ರಾಜ್ಯ

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕರೋನಾ ಅವ್ಯವಸ್ಥೆ ಆಗರ…..!

ಧಾರವಾಡ prajakiran.com : ಜಿಲ್ಲೆಯಾದ್ಯಂತ ಕರೋನಾ ದಿನದಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಹಿಂದೆಯೇ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆಯ ಆಗರವು ಹೆಚ್ಚುತ್ತಿದೆ. ಕರೋನಾ ಸೋಂಕಿತರು ಹಾಗೂ ಶಂಕಿತರು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸ್ವಯಂ ಪ್ರೇರಿತವಾಗಿ ಯಾರಾದರೂ ತಪಾಸಣೆಗೆ ಮುಂದಾದರೆ ಅವರಿಗೆ ದೇವರೆ ಕಾಪಾಡಬೇಕು ಎನ್ನುವಂತಾಗಿದೆ. ಹೌದು ಇದುಅಚ್ಚರಿ ಹಾಗೂಆತಂಕದ ಸಂಗತಿಯಾದ್ರೂ ನಂಬಲೇ ಬೇಕಾದ ಕಟು ಸತ್ಯ. ಈ ಬಗ್ಗೆ ಸ್ಥಳೀಯರೇ ಪ್ರಜಾಕಿರಣ.ಕಾಮ್ ಗೆ ಸವಿವರ ಮಾಹಿತಿಯನ್ನು ನೀಡಿದ್ದಾರೆ. ಕರೋನಾ ತಪಾಸಣೆಗೆ ಭಾನುವಾರ ಬೆಳಗ್ಗೆ 8 ಗಂಟೆಯಿಂದಲೇ  ಹದಿನೈದು ಇಪ್ಪತ್ತು  ಜನ ಕಳೆದು […]

ರಾಜ್ಯ

ಧಾರವಾಡದಲ್ಲಿ ನಾಮಕಾವಾಸ್ತೆ ಸೀಲ್ ಡೌನ್ ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಕರೋನಾ ಅಟ್ಟಹಾಸ ಮುಂದುವರೆದ ಬೆನ್ನಹಿಂದೆಯೇ ಜಿಲ್ಲಾಡಳಿತದಿಂದ ನಾಮಕಾವಾಸ್ತೆ ಸೀಲ್ ಡೌನ್ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಹೌದು ಇದು ಅಚ್ಚರಿಯಾದ್ರೂ ನಂಬಲೇ ಬೇಕಾದ ಸತ್ಯ ಸಂಗತಿ. ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ತಗಡು, ಪೊಲೀಸ್ ಬ್ಯಾರಿಕೇಡ್ ಸೇರಿದಂತೆ ಹಲವು ನಿರ್ದಿಷ್ಟ ವಸ್ತುಗಳನ್ನು ಬಳಕೆ ಮಾಡಲು ಸೂಚಿಸಿದೆ. ಆದರೆ ಧಾರವಾಡದ ಸಂಪಿಗೆ ನಗರದ  ಕರೋನಾ ಸೋಂಕಿತರ ಮನೆಗೆ ಧಾರವಾಡ ಜಿಲ್ಲಾಡಳಿತ ತಗಡಿನಿಂದ ಸೀಲ್ ಡೌನ್ ಮಾಡುವ ಬದಲಿಗೆ ಗಿಡದ […]

ರಾಜ್ಯ

ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಮತ್ತೊಂದು ಯಡವಟ್ಟು ….!

ಧಾರವಾಡ prajakiran.com : ಕರೋನಾ ವಿಷಯವಾಗಿ ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಯಡವಟ್ಟಿನ ಮೇಲೆ ಯಡವಟ್ಟುಮಾಡುತ್ತಲೇ ಇದೆ. ಇತ್ತೀಚೆಗೆಷ್ಟೇ ಧಾರವಾಡದ ಹೆಬ್ಬಳ್ಳಿ ಅಗಸಿ ನಿವಾಸಿಗೆ ಮೊದಲು ಪಾಸಿಟಿವ್ ಅಂತ ಹೇಳಿ ಆನಂತರ ನಿಮ್ಮ ವರದಿ ಬಂದಿಲ್ಲ ಎಂಬ ಸಂದೇಶ ಕಳುಹಿಸಿ ಆ ಕುಟುಂಬಸ್ಥರು ಗೋಳು ಹೊಯ್ದುಕೊಂಡ ಬೆನ್ನಲ್ಲೇ ಮತ್ತೊಂದು ಯಡವಟ್ಟು ಧಾರವಾಡ ತಾಲೂಕಿನ ವನಹಳ್ಳಿಯಲ್ಲಿ ಮಾಡಿತ್ತು. 48 ಗಂಟೆಗಳ ಬಳಿಕ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡ ಹೋದ ಆರೋಗ್ಯ ಇಲಾಖೆ ಅದೇ ಗ್ರಾಮದ ಇನ್ನೊಬ್ಬ […]

ರಾಜ್ಯ

ವೈದ್ಯರ ನಿರ್ಲಕ್ಷ್ಯದಿಂದ ಕರೋನಾ ಸೋಂಕಿತ ಮಹಿಳೆಯ ಗರ್ಭಪಾತ

ರಾಯಚೂರು prajakiran.com : ವೈದ್ಯರ ನಿರ್ಲಕ್ಷ್ಯದಿಂದಾಗಿ ಕರೋನಾ ಸೋಂಕಿತ ಮಹಿಳೆಯ ಗರ್ಭಪಾತ ನಡೆದಿರುವ ದುರಂತ ರಾಯಚೂರು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಮೂರು ತಿಂಗಳ ಗರ್ಭೀಣಿ ಮಹಿಳೆ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿ ದಾಖಲಾಗಿದ್ದರು. ಅವರು ನಿನ್ನೇ ಮಧ್ಯಾಹ್ನ ರಕ್ತಸ್ರಾವ ದಿಂದ ಬಳಲುತ್ತಿದ್ದರು. ಈ ಬಗ್ಗೆ ತಕ್ಷಣ ವೈದ್ಯರಿಗೆ ಮಾಹಿತಿ ನೀಡಿದರೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿಯೇ ಅವರಿಗೆ ಗರ್ಭಪಾತವಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರಿಂದಾಗಿ ಆಕ್ರೋಶಗೊಂಡ ಸೋಂಕಿತರು ಊಟ ಬಿಟ್ಟು ಕೆಲ ಕಾಲ […]

ರಾಜ್ಯ

ಬಿಆರ್‌ಟಿಎಸ್ ವೈಫಲ್ಯ : ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ವಿರುದ್ದ ಆಕ್ರೋಶ

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಜಾರಿಗೆ ತಂದಿರುವ ಬಿಆರ್‌ಟಿಎಸ್ ಯೋಜನೆ, ನೆನೆಗುದಿಗೆ ಬಿದ್ದ ಬೈ ಪಾಸ್ ನಿರ್ಮಾಣ, ಗುಜರಾತ್ ನವರಿಗೆ ಯುಜಿಡಿ ಕಾಮಗಾರಿ ಹೀಗೆ ಅನೇಕ ಯೋಜನೆಗಳು ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳಿಗೆ ಕಿಕ್ ಬ್ಯಾಕ್ ನೀಡುವ ಯೋಜನೆಗಳಾಗಿವೆ ಹೊರತು ಜನರಿಗೆ ಉಪಯೋಗವಾಗಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು. ಅವರು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 600 ಕೋಟಿ ರೂ. ವೆಚ್ಚದಲ್ಲಿದ್ದ ಈ ಯೋಜನೆ ಸಿದ್ಧವಾಗಿದ್ದು, ಅದು 1200 ಕೋಟಿ […]

ರಾಜ್ಯ

ಕ್ವಾರಂಟಿನ್ ಮುಗಿಸಿ ಮನೆಗೆ ಹೋಗಿದ್ದ42 ಜನಕ್ಕೆ ಕರೋನಾ

ಕಲಬುರಗಿ prajakiran.com : ಸರಕಾರದ ಯಡವಟ್ಟಿನಿಂದ ಕ್ವಾರಂಟಿನ್ ಮುಗಿಸಿ ಮನೆಗೆ ಹೋಗಿದ್ದ42 ಜನಕ್ಕೆ ಕರೋನಾ ಬಂದಿರುವ ಘಟನೆ ಬಿಸಲನಾಡು ಕಲಬುರಗಿಯಲ್ಲಿ ನಡೆದಿದೆ. ಕೇಂದ್ರ ಸರಕಾರ ಕ್ವಾರಂಟಿನ್ ಅವಧಿಯನ್ನು 14 ದಿನಗಳಿಗೆ ಇಳಿಸಿದ್ದು,ಅದರಲ್ಲಿ ಸಾಂಸ್ಥಿಕ ಕ್ವಾರಂಟಿನ್ ಕೇವಲ 7 ದಿನಗಳಿಗೆ ಸೀಮಿತಗೊಳಿಸಿದೆ. ಹೀಗಾಗಿ ಕ್ವಾರಂಟಿನ್ ಅವಧಿ ಮುಗಿಸಿದ 42ಜನರಿಗೆ ಮಹಾಮಾರಿ ಕರೋನಾ ವಕ್ಕರಿಸಿರುವುದು ಕಲಬರುಗಿಯಲ್ಲಿ ಬೆಳಕಿಗೆ ಬಂದಿದೆ. ಇದರಿಂದಾಗಿ ಕ್ವಾರಂಟಿನ್ಅವಧಿ ಮುಗಿಸಿ ಮನೆಗೆ ತೆರಳಿದವರ ಮನೆಯವರನ್ನು ಕೂಡ ಈಗ ಕಲಬುರಗಿ ಜಿಲ್ಲಾಡಳಿತ ಕ್ವಾರಂಟಿನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಲಬುರಗಿ […]