ರಾಜ್ಯ

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕರೋನಾ ಅವ್ಯವಸ್ಥೆ ಆಗರ…..!





ಧಾರವಾಡ prajakiran.com : ಜಿಲ್ಲೆಯಾದ್ಯಂತ ಕರೋನಾ ದಿನದಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಹಿಂದೆಯೇ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆಯ ಆಗರವು ಹೆಚ್ಚುತ್ತಿದೆ.

ಕರೋನಾ ಸೋಂಕಿತರು ಹಾಗೂ ಶಂಕಿತರು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸ್ವಯಂ ಪ್ರೇರಿತವಾಗಿ ಯಾರಾದರೂ ತಪಾಸಣೆಗೆ ಮುಂದಾದರೆ ಅವರಿಗೆ ದೇವರೆ ಕಾಪಾಡಬೇಕು ಎನ್ನುವಂತಾಗಿದೆ.

ಹೌದು ಇದುಅಚ್ಚರಿ ಹಾಗೂಆತಂಕದ ಸಂಗತಿಯಾದ್ರೂ ನಂಬಲೇ ಬೇಕಾದ ಕಟು ಸತ್ಯ. ಈ ಬಗ್ಗೆ ಸ್ಥಳೀಯರೇ ಪ್ರಜಾಕಿರಣ.ಕಾಮ್ ಗೆ ಸವಿವರ ಮಾಹಿತಿಯನ್ನು ನೀಡಿದ್ದಾರೆ.



ಕರೋನಾ ತಪಾಸಣೆಗೆ ಭಾನುವಾರ ಬೆಳಗ್ಗೆ 8 ಗಂಟೆಯಿಂದಲೇ  ಹದಿನೈದು ಇಪ್ಪತ್ತು  ಜನ ಕಳೆದು ಎರಡೂವರೆ ಗಂಟೆಗೂ ಅಧಿಕ ಕಾಲದಿಂದ ಕಾದು ಕುಳಿತಿದ್ದಾರೆ.

10.30ಕ್ಕೆ ಆಗಮಿಸಿದ ಸಿಬ್ಬಂದಿಗೆ ಈ ಬಗ್ಗೆ ವಿಚಾರಿಸಿದರೆ ನಾವು ಬರುವುದೇ ಇಷ್ಟಕ್ಕೆ ಎಂದು  ಅವಾಜ್ ಬೇರೆ ಸಿಬ್ಬಂದಿ ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ತಪಾಸಣೆ ಇದೆ ಎಂದು ಜಿಲ್ಲಾಡಳಿತದ ಹೇಳಿಕೆ ಕೇವಲ ನಾಮಕಾವಾಸ್ತೆ ನಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ.



ಅಷ್ಟೇ ಅಲ್ಲದೆ, ಹತ್ತು ಜನರ ತಪಾಸಣೆ ದಾಖಲೆಗಳು ಸಿದ್ದಗೊಂಡಬಳಿಕವಷ್ಟೆ ತಪಾಸಣೆ ಆರಂಭಿಸಲಾಗುತ್ತದೆ. ಹಾಗಿದ್ದರೆ ಸೋಂಕಿತರನ್ನು ಶಂಕಿತರನ್ನು ಒಂದಾಗಿಸುವ ಹುನ್ನಾರವೇ ಇದು ಎಂದು ಕೆಲವರು ಪ್ರಶ್ನಿಸಿದ್ದಾರೆ.

ಒಬ್ಬ ಸೋಂಕಿತ ಹತ್ತಾರುಜನ ಶಂಕಿತರನ್ನು ಸುಲಭವಾಗಿ ಸೋಂಕಿತರನ್ನಾಗಿಸುವ ಕೆಲಸ ಇದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಯಾರೊಬ್ಬರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಹಿಂದೇಟು ಹಾಕುವ ಪರಿಸ್ತಿತಿ ನಿರ್ಮಾಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.



ಇನ್ನೂ ಜಿಲ್ಲಾಸ್ಪತ್ರೆಯಲ್ಲಿ ಕರೋನಾ ಸೋಂಕಿತರಿಗೆ ಬಳಿಸಿದ ಗ್ಲೋಸ್, ಮಾಸ್ಕ್ ಗಳನ್ನು ಎಲ್ಲಿ ಬೇಕಂದರಲ್ಲಿ ಎಸೆಯಲಾಗಿದೆ.

ಅವುಗಳ ವ್ಯವಸ್ಥಿತ ತ್ಯಾಜ್ಯವಿಲೇವಾರಿ ಆಗದಿರುವುದು ಕಂಡು ಸೋಂಕು ಹರಡುವ ಸಾಧ್ಯತೆಗಳಿವೆ.

ಜಿಲ್ಲೆಯ ಜನಪ್ರತಿನಿಧಿಗಳು ಜನರಿಗೆ ಧೈರ್ಯ ತುಂಬುವುದು, ವಸ್ತುಸ್ಥಿತಿಯ ಅವಲೋಕನ ನಡೆಸುವುದು.




ಅಧಿಕಾರಿಗಳಿಗೆ ಚುರುಕುಗೊಳಿಸುವುದು ಬಿಟ್ಟು  ತಮಗೆ ಕೋವಿಡ್ ಬಾರದಿರಲಿ ಎಂದು ಜನರಿಂದಲೇ ದೂರವಾಗಿ ಕೇವಲ ಸಭೆ ಹಾಗೂ ಪತ್ರಿಕೆಗಳಲ್ಲಿ ಮಿಂಚಿ ಮಾಯಾವಾಗುತ್ತಿರುವುದು ಜಿಲ್ಲೆಯ ದುರಂತ ಎಂದರೆ ತಪ್ಪಾಗಲಾರದು.

ಈ ಬಗ್ಗೆ ಧಾರವಾಡ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಜನರ ನೋವಿಗೆ ಸಂಕಷ್ಟಕ್ಕೆ ಗಂಭೀರವಾಗಿ ಸ್ಪಂದಿಸುತ್ತಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *