ರಾಜ್ಯ

ಧಾರವಾಡದ ಪ್ರತಿಷ್ಟಿತ ಮಕ್ಕಳ ವೈದ್ಯನಿಗೂ ಕರೋನಾ ನಂಟು ….!

ಧಾರವಾಡ prajakiran.com : ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಹೊಸದಾಗಿ 8  ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಧಾರವಾಡದ ಸಾಧನಕೇರಿಯ ಶಿಕ್ಷಕಿಯ ಕುಟುಂಬದ ನಾಲ್ವರಿಗೂ ಮಹಾಮಾರಿ ಕರೋನಾ ಸೋಂಕು ವಕ್ಕರಿಸಿದೆ ಎಂದು ತಿಳಿದುಬಂದಿದೆ.

ಸೋಂಕಿತರನ್ನು DWD 156 –  ಪಿ-  7378   (12 ವರ್ಷ,ಗಂಡು ಮಗು) ,  DWD – 157  ಪಿ- 7379   ( 75 ವರ್ಷ ,ಮಹಿಳೆ ) DWD 158 ಪಿ-7380 ( 83 ವರ್ಷ,ಪುರುಷ ) DWD 159 ಪಿ -7381 ( 12 ವರ್ಷ, ಗಂಡು ಮಗು ) ಈ ನಾಲ್ಕು ಜನ  ಧಾರವಾಡ ಸಾಧನಕೇರಿ ಒಂದನೇ ಕ್ರಾಸ್ ನಿವಾಸಿಗಳು, ಪಿ-6835 ಅವರೊಂದಿಗೆ ಸಂಪರ್ಕ ಹೊಂದಿದ್ದರು.



ಇದೇ ವೇಳೆ ಧಾರವಾಡದ ಪ್ರತಿಷ್ಠಿತ ಮಕ್ಕಳ ತಜ್ಞ ವೈದ್ಯನಿಗೆ ಕರೋನಾ ದೃಢಪಟ್ಟಿದೆ ಎನ್ನಲಾಗಿದೆ. ಇದು ಧಾರವಾಡ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಇವರು ಪ್ರತಿ ನಿತ್ಯ ಹಲವು ಮಕ್ಕಳ ಆರೋಗ್ಯ ತಪಾಸಣೆ ಜೊತೆಗೆ ಹಲವು ಆಸ್ಪತ್ರೆಗೆ ಭೇಟಿ ನೀಡುವ ವೈದ್ಯರಾಗಿದ್ದಾರೆ. ಹೀಗಾಗಿ ಧಾರವಾಡ ಜಿಲ್ಲಾಡಳಿತಕ್ಕೂ ಈ ಪ್ರಕರಣ ತಲೆಬಿಸಿಯಾಗಿದೆ.

ಸೋಂಕಿತರನ್ನು DWD-160 ಪಿ-7382 (57 ವರ್ಷ, ಪುರುಷ) ಇವರು ಧಾರವಾಡ ನಾರಾಯಣಪೂರ ನಿವಾಸಿ ಪಿ. 6836 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-161 ಪಿ-7383 ( 57 ವರ್ಷ, ಪುರುಷ) ಮಹಾರಾಷ್ಟ್ರ ರಾಜ್ಯದ ಹಿಂದಿರುಗಿದವರು. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.



DWD-162  ಪಿ-7384  ( 45 ವರ್ಷ, ಪುರುಷ ) ಇವರು ಹುಬ್ಬಳ್ಳಿ  ತಾರಿಹಾಳದ ರಾಮನಗರದ ನಿವಾಸಿ,  ಪಿ.6255 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-163 ಪಿ-7385 ( 49 ವರ್ಷ,ಪುರುಷ) ಇವರು ಕಲಘಟಗಿ ತಾಲ್ಲೂಕು ಮುತ್ತಗಿ ಗ್ರಾಮದವರು. ಗುಜರಾತಿನಿಂದ ರಾಜ್ಯಕ್ಕೆ ಹಿಂದಿರುಗಿದವರು.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 163  ಕ್ಕೆ ಏರಿಕೆಯಾಗಿದೆ. ಈಗಾಗಲೇ  50 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *