ರಾಜ್ಯ

ಕ್ವಾರಂಟಿನ್ ಮುಗಿಸಿ ಮನೆಗೆ ಹೋಗಿದ್ದ42 ಜನಕ್ಕೆ ಕರೋನಾ

ಕಲಬುರಗಿ prajakiran.com : ಸರಕಾರದ ಯಡವಟ್ಟಿನಿಂದ ಕ್ವಾರಂಟಿನ್ ಮುಗಿಸಿ ಮನೆಗೆ ಹೋಗಿದ್ದ42 ಜನಕ್ಕೆ ಕರೋನಾ ಬಂದಿರುವ ಘಟನೆ ಬಿಸಲನಾಡು ಕಲಬುರಗಿಯಲ್ಲಿ ನಡೆದಿದೆ.

ಕೇಂದ್ರ ಸರಕಾರ ಕ್ವಾರಂಟಿನ್ ಅವಧಿಯನ್ನು 14 ದಿನಗಳಿಗೆ ಇಳಿಸಿದ್ದು,ಅದರಲ್ಲಿ ಸಾಂಸ್ಥಿಕ ಕ್ವಾರಂಟಿನ್ ಕೇವಲ 7 ದಿನಗಳಿಗೆ ಸೀಮಿತಗೊಳಿಸಿದೆ.

ಹೀಗಾಗಿ ಕ್ವಾರಂಟಿನ್ ಅವಧಿ ಮುಗಿಸಿದ 42ಜನರಿಗೆ ಮಹಾಮಾರಿ ಕರೋನಾ ವಕ್ಕರಿಸಿರುವುದು ಕಲಬರುಗಿಯಲ್ಲಿ ಬೆಳಕಿಗೆ ಬಂದಿದೆ.

ಇದರಿಂದಾಗಿ ಕ್ವಾರಂಟಿನ್ಅವಧಿ ಮುಗಿಸಿ ಮನೆಗೆ ತೆರಳಿದವರ ಮನೆಯವರನ್ನು ಕೂಡ ಈಗ ಕಲಬುರಗಿ ಜಿಲ್ಲಾಡಳಿತ ಕ್ವಾರಂಟಿನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.



ಕಲಬುರಗಿ ಜಿಲ್ಲೆಯ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 552ಕ್ಕೆ ಏರಿಕೆಯಾಗಿದೆ. ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದು, 42 ಜನ ಕ್ವಾರಂಟಿನ್ ಮುಗಿಸಿ ಮನೆಗೆ ಹೋಗಿದ್ದರು.

ವರದಿ ಬರುವ ಮುನ್ನವೇ ಅವರು ಮನೆಗೆ ಹೋಗಿದ್ದರು. ಹೀಗಾಗಿ ಅವರನ್ನು ಹುಡುಕಾಡಬೇಕಾದಅನಿವಾರ್ಯತೆ ಎದುರಾಗಿದೆ.

 ಆಯಾ ಗ್ರಾಮದ ಶಾಲೆಗಳಲ್ಲಿ ಕ್ವಾರಂಟಿನ್ ಮಾಡಲಾಗಿತ್ತು. ಅವರಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲಿ ಜನತೆ ಆತಂಕಗೊಂಡಿದ್ದು,  ಅನೇಕ ಕಡೆ ಅವರು ಓಡಾಡಿದ್ದರು ಎಂದುಅಳಲು ತೋಡಿಕೊಂಡಿದ್ದಾರೆ.

ಸರಕಾರದ ನಿರ್ಧಾರಗಳಿಂದ ಜನತೆ ಕಂಗಟ್ಟಿದ್ದಾರೆ. ಕರೋನಾ ಟೆಸ್ಟ್ ಅವಶ್ಯಕತೆ ಇಲ್ಲ. ಸೋಂಕಿತರಿದ್ದವರಿಗೆ ಮಾತ್ರ ಟೆಸ್ಟ್ ಎಂಬ ನಿಯಮಗಳು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *