ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶನಿವಾರ 3 ಸಾವು, 77 ಜನರಿಗೆ ಕರೋನಾ





ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಸಂಜೆ ಮತ್ತೆ ಹೊಸದಾಗಿ 77  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.

 ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 959 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. 

ಧಾರವಾಡ ಜಿಲ್ಲೆಯಲ್ಲಿ ಶನಿವಾರ  ಚಿಕಿತ್ಸೆ ಫಲಿಸದೆ  ಮೂವರು ಸಾವನ್ನಪ್ಪಿದ್ದರೆ, ಈವರೆಗೆ 32 ಜನ ಸಾವನ್ನಪ್ಪಿದ್ದಾರೆ.



18  ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಶನಿವಾರ 12 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ 318 ಜನ ಬಿಡುಗಡೆಯಾಗಿದ್ದಾರೆ. ಇನ್ನೂ 609 ಸಕ್ರಿಯ ಕರೋನಾ ಸೋಂಕಿತರು ಜಿಲ್ಲೆಯಲ್ಲಿದ್ದಾರೆ. ಎಂದು ವಿವರಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಜು.11 ರಂದು  5 ಜನರಿಗೆ ಕರೋನಾ ಹೇಗೆ ಹರಡಿದೆ ಎಂಬುದರ ಸಂಪರ್ಕ ಪತ್ತೆಯಾಗದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. 



(ಐಎಲ್ ಐ) ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ  ಜು. 11 ರಂದು 48 ಜನರಿಗೆ ಗಂಟಲು ದ್ರವ ತಪಾಸಣೆ ನಡೆಸಿದಾಗ  ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ  ಜು. 11 ರಂದು  5 ಸಾರಿ ಕೇಸ್  ದೃಢಪಟ್ಟಿವೆ. ಅಂತರ್ ಜಿಲ್ಲೆಯ ಪ್ರಯಾಣದಿಂದ  ಇಬ್ಬರಿಗೆ  ಸೋಂಕು ವಕ್ಕರಿಸಿದೆ.  ಕರೋನಾ ಸಂಪರ್ಕಿತರಿಂದ 17 ಜನರಿಗೆ ಹರಡಿದೆ.

 ಸಾವನ್ನಪ್ಪಿದವರ ವಿವರ :  ಪಿ- 28462 ಸೋಂಕಿತ 73  ವರ್ಷದ ವೃದ್ದ ಹಾಗೂ ಪಿ- 35294 ಸೋಂಕಿತ  54  ವರ್ಷದ ವ್ಯಕ್ತಿ, ಪಿ-35295 ಸೋಂಕಿತ 58 ವರ್ಷದ ವ್ಯಕ್ತಿ ಮೂವರು ಸಾರಿ ಕೇಸ್ ನಿಂದ ಬಳಲುತ್ತಿದ್ದರು. ಇವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *