ರಾಜ್ಯ

ಮಾಲೂರು ತಾಲೂಕಿನ ತೊರನಹಳ್ಳಿಯ ಇಬ್ಬರಿಗೆ ಪಾಸಿಟಿವ್

ಮಾಲೂರು prajakiran.com : ದಿನೇ ದಿನೇ ಇಡೀ ಕೋಲಾರ ಜಿಲ್ಲೆಯನ್ನೇ ಆವರಿಸಿಕೊಳ್ಳುತ್ತಿರುವ ಕೊರೋನಾ ಮಾರಿ ಮಾಲೂರು ತಾಲೂಕಿನ ಹಲವು ಹಳ್ಳಿಗಳಿಗೆ ಹಬ್ಬಿರುವ ಈ ವೈರಸ್ ತನ್ನ ಚಾಪನ್ನು ತಾಲೂಕಿನ ಉದ್ದಗಲಕ್ಕೂ ಹರಡಿಸುತ್ತಿದೆ.

ತಾಲ್ಲೂಕಿನ ಕಸಬಾ ಹೋಬಳಿ ತೊರನಹಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ.

38 ವರ್ಷದ ಮಹಿಳೆ  ಮತ್ತು 17 ವರ್ಷದ ಯುವಕನಿಗೆ ಈ ಸೋಂಕು ದೃಢಪಟ್ಟಿದೆ. ಇವರು ಮೇಡಹಳ್ಳಿ ಬಳಿ ತಮಗೆ ತಿಳಿದವರ ತೋಟವನ್ನು ಭೋಗ್ಯಕ್ಕೆ ತೆಗೆದುಗೊಂಡು ಬೆಳೆ ಬೆಳೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಇವರ ಸಂಪರ್ಕದಲ್ಲಿ ಇದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.  ಆರೋಗ್ಯಾಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ,  ಸೋಂಕಿತರ ಮನೆಯ ಸುತ್ತಮುತ್ತ ಕೊರೋನಾ ದ್ರಾವಣವನ್ನು ಸಿಂಪಡಿಸಿ ಸ್ವಚ್ಛ ಮಾಡಿದರು.

ಸದರಿ ಪ್ರದೇಶವನ್ನು ನಿಷೇಧಿತ ಪ್ರದೇಶ  ಎಂದು ಘೋಷಿಸಿ ಇಡೀ ಏರಿಯಾವನ್ನು ಸೀಲ್ ಡೌನ್ ಮಾಡಿದ್ದಾರೆ. ಜೊತೆಗೆ ಎಲ್ಲಾ ಜನರು ಎಚ್ಚರಿಕೆಯಿಂದ ಇರಬೇಕು

ಮಾಸ್ಕ್ ಧರಿಸಬೇಕು  ಹಾಗೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆಯಿಂದ ತೊರನಹಳ್ಳಿ ಗ್ರಾಮದಲ್ಲಿ ಅಗತ್ಯ ಸೇವೆಗಳಾದ ಹಾಲು, ತರಕಾರಿ ದಿನಸಿ, ಔಷಧಿ ಇತರ ತುರ್ತು  ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿಗಳು ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಮಾತ್ರ  ಕಾರ್ಯ ನಿರ್ವಹಿಸಲಿವೆ ಎಂದು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಎಂ.ಗೋಪಾಲ್ ರವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಲ್ ಕಲೆಕ್ಟರ್ ಎಂ.ನಾಗರಾಜ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಕೆ.ಮುನಿಶಾಮಪ್ಪ,  ಗ್ರಾಮ ಲೆಕ್ಕಿಗ ಶಿವಕುಮಾರ್, ತೊರನಹಳ್ಳಿ ಹಾಲಿನ ಡೈರಿಯ ಕಾರ್ಯದರ್ಶಿ ನಾರಾಯಣಸ್ವಾಮಿ, ಹೇಮಗಿರೀಶ.ವಿ, ಲಕ್ಷ್ಮಯ್ಯ, ವಾಟರ್ ಮೆನ್ ನಾಗರಾಜ, ಪಂಪ್ ಆಪರೇಟರ್  ಮುನಿರಾಜ, ಶ್ರೀನಿವಾಸ, ತೊರನಹಳ್ಳಿ ಗೋಪಾಲಕೃಷ್ಣ ಇತರರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *