ರಾಜ್ಯ

ಧಾರವಾಡದಲ್ಲಿ ಸಾಮಾಜಿಕ ಅಂತರದ ಪಾಲಿಸದ ಮೆಡಿಕಲ್ ಶಾಪ್ ಮಾಲೀಕನಿಗೆ ದಂಡ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಲಾಕ್ ಡೌನ್ ಆದೇಶಿಸಿದೆ.

ಸೋಮವಾರ ಕುಂದಗೋಳ ಪಟ್ಟಣಕ್ಕೆ ಧಾರವಾಡ ಜಿಲ್ಲಾ ಗ್ರಾಮೀಣ ಡಿವೈಎಸ್ಪಿ ರವಿ ನಾಯಕ ಭೇಟಿ ನೀಡಿ ಲಾಕ್ ಡೌನ್ ಕ್ರಮ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪಟ್ಟಣದ ಅಕ್ಷಯ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಆಫೀಸ್ ಮುಂದೆ ಸಿಲಿಂಡರ್ ಪಡೆಯಲು ಜನರು ಗುಂಪು ಸೇರಿರುವುದನ್ನ ಕಂಡು ಏಜೆನ್ಸಿ ಮಾಲೀಕನಿಗೆ ಮನೆ ಮನೆಗೆ ಹೋಗಿ ಸಿಲಿಂಡರ್ ಒದಗಿಸುವಂತೇ ತಾಕೀತು ಮಾಡಿದರು.

ಅಲ್ಲದೆ, ಯಾವುದೇ ಕಾರಣಕ್ಕೂ ಆಫೀಸ್ ನಲ್ಲಿ ಸಿಲಿಂಡರ್ ನೀಡದಂತೆ ತಿಳಿಸಿ ಲಾಕ್ ಡೌನ್ ಕ್ರಮ ವಿಫಲವಾಗಲು ಜನ ಬೈಕ್ ಸವಾರರು ಗ್ಯಾಸ್ ನೆಪದಲ್ಲಿ ಸಂಚರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  

ಇನ್ನು ಡಿವೈಎಸ್ಪಿ ಭೇಟಿ ನೀಡಿದ ಸಂದರ್ಭದಲ್ಲೇ ಪಟ್ಟಣದ ಮೆಡಿಕಲ್ ಶಾಪ್ ಮುಂದೆ ಸಾಮಾಜಿಕ ಅಂತರ ಮೀರಿ ಜಮಾಯಿಸಿದ್ದ ಜನರಿಗೆ ಇನ್ಸಪೆಕ್ಟರ್ ಬಸವರಾಜ ಕಲ್ಲಮ್ಮನವರ ಸಾಮಾಜಿಕ ಅಂತರದ ಪಾಲನೆ ತಿಳಿಸಿದರು.

ಅಲ್ಲದೆ, ಮೆಡಿಕಲ್ ಶಾಪ್ ಮಾಲೀಕನಿಗೆ ಸೂಕ್ತ ದಂಡ ವಿಧಿಸಿ, ಬಿಸಿ ತಾಕಿಸಿದರು ಪಟ್ಟಣದ ಮಾರ್ಕೇಟ್ ರಸ್ತೆ, ಬಸ್ ನಿಲ್ದಾಣ, ತಹಸೀಲ್ದಾರ ಕಚೇರಿ ರಸ್ತೆ, ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಸೇರಿದಂತೆ ಪಟ್ಟಣದ ವಿವಿಧೆಡೆ ಸಂಚರಿಸಿ ಡಿವೈಎಸ್ಪಿ ರವಿ ನಾಯಕ್ ಲಾಕ್ ಡೌನ್ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *