ರಾಜ್ಯ

ಹಾಸನ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಮಗಳು, ಮಗ ಸೇರಿ ಕುಟುಂಬದ ಐವರಿಗೆ ಸೋಂಕು

ಹಾಸನ prajakiran.com : ಹಾಸನ ಜಿಲ್ಲೆಯಲ್ಲಿ ಗುರುವಾರ 12 ಜನರಿಗೆ ಕರೋನ ಸೋಂಕು ವ್ಯಾಪಿಸಿದ್ದು, ಸೋಂಕಿತ ಪೊಲೀಸ್ ಕಾನ್ಸಟೇಬಲ್  ಪಿ-9576  ಸಂಪರ್ಕದಿಂದ ಆರು ಜನರಿಗೆ ಕರೊನಾ ವಕ್ಕರಿಸಿದೆ.

ಸೋಂಕಿತ ಪೇದೆಯ 3  ವರ್ಷದ ಮಗಳು, 8 ವರ್ಷದ ಮಗ, ಮಡದಿ‌, ಅತ್ತೆ ಹಾಗೂ ಮಾವನಿಗೂ ಕ್ರೂರಿ‌ ಕರೊನಾ ಹರಡಿದೆ.

ಆ ಮೂಲಕ ಒಂದೇ ಕುಟುಂಬದ ಐವರಿಗೆ ಸೋಂಕು ಹರಡಿರುವುದು ಗೊತ್ತಾಗಿದೆ.  ಪಿ-9576 ಪ್ರಾಥಮಿಕ ಸಂಪರ್ಕದಿಂದ ಕೆ.ಆರ್.ಪುರಂ ಠಾಣೆಯ ಮತ್ತೋಬ್ಬ ಪೊಲೀಸ್ ಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.



ರಜೆ ಮೇಲೆ‌ ಊರಿಗೆ ಬಂದಿದ್ದ ಸೈನಿಕನಿಗೂ ಕರೋನ :

ಜಿಲ್ಲೆಯಲ್ಲಿ ಇಂದು ಸೋಂಕಿತರಾದ  ಏಳು ಜನರಿಗೆ ಸ್ಥಳೀಯ ಸಂಪರ್ಕವಿದೆ. ಮುಂಬೈನಿಂದ ಬಂದ 4 ಹಾಗೂ ರಜೆ ಮೇಲೆ‌ ಊರಿಗೆ ಬಂದಿದ್ದ ಸೈನಿಕನಿಗೂ ಕರೋನ ಬಂದಿದೆ.

ಹಾಸನ ನಗರದ ಶುಂಠಿ ವ್ಯಾಪಾರಿಗೂ ಡೆಡ್ಲಿ ವೈರಸ್ ಹರಡಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ವರ್ತಕನಿಗೆ ಕರೊನಾ ಪಾಸಿಟಿವ್ ಬಂದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ.

ಹಾಸನದ ವಿವಿಧೆಡೆ ಓಡಾಡಿದ್ದ  ಶುಂಠಿ ವ್ಯಾಪಾರಿಯಿಂದ ಜನತೆ ಆತಂಕಗೊಂಡಿದ್ದಾರೆ. ಅವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು.



ಪರೀಕ್ಷೆ ನಡೆಸಿದಾಗ ಸೋಂಕು ಇರೋದು ದೃಢವಾಗಿದೆ. ಆ ಮೂಲಕ ಹಾಸನ ಜಿಲ್ಲೆಯಲ್ಲಿ 312 ಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಗುಣಮುಖರಾದ 236 ಮಂದಿ ಡಿಸ್ಚಾರ್ಜ್ ಆಗಿದ್ದು, ಸಕ್ರಿಯ 81 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಇಂದು ಜಿಲ್ಲೆಯಲ್ಲಿ ಎರಡು ಏರಿಯಾ ಕಂಟೋನ್ಮೆಂಟ್ ಘೋಷಣೆ ಮಾಡಲಾಗಿದೆ.

ಹಾಸನ ನಗರದ 1 ಹಾಗೂ ಆಲೂರು ತಾಲ್ಲೂಕಿನ 1 ಏರಿಯಾ ಕಂಟೋನ್ಮೆಂಟ್ ಇದೆ ಎಂದು ಹಾಸನದಲ್ಲಿ ಡಿಸಿ ಆರ್ ಗಿರೀಶ್ ಹೇಳಿಕೆ ನೀಡಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *