ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ ಮೂವರು ಕಳೆದ ಮೂರು ನಾಲ್ಕು ದಿನಗಳಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸಾವನ್ನಪ್ಪಿದ್ದ ಸೋಂಕಿತರನ್ನು ಧಾರವಾಡದ ಚರಂತಿಮಠ ಗಾರ್ಡನ್ ನಿವಾಸಿ ಪಿ 28462 ನೇ ಸೋಂಕಿತ 73 ವರ್ಷದ ವೃದ್ದ ಜುಲೈ 6 ರಂದು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ದಾಖಲಾಗಿದ್ದರು. ಅವರು ಜುಲೈ 7 ರಂದು ಸಾವನ್ನಪ್ಪಿದ್ದಾರೆ.
ಅದೇ ರೀತಿ ಹುಬ್ಬಳ್ಳಿಯ ಕೇಶ್ವಾಪುರದ ಸುಭಾಸ ನಗರ ನಿವಾಸಿ ಪಿ-35294 ನೇ ಸೋಂಕಿತ 54 ವರ್ಷದ ವ್ಯಕ್ತಿ ಜುಲೈ 8 ರಂದು ಚಿಕಿತ್ಸೆಗೆ ದಾಖಲಾಗಿದ್ದರು. ಅವರು ಜುಲೈ 9 ರಂದು ಮೃತಪಟ್ಟಿದ್ದಾರೆ.
ಧಾರವಾಡದ ಗಾಂಧಿನಗರ ನಿವಾಸಿ ಪಿ-35295 ನೇ ಸೋಂಕಿತ 58 ವರ್ಷದ ವ್ಯಕ್ತಿ ಚಿಕಿತ್ಸೆಗಾಗಿ ಜುಲೈ 8 ರಂದು ದಾಖಲಾಗಿದ್ದರು. ಅವರು ಜುಲೈ 9 ರಂದು ನಿಧನರಾಗಿದ್ದಾರೆ.
ಈ ಮೂವರು ವ್ಯಕ್ತಿಗಳ ಪಾರ್ಥಿವ ಶರೀರಗಳನ್ನು ಕೋವಿಡ್ 19 ನಿಯಮಾನುಸಾರ ಪ್ಯಾಕಿಂಗ್ ಮಾಡಿ, ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ ಕರೋನಾದಿಂದ 32 ಜನ ಮೃತಪಟ್ಟಿದ್ದಾರೆ.