ಕೊಡಗು prajakiran.com : ಕೊಡಗು ಜಿಲ್ಲೆಯಲ್ಲಿ ಒಟ್ಟು 26 ಕರೋನಾ ಪ್ರಕರಣ ಆಗಿವೆ. ಗುರುವಾರ 4 ಪ್ರಕರಣಗಳು ಮತ್ತೆ ಬಂದಿವೆ. ಜಿಲ್ಲೆಯಲ್ಲಿ ಒಟ್ಟು 23 ಆಕ್ಟಿವ್ ಕರೋನಾ ವೈರಸ್ ಪ್ರಕರಣ ಇವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಅವರು ಗುರುವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕರೋನಾ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿಅಗತ್ಯ ಮುನ್ನಚ್ಚರಿಕೆಕೈಗೊಳ್ಳಲಾಗಿದೆ ಎಂದರು.
ಈವರೆಗೆ ಒಟ್ಟು 6323 ಸ್ವ್ಯಾಬ್ ಸಂಗ್ರಹಿಸಲಾಗಿದೆ. ಸೌದಿಯಿಂದ ಬಂದ ಇಬ್ಬರಿಗೆ ಪಾಸಿಟಿವ್ ಬಂದಿದೆ. ಬಿಟ್ಟಂಗಾಲದ ಮಹಿಳೆಗೆ ಪಾಸಿಟಿವ್ ಬಂದಿದೆ. ಆ ಮಹಿಳೆಗೆ ಯಾವುದೇ ಟ್ರಾವಲ್ ಹಿಸ್ಟರಿಯೇ ಇಲ್ಲ ಎಂದರು.
ಜನರಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 3 ವೈದ್ಯರು, ಅವರ ಜೊತೆಗೆ ಖಾಸಗಿ ಕ್ಲಿನಿಕ್ ಸಿಬ್ಬಂದಿಗೂ ಪಾಸಿಟಿವ್ ಬಂದಿದೆ ಎಂದು ವಿವರಿಸಿದರು.
ಒಟ್ಟು 7 ವೈದ್ಯಕೀಯ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಅಶ್ವಿನಿ ಆಸ್ಪತ್ರೆ ಸ್ಯಾನಿಟೈಸರ್ ಮಾಡಲಾಗಿದೆ. ಕುಶಾಲನಗರದ ಮೆಡಿಕಲ್ ಒಂದರ ಸಿಬ್ಬಂದಿಗೂ ಪಾಸಿಟಿವ್ ಬಂದಿದೆ ಎಂದು ವಿವರಿಸಿದರು.
ಇದುವರೆಗೆ ಕೊಡಗು ಜಿಲ್ಲೆಯಲ್ಲಿ 12 ಕಂಟೈನ್ಮೆಂಟ್ ಝೋನ್ ಆಗಿವೆ ಎಂದು
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.