ರಾಜ್ಯ

ಬೈಲಹೊಂಗಲ ಶಾಸಕರಿಗೂ ಕರೋನಾ ಪಾಸಿಟಿವ್….!

ಬೈಲಹೊಂಗಲ prajakiran,com : ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕೂಡ ಮಹಾಮಾರಿ ಕರೋನಾ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಈ ನಡುವೆ ಬಿಜೆಪಿಯ ಬೈಲಹೊಂಗಲ ಶಾಸಕರಿಗೆ ಕರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಇದರಿಂದಾಗಿ ಅವರ ಜೊತೆ ಸಭೆ ನಡೆಸಿದ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಹೋಂ ಕ್ವಾರಂಟೈನ್ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಬೈಲ್ ಹೊಂಗಲ ಲಾಕ್ ಡೌನ್ ಹಿನ್ನಲೆಯಲ್ಲಿ ಸತತವಾಗಿ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಶಾಸಕರಿಗೆ […]

ರಾಜ್ಯ

ವಿಜಯಪುರದಲ್ಲಿ ಆತಂಕ‌ ಸೃಷ್ಠಿಸಿದ  ಸೀಲ್ ಹಾಕಿದ್ದ ವ್ಯಕ್ತಿ ಓಡಾಟ….!

 ವಿಜಯಪುರ prajakiran.com : ಕೈಗೆ ಕ್ವಾರಂಟೈನ್ ಸೀಲ್ ಹೊಂದಿದ ವ್ಯಕ್ತಿಯ ಓಡಾಟದಿಂದ ಕೆಲ ಕಾಲ ವಿಜಯಪುರ ನಗರದಲ್ಲಿ ಜನತೆ ಭಯಭೀತರಾಗಿದ್ದ ಘಟನೆ ಬುಧವಾರ ನಡೆದಿದೆ. ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ನಗರದ ಬಡಿಕಮಾನ ರಸ್ತೆಯಲ್ಲಿನ ಮಿನಿ‌ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಕಾಣಿಸಿಕೊಂಡಿದ್ದ. ಇದರಿಂದಾಗಿ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ವ್ಯಕ್ತಪಡಿಸಿ ಜನತೆ ಕಳವಳ ವ್ಯಕ್ತಪಡಿಸಿದರು. ಇತ ಹೋಂ ಕ್ವಾರಂಟೈನ್ ನಲ್ಲಿದ್ದನೋ ಅಥವಾ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದನೋ ಎಂಬುದು ಗೊತ್ತಾಗಿಲ್ಲ. ಸೀಲ್ […]

ರಾಜ್ಯ

ಹಾವೇರಿಯಲ್ಲಿ ಮದುವೆ ಮನೆಗೆ ವಕ್ಕರಿಸಿದ ಕರೋನಾ ….!

ಹಾವೇರಿ prajakiran.com : ತಾಳಿ ಕಟ್ಟುವ ಶುಭ ಗಳಿಗೆ ವೇಳೆ ಕರೋನಾ ವೈರಸ್ ಸೋಂಕು  ಕಂಡು ಬಂದ ಹಿನ್ನಲೆಯಲ್ಲಿ ಮದುವೆಗೆ ಬ್ರೇಕ್ ಬಿದ್ದ ಘಟನೆ ಏಲಕ್ಕಿ ನಗರ ಹಾವೇರಿಯಲ್ಲಿ ನಡೆದಿದೆ. ಇದರಿಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಮದುಮಗಳು ಸೇರಿ 20 ಜನರಿಗೆ  ಕ್ವಾರಂಟಿನ್ ಗೆ ಒಳಪಡಿಸಲಾಗಿದೆ ಎಂದು ಹಾವೇರಿ ಜಿಲ್ಲಾಡಳಿತ ತಿಳಿಸಿದೆ. ಮದುಮಗಳ ಸಂಬಂಧಿ ಮಹಿಳೆ ಕರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ನಿನ್ನೇ ರಾತ್ರಿಯೇ ಎಲ್ಲ 20 ಜನರನ್ನು ಕ್ವಾರಂಟಿನ್ ಮಾಡಲಾಗಿದೆ. ಅಲ್ಲದೆ, ಭಾನುವಾರ ನಡೆಯಬೇಕಿದ್ದ ಮದುವೆಯನ್ನು […]

ರಾಜ್ಯ

ಪಿಎಸ್‌ಐ ಭೇಟಿ ನೀಡಿದ್ದ ಧಾರವಾಡದ ಉಪನಗರ ಪೊಲೀಸ್ ಠಾಣೆ ಸ್ಯಾನಿಟೈಸೇಶನ್

ಧಾರವಾಡ prajakiran.com : ಬೆಂಗಳೂರು ಮೂಲದ ಪಿಎಸ್‌ಐಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್‌ಐ ಭೇಟಿ ನೀಡಿದ್ದ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಧಾರವಾಡದ ಉಪನಗರ ಠಾಣೆಗೆ ಭೇಟಿ ನೀಡಿದ್ದ ಸೋಂಕಿತ ಪಿಎಸ್‌ಐ ಅಲ್ಲಿಯ ಸ್ಥಳೀಯ ಪಿಎಸ್‌ಐ ಒಬ್ಬರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿ, ಸೋಂಕಿತ ಪಿ ಎಸ್ ಐ ಅವರು ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಗಮಿಸುವಂತೆ ಕೋರಿದ್ದರು.   ಅದಕ್ಕಾಗಿ ಧಾರವಾಡದ ಉಪನಗರ ಪೊಲೀಸ್ ಠಾಣೆ ಪಿಎಸ್‌ಐಗೂ ಇದೀಗ ಧಾರವಾಡ […]

ರಾಜ್ಯ

ಕ್ವಾರಂಟಿನ್ ಮುಗಿಸಿ ಮನೆಗೆ ಹೋಗಿದ್ದ42 ಜನಕ್ಕೆ ಕರೋನಾ

ಕಲಬುರಗಿ prajakiran.com : ಸರಕಾರದ ಯಡವಟ್ಟಿನಿಂದ ಕ್ವಾರಂಟಿನ್ ಮುಗಿಸಿ ಮನೆಗೆ ಹೋಗಿದ್ದ42 ಜನಕ್ಕೆ ಕರೋನಾ ಬಂದಿರುವ ಘಟನೆ ಬಿಸಲನಾಡು ಕಲಬುರಗಿಯಲ್ಲಿ ನಡೆದಿದೆ. ಕೇಂದ್ರ ಸರಕಾರ ಕ್ವಾರಂಟಿನ್ ಅವಧಿಯನ್ನು 14 ದಿನಗಳಿಗೆ ಇಳಿಸಿದ್ದು,ಅದರಲ್ಲಿ ಸಾಂಸ್ಥಿಕ ಕ್ವಾರಂಟಿನ್ ಕೇವಲ 7 ದಿನಗಳಿಗೆ ಸೀಮಿತಗೊಳಿಸಿದೆ. ಹೀಗಾಗಿ ಕ್ವಾರಂಟಿನ್ ಅವಧಿ ಮುಗಿಸಿದ 42ಜನರಿಗೆ ಮಹಾಮಾರಿ ಕರೋನಾ ವಕ್ಕರಿಸಿರುವುದು ಕಲಬರುಗಿಯಲ್ಲಿ ಬೆಳಕಿಗೆ ಬಂದಿದೆ. ಇದರಿಂದಾಗಿ ಕ್ವಾರಂಟಿನ್ಅವಧಿ ಮುಗಿಸಿ ಮನೆಗೆ ತೆರಳಿದವರ ಮನೆಯವರನ್ನು ಕೂಡ ಈಗ ಕಲಬುರಗಿ ಜಿಲ್ಲಾಡಳಿತ ಕ್ವಾರಂಟಿನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಲಬುರಗಿ […]