ಬೆಂಗಳೂರು Prajakiran.com : ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ರಾಸಲೀಲೆ ಪ್ರಕರಣ ಈಗ ದೊಡ್ಡ ಟ್ವಿಸ್ಟ್ ಪಡೆದುಕೊಂಡಿದೆ.
ಆ ವಿಡಿಯೋದಲ್ಲಿ ಯುವತಿಯೊಡನೆ ಇರುವುದು ನಾನಲ್ಲ ಎನ್ನುತ್ತಿದ್ದ ಸಾಹುಕಾರ್ ಇದೀಗ ಉಲ್ಟಾ ಹೊಡೆದು, ವಿಡಿಯೋದಲ್ಲಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆ.
ಹೌದು, ವಿಡಿಯೋದಲ್ಲಿರುವ ಯುವತಿ ನನಗೆ ಪರಿಚಯ. ಪ್ರಾಜೆಕ್ಟ್ ವಿಚಾರವಾಗಿ ನನ್ನ ಭೇಟಿಯಾಗಿದ್ದರು.
ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಬೆಳಸಿದ್ದೆ. ವಿಡಿಯೋ ನನಗೆ ಗೊತ್ತಿಲ್ಲದೆ ರೆಕಾರ್ಡ್ ಮಾಡಲಾಗಿದೆ ಎಂದು ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇಲ್ಲಿಯವರೆಗೂ ವಿಡಿಯೋ ದಲ್ಲಿರುವುದು ನಾನಲ್ಲ, ಅದು ಎಡಿಟ್ ಮಾಡಿದ ವಿಡಿಯೋ ಎನ್ನುತ್ತಿದ್ದ ಸಾಹುಕಾರ್ ಇದೀಗ ವಿಡಿಯೋದಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಬರುವ ದಿನಗಳಲ್ಲಿ ಈ ಕೇಸ್ ಎಲ್ಲಿಗೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.