಾರಿಗೆ ನೌಕರರನ್ನು ಸರಕಾರಿ ನೌಕರಎಂದು ಘೋಷಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

ಸಾರಿಗೆ ನೌಕರರಿಗೆ ವೇತನ ನೀಡುವುದು ಸರಕಾರಕ್ಕೆ ಹೊರೆಯಲ್ಲ, ಸರಕಾರದ ಹೊಣೆ. ಇದು ನಮ್ಮ ಹಕ್ಕೊತ್ತಾಯ. ಈ ಘೋಷ ವಾಕ್ಯಗಳೊಂದಿಗೆ  ಜು.  ೧೯ ರಂದು ಮುಖ್ಯಮಂತ್ರಿಗಳಿಗೆ ಹಾಗೂ  ಸಾರಿಗೆ ಸಚಿವರಿಗೆ  ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಗೊಂಡಿದೆ.

ಈ ಅಭಿಯಾನಕ್ಕೆರಾಜ್ಯಾದಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸಾರಿಗೆಯ ನೌಕರರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ,     ಈ ಅಭಿಯಾನಕ್ಕೆಚಾಲನೆ ನೀಡಿದ್ದಾರೆ.

ಸಾಹಿತಿ ರಂಜಾನ್‌ದರ್ಗಾ ಮಾತನಾಡಿ, ಸಾರಿಗೆ ನೌಕರರನ್ನು ಇತರ ಸರಕಾರದ ನೌಕರರಂತೆ ಪರಿಗಣಿಸುವುದು ಕಾಲದ ಕರೆಯಾಗಿದೆ.

ಸಾರಿಗೆ ಸಂಸ್ಥೆ ಲಾಭ ಮಾಡುವ ಸಂಸ್ಥೆಯಲ್ಲ. ಸೇವಾ ಸಂಸ್ಥೆಯಾಗಿದೆ. ಅವರನ್ನು ಸಂಬಳವಿಲ್ಲದೇ ರಜೆಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಕೈಬಿಡಬೇಕು.

ಸಾರಿಗೆ ನೌಕರರನ್ನು ಉಪವಾಸ ಕೆಡವಿ ಖಜಾನೆ ಭದ್ರಪಡಿಸಿಕೊಳ್ಳುವುದು ನಾಗರಿಕ ಲಕ್ಷಣವಲ್ಲ ಎಂದರು.

ಬಿ.ಎಂ.ಟಿ.ಸಿ. ಮಾಜಿಅಧ್ಯಕ್ಷ ಎಂ.ನಾಗರಾಜು ಯಾದವ,  ತಮ್ಮ ಟ್ವೀಟಿನಲ್ಲಿ ಸಾರಿಗೆ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದಿರುವುದು ವಿಷಾದನೀಯ.

ಮುಖ್ಯಮಂತ್ರಿಗಳು ಈ ಕೂಡಲೇ ಸಾರಿಗೆ ನೌಕರರ ವೇತನ ಪಾವತಿಸುವಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳು, ಸಾರಿಗೆ ಸಚಿವರು  ಈ ಸಾಮಾಜಿಕ ಜಾಲತಾಣದ ಅಭಿಯಾನಕ್ಕೆ ಯಾವ ಪ್ರತಿಕ್ರೀಯೆ ವ್ಯಕ್ತಪಡಿಸುತ್ತಾರೆಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *