p h neeralkeri
ರಾಜ್ಯ

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ನಿರ್ಮಾಣ ನಿಯಮ ಉಲ್ಲಂಘನೆ ಸ್ಪಷ್ಟ

ನಂದಿ ಇನ್ಪಾಸ್ಟ್ರಕ್ಷರ್ ಕಂಪನಿಗೆ ಈವರೆಗೆ 5 ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಅಶೋಕ ಖೇಣಿ

ಫೆ. 19ರಿಂದ ಮಾ. 18ರ ವರೆಗೆ ಟೋಲ್ ಬಹಿಷ್ಕಾರ ಅಭಿಯಾನ ಅವಳಿನಗರದ ಜನತೆ ಕೈ ಜೋಡಿಸಲು ಪಿ.ಎಚ್. ನೀರಲಕೇರಿ ಮನವಿ

ಮಾ. 21ರಂದು ನರೇಂದ್ರ ಬೈ ಪಾಸ್ ನಿಂದ ಗಬ್ಬೂರ ಕ್ರಾಸ್ ವರೆಗೆ
ಸ್ವಾಭಿಮಾನ ಪಾದಯಾತ್ರೆಗೆ ನಿರ್ಧಾರ

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡಅವಳಿ ನಗರ ವ್ಯಾಪ್ತಿಯಲ್ಲಿ ಬರುವ ಬೈಪಾಸ್ ರಸ್ತೆ ನಿರ್ಮಾಣ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.

ಈ ಬಗ್ಗೆ ನಂದಿ ಇನ್ಪಾಸ್ಟ್ರಕ್ಷರ್ ಕಂಪನಿಗೆ ಈವರೆಗೆ 5 ನೋಟಿಸ್ ನೀಡಿದರೂ ಅದರ ಮಾಲೀಕ ಅಶೋಕ ಖೇಣಿ ಕ್ಯಾರೆ ಎನ್ನದಿರುವುದು ಬೆಳಕಿಗೆ ಬಂದಿದೆ ಎಂದು ಹೈಕೋರ್ಟ್ ವಕೀಲರು ಆಗಿರುವ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ತಿಳಿಸಿದರು.

ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೈ ಜೋಡಿಸಿರುವುದು ನೋವಿನ ಸಂಗತಿಯಾಗಿದೆ ಎಂದು ದೂರಿದರು.

ಈ ಹಿಂದೆ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ನಾರಾಯಣಸ್ವಾಮಿಅವರು ನಂದಿ ಹೈ ವೈ ಇನ್ಪಾಸ್ಟ್ರಕ್ಷರ್, ಹೆದ್ದಾರಿ ಪ್ರಾಧಿಕಾರದಅಧಿಕಾರಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದ್ದರು.

1998ರಲ್ಲಿ ಆರಂಭಗೊಂಡ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ವ್ಯಾಪ್ತಿ 15-20 ಹಳ್ಳಿಗಳು ಬರುತ್ತವೆ. ಒಟ್ಟು 12000 ಜಾನುವಾರುಗಳು ಈವರೆಗೆ ಸಾವನ್ನಪ್ಪಿವೆ.

ಭಾರತ್ ಪೋರ್ಚ್ ಪುಣೆ ಕಂಪನಿ, ನಂದಿ ಇನ್ಪಾಷ್ಟಕ್ಷರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಡುವೆ ನಡೆದ ಈ ಒಪ್ಪಂದದಲ್ಲಿ ಅಶೋಕ ಖೇಣಿ ಹಿತವನ್ನು ಕಾಪಾಡಲಾಗಿದೆ.

ಹೊರತು ಸಾರ್ವಜನಿಕರ ರಕ್ಷಣೆ, ಈ ರಸ್ತೆಯಿಂದ ಜನರಿಗೆ ಅನಾನುಕೂಲ ಆದರೆ ಏನೂ ಮಾಡಬೇಕು, ಅಪಘಾತ ಸಂಭವಿಸಿದರೆ ಎನೂ ಮಾಡಬೇಕು, ಪರಿಹಾರ ನೀಡುವ ಬಗ್ಗೆ ಒಂದು ಶಬ್ದನೂ ಇಲ್ಲ ಎಂದು ಆಪಾಸಿದರು.

ಎನ್ ಹೆಚ್ 4ನ ಬೈ ಪಾಸ್ ಅಡಿ 403.8 ಕಿಮೀ ರಿಂದ 432. ಕಿ.ಮೀ. ರಸ್ತೆ ಬರುತ್ತದೆ. ಅದರಲ್ಲಿ ನಾಲ್ಕು ಟ್ರಕ್ ಲೈಪ್ ಬೈ ಬರುತ್ತದೆ. 26 ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

2018ರಲ್ಲಿ ಸಮಸ್ಯೆ ಬೆಳಕಿಗೆ ಬಂದಾಗ ಆಗಿನ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ನಾರಾಯಣಸ್ವಾಮಿಅವರೆ ಖುದ್ದು ಸಭೆ ಮಾಡಿ 13 ಸಮಸ್ಯೆ ಸರಿ ಮಾಡಲು ನೋಟಿಸ್ ನೀಡಲಾಗಿತ್ತು ಎಂದರು.

ಇದರಲ್ಲಿ ಪ್ರಮುಖವಾಗಿ ರಸ್ತೆ ಅಗಲೀಕರಣ ಮಾಡಿಲ್ಲ, ರಸ್ತೆ ಸುರಕ್ಷತಾ ನಿಯಮ ಪಾಲಿಸಿಲ್ಲ ಎಂದು ನೋಟಿಸ್ ನಲ್ಲಿ ವಿವರಿಸಲಾಗಿತ್ತು.

ಎರಡು ಬಾರಿ ನೋಟಿಸ್ ನೀಡಿದ ಬಳಿಕ ಸ್ಪಂದಿಸದ ಹಿನ್ನಲೆಯಲ್ಲಿ ಎರಡು ಬಾರಿ ಕಾನೂನು ತಜ್ಞರ ಅಭಿಪ್ರಾಯ ಪಡೆದು, ಈವರೆಗೆ ಒಟ್ಟು ಐದು ನೋಟಿಸ್ ನೀಡಲಾಗಿದೆ.

ಆದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಶೋಕ ಖೇಣಿ ಬಗ್ಗಿಲ್ಲ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಅವರನ್ನು ಡೊಗ್ಗಿಸಿಲ್ಲ. ಹೊರತು ಇವರೆ ಹೋಗಿ ಅವರ ಮುಂದೆ ಬಾಗಿದ್ದಾರೆ ಎಂದು ಕಿಡಿಕಾರಿದರು.

ಇದಲ್ಲದೆ, ಶೇಕಡಾ ಹತ್ತರಷ್ಟು ಟೋಲ್ ಸಂಗ್ರಹ ಶುಲ್ಕ ಹೆಚ್ಚಿಸಿದ್ದಾರೆ ಹೊರತು ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಮುಂದಾಗಿಲ್ಲ.

ಹಲವು ಬಾರಿ ಪರವಾನಿಗೆ ಪಡೆಯದೆ ಶುಲ್ಕ ಹೆಚ್ಚಳ ಮಾಡಿಕೊಂಡ ಅಶೋಕ ಖೇಣಿ ಅಂಧಾ ದರಬಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆಸಿದ ಕೇಂದ್ರ ಸಚಿವರು ಆರು ಪಥದ ರಸ್ತೆ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದಕ್ಕಾಗಿ 1200 ಕೋಟಿ ರೂಪಾಯಿ ಯೋಜನೆ ರೂಪಿಸಿದ ಬಗ್ಗೆ ಜನಪ್ರತಿನಿಧಿಗಳ ಹೇಳುತ್ತಾರೆ.

ಆದರೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ
ಪ್ರಾಧಿಕಾರ, ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡಅವಳಿ ನಗರದ ವ್ಯಾಪ್ತಿಯ 33 ಕಿಲೋ ಮೀಟರ್ ರಸ್ತೆಯಲ್ಲಿ ಜಿಲ್ಲೆಯ ಅಧಿಕಾರಿಗಳು, ಯೋಜನೆ ಇಲಾಖೆಯ ವತಿಯಿಂದ ಸಮರ್ಪಕ ರೀತಿಯಲ್ಲಿ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಗೆ ಸಹ ನೀಡಿಲ್ಲ.

ಅಪಘಾತ ವಲಯದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಾಲಕನ ಅಜಾಗರೂಕತೆಯಿಂದ ಹಾಗೂ ವೇಗದ ಚಾಲನೆಯಿಂದ ದುರಂತ ಸಂಭವಿಸಿದೆ ಎಂದು ಸುಪ್ರೀಂ ಕೋರ್ಟ್ ಗೆ ವರದಿ ನೀಡಿದ್ದಾರೆ.

ಲೋಪದೋಷಗಳನ್ನು ಮುಚ್ಚಿಟ್ಟು ಸತ್ಯಾಂಶ ಮರೆಮಾಚಲು ಪ್ರಯತ್ನ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಂದಿ ಕಂಪನಿ ಪರ ವರದಿ ನೀಡಿದ್ದಾರೆ. ಇದು ನಮ್ಮ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾರ್ವಜನಿಕರ ನಿರ್ಲಕ್ಷ್ಯ ಅಂತಾನೂ ಹೇಳಲ್ಲ.

ಇವರೆಗೆ ಯಾವ ರೀತಿ ಸನ್ಮಾನ ಮಾಡಬೇಕು ಎಂಬುದು ನೀವೆ ಹೇಳಿ ಎಂದು ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಫೆ. 19ರಿಂದ ಮಾ.18ರವರೆಗೆ ಟೋಲ್ ಕೊಡಬ್ಯಾಡಿರಿ ಅಭಿಯಾನ : ಈ ಬೈ ಪಾಸ್ ವ್ಯಾಪ್ತಿ ಒಟ್ಟು ಆರು ಟೋಲ್ ಬರುತ್ತವೆ. ಹುಬ್ಬಳ್ಳಿ-ಧಾರವಾಡದ ka 25, ka 63 ವಾಹನ ಸವಾರರು ಟೋಲ್ ಕೊಡಬಾಡರಿ. ಅವರು ಸಂಗ್ರಹ ಮಾಡಬಾರದು ಎಂದು ನಂದಿ ಕಂಪನಿ ಗೆ ಹೆದ್ದಾರಿ ಪ್ರಾಧಿಕಾರದಅಧಿಕಾರಿಗಳು ಸೂಚನೆ ನೀಡಬೇಕು.

ಆ ಮೂಲಕ ಫೆ. 19ರಿಂದ ಮಾ. 19ರವರೆಗೆ ಒಂದು ತಿಂಗಳ ಕಾಲ ಟೋಲ್ ಬಹಿಷ್ಕಾರ ಮಾಡಿರಿ, ಯಾರು ದುಡ್ಡು ಕೊಡಬ್ಯಾಡರಿ ಆ ಮೂಲಕ ನಮ್ಮ ಅಭಿಯಾನಕ್ಕೆ ಬೆಂಬಲಿಸಿ ಎಂದು ಪಿ.ಎಚ್. ನೀರಲಕೇರಿ ಮನವಿ ಮಾಡಿದರು.

ಮಾ. 21ರಂದು ಸ್ವಾಭಿಮಾನ ಪಾದಯಾತ್ರೆ :
ಈ ಸಂಬಂಧ ಧಾರವಾಡದ ನರೇಂದ್ರ ಬೈ ಪಾಸ್ ನಿಂದ ಗಬ್ಬೂರ ಕ್ರಾಸ್ ವರೆಗೆ
ಸ್ವಾಭಿಮಾನ ಪಾದಯಾತ್ರೆ ಮಾಡುತ್ತೇವೆ.

ಆರು ತಿಂಗಳ ಒಳಗೆ ಟೆಂಡರ್ ಮುಗಿಸುವ ವರೆಗೆ ಎರಡು ಕಡೆ ಸರ್ವೀಸ್ ರಸ್ತೆ, ಎಳರಿಂದ ಎಂಟು ವರ್ಷ ಯೋಜನೆಗೆ ಸಮಯ ಹಿಡಿಯುತ್ತದೆ ಎಂದು ಕೇಂದ್ರ ಸಚಿವರಿಗೆ ಅಧಿಕಾರಿಗಳು ಹೇಳಿದ್ದಾರೆ.

ಹೀಗೆಯೇ ಪರಿಸ್ಥಿತಿ ಮುಂದುವರೆದರೆ ಜನರ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತದೆ. ಹೀಗಾಗಿ ಅವಳಿ ನಗರದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರತಿಯೊಂದು ವಾರ್ಡ್ ಹಾಗೂ ಹಳ್ಳಿಗಳಲ್ಲಿ ಸಭೆ ಮಾಡಿ, ಚೇಂಬರ್ ಆಫ್ ಕಾಮರ್ಸ್, ಸಾರ್ವಜನಿಕ ಸಂಘ ಸಂಸ್ಥೆಗಳ ಜೊತೆಗೆ ಚರ್ಚಿಸಿ ಹೋರಾಟದ ರೂಪುರೇಷ ನಿರ್ಧಾರ ಮಾಡಲಾಗುವುದು ಎಂದು ವಿವರಿಸಿದರು.

1979 ರಲ್ಲಿಯೇ ಈ ಯೋಜನೆಗೆ ಭೂ ಸ್ವಾಧೀನ ಮಾಡಲಾಗಿದೆ. ಇನ್ನೂ 60 ಮೀಟರ್ ಅಗಲದ ರಸ್ತೆ ಮಾಡಲು ಬರುತ್ತದೆ.

ಈ ಹಿಂದೆಯೇ ಇದಕ್ಕಾಗಿಯೇ 440 ಎಕರೆ ಭೂಸ್ವಾಧೀನ ಮಾಡಲಾಗಿದೆ. ಇದಲ್ಲದೆ ನಂದಿ ಕಂಪನಿಗೆ 50 ಎಕರೆ ಟ್ರಕ್ ಟರ್ಮಿನಲ್ ಗೆ ಭೂಮಿ ಕೊಡಲಾಗಿದೆ.

ಆದರೆ ಅದನ್ನು ಈವರೆಗೆ ಮಾಡಿಲ್ಲ ಎಂದು ಪಿ.ಎಚ್. ನೀರಲಕೇರಿ ಹೇಳಿದರು.
ಈ ಬಗ್ಗೆ ನಮ್ಮ ಜಿಲ್ಲಾಧಿಕಾರಿ ಕಚೇರಿ ಗೂ ಸರಿಯಾದ ಮಾಹಿತಿ ಇಲ್ಲ.

ನಾವು ಪಕ್ಷಾತೀತವಾಗಿ ಒಬ್ಬ ಜವಾಬ್ದಾರಿ ಯುತ ಪ್ರಜೆಯಾಗಿ ಹೋರಾಟ ಮಾಡ್ತಿವಿ ಎಂದು ಪಿ.ಎಚ್. ನೀರಲಕೇರಿ ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಅಧಿಕಾರಿಗಳು ಒಟ್ಟಾರೆ ಖೇಣಿ ಹಿತ ಕಾಯ್ದಾರ.

ಸರಕಾರಿ ಅಧಿಕಾರಿಗಳು ಅಂತ ಎಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಹಿಂದಿನ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣಗೂ ಕೊಟ್ಟಿಲ್ಲ ಎಂದರೆ ಖೇಣಿಯವರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಪಿ.ಎಚ್. ನೀರಲಕೇರಿ ವ್ಯಂಗ್ಯವಾಡಿದರು.

ಈ ಬೈಪಾಸ್ ರಸ್ತೆ ಒಟ್ಟು ವಿಸ್ತ್ರೀರ್ಣ 29.400 km
ಇದೆ. ಈ ಹಿಂದೆ ಸಿಬಿಐ ಪರ ವಕೀಲರು ಕೂಡ ಕೇಂದ್ರ ಸರ್ಕಾರಕ್ಕೆ ನಂದಿ ಕಂಪನಿಯ ನಿಯಮ ಉಲ್ಲಂಘನೆ ಕುರಿತು ವರದಿ ನೀಡಿದ್ದಾರೆ.

ಹಿರಿಯ ವಕೀಲರಾದ ಅಂಜಲಿ ಮೆನನ್ ಅವರು ಸವಿವರವಾಗಿ ವರದಿ ಸಲ್ಲಿಸಿದ್ದಾರೆ ಎಂದು ಹೈಕೋರ್ಟ ವಕೀಲ ಪಿ.ಎಚ್. ನೀರಲಕೇರಿ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲಗೌಡ ಕಮತರ, ರವಿ ಗೌಳಿ, ವಿಲ್ಸನ್ ಫರ್ನಾಂಡಿಸ್ ಐ.ಬಿ. ನಿಡಗುಂದಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *