ಜಿಲ್ಲೆ

ಮಹಿಳೆರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಯೋಜನೆ

ಧಾರವಾಡ Prajakiran.com : ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ನೀಡಿದೆ. ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವಾರು ಯೋಜನೆ ರೂಪಿಸಿದೆ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಹಿಳಾ ಅಭಿವೃದ್ಧಿ ನಿರೀಕ್ಷಕರಾದ ನಂದಿನಿ ಕುಂಬಾರ ಹೇಳಿದರು. ಧಾರವಾಡದ ಪತ್ರೇಶ್ವರ ನಗರದಲ್ಲಿ ಪ್ರಮಿಳಾ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರು ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಲವು ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇಲಾಖೆ […]

ಜಿಲ್ಲೆ

ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ 11 ವರ್ಷಗಳ ಸಂಭ್ರಮ

ಧಾರವಾಡ prajakiran.com : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಸ್ತಿತ್ವಕ್ಕೆ ಬಂದು ಇಂದಿಗೆ 02.04.2021 ಕ್ಕೆ ಬರೋಬ್ಬರಿ 11 ವಸಂತಗಳು ತುಂಬಿವೆ‌. ಶಿಕ್ಷಣ ಕಾಶಿ ಎಂದು ಪ್ರಸಿದ್ಧಿ ಪಡೆದ ಧಾರವಾಡ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಧಾರವಾಡ ಶಹರ ವ್ಯಾಪ್ತಿಯಲ್ಲಿ ಕಚೇರಿ ಆಗಿರಲಿಲ್ಲ ಹಾಗಾಗಿ ಧಾರವಾಡ ಶಹರ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಪ್ರತಿಯೊಂದು ಕಚೇರಿ ಕೆಲಸಕ್ಕೆ ಹುಬ್ಬಳ್ಳಿಗೆ ತೆರಳಬೇಕಾಗಿತ್ತು. ವಾರ್ಷಿಕ ಬಡ್ತಿ ಸ್ವಯಂ ಚಾಲಿತ ಬಡ್ತಿ, ವೈದ್ಯಕೀಯ ರಜೆ ಗಳಿಕೆ ರಜೆ ಇನ್ನಿತರ ಕೆಲಸಗಳಿಗೆ ಹುಬ್ಬಳ್ಳಿಗೆ ಅಲೆದಾಡಬೇಕಾಗಿತ್ತು. […]

ಜಿಲ್ಲೆ

ಹಡಪದ ಅಪ್ಪಣ್ಣ ಸಮಾಜದ ಸಂಘಟನೆಯಿಂದ ವಿವಿಧ ಸಾಧಕರಿಗೆ ಸನ್ಮಾನ

ಧಾರವಾಡ: prajakiran.com : ಶಕ್ತಿಶಾಲಿ ಸಮಾಜ ಸಂಘಟನೆಯಿಂದ ಮಾತ್ರ ಸರಕಾರದ ಕಣ್ತೆರೆಸಲು ಸಾಧ್ಯ ಎಂದು ಶಾಸಕ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದವತಿಯಿಂದ ಬುಧವಾರ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಸಮಾಜದ ಸಂಘಟನೆ ಕುರಿತು ಚಿಂತನೆ, ನೂತನ ಗ್ರಾಮ ಪಂಚಾಯತ ಸದಸ್ಯರ ಹಾಗೂ ವಿವಿಧ ರಂಗದಲ್ಲಿನ ಸಾಧಕರ ಸನ್ಮಾನ ಸಮಾರಂಭ […]

ಜಿಲ್ಲೆ

ಧಾರವಾಡ ಜಿಲ್ಲೆಯ ವಿವಿಧ ಗ್ರಾ.ಪಂ.ಉಪಚುನಾವಣೆ ಮತದಾನ ಶಾಂತಿಯುತ

ಗ್ರಾ.ಪಂ.ಉಪಚುನಾವಣೆ; ಶೇ.80 ರಷ್ಟು ಮತದಾನ ಧಾರವಾಡ prajakiran.com : ಜಿಲ್ಲೆಯ ವಿವಿಧ ತಾಲೂಕಿನ ಮೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೆರವಾಗಿದ್ದ 13 ಸದಸ್ಯ ಸ್ಥಾನಗಳಿಗೆ ಇಂದು ಶಾಂತಿಯುತವಾಗಿ ಮತದಾನ ಜರುಗಿತು. ಶೇ.80.01 ರಷ್ಟು ಮತದಾನ ದಾಖಲಾಗಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ. ನವಲಗುಂದ ತಾಲೂಕಿನ ಬೆಳವಟಗಿ ಗ್ರಾ.ಪಂ.ನ ಅಮರಗೋಳದ ಎರಡು ಮತಕ್ಷೇತ್ರಗಳ ಏಳು ಸ್ಥಾನಗಳಿಗೆ ಜರುಗಿದ ಮತದಾನದಲ್ಲಿ 2357 ಮತದಾರರ ಪೈಕಿ 1843 ಜನ ಮತ ಚಲಾಯಿಸಿ ಶೇ.78.19 ಮತದಾನ […]

ಜಿಲ್ಲೆ

ರಸ್ತೆ, ಸರ್ಕಾರಿ ಭೂಮಿ ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸಿ ಜಿಲ್ಲಾಧಿಕಾರಿ ಸೂಚನೆ

ಧಾರವಾಡ prajakiran.com : ಸರ್ವೋಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ಆದೇಶದಂತೆ ಜಿಲ್ಲೆಯಲ್ಲಿ ವಿವಿಧ ಪ್ರಕಾರದ ರಸ್ತೆ, ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿ, ಅತಿಕ್ರಮಣ ಮಾಡಿ ನಿರ್ಮಿಸಿರುವ ದೇವಸ್ಥಾನ, ಮಸೀದಿ ಸೇರಿದಂತೆ ವಿವಿಧ ಧಾರ್ಮಿಕ ಕಟ್ಟಡಗಳು ಸೇರಿದಂತೆ ಎಲ್ಲ ರೀತಿಯ ಕಟ್ಟಡ, ಇತರೆ ನಿರ್ಮಾಣಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ.  ಒತ್ತುವರಿದಾರರು ಸ್ವಯಂ ಪ್ರೇರಣೆಯಿಂದ ಒತ್ತುವರಿ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಅತಿಕ್ರಮಣ ಹಾಗೂ […]

ಜಿಲ್ಲೆ

ಮಾ.26 ರಂದು ಜಿಲ್ಲಾಧಿಕಾರಿಗಳಿಂದ ನವಲಗುಂದ ತಾಲೂಕಿನ ಹೆಬ್ಬಾಳ, ಬಳ್ಳೂರದಲ್ಲಿ ಪಿಂಚಣಿ ಅದಾಲತ್

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ  ಧಾರವಾಡ prajakiran.com : ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ನಾಳೆ (ಮಾರ್ಚ್ 26) ಮಧ್ಯಾಹ್ನ ನವಲಗುಂದ ತಾಲೂಕಿನ ಹೆಬ್ಬಾಳ ಮತ್ತು ಬಳ್ಳೂರು ಗ್ರಾಮಗಳಿಗೆ ಸೀಮಿತವಾಗಿ ಈ ಗ್ರಾಮಗಳಲ್ಲಿ ಪಿಂಚಣಿ, ಕಂದಾಯ ಅದಾಲತ್ ಮತ್ತು ಜನಸಂಪರ್ಕ ಸಭೆಗಳನ್ನು ಆಯೋಜಿಸಿದ್ದಾರೆ. ಮಾ.26 ರಂದು ಮಧ್ಯಾಹ್ನ 3 ಗಂಟೆಗೆ ಹೆಬ್ಬಾಳ ಗ್ರಾಮಕ್ಕೆ ಆಗಮಿಸುವ ಜಿಲ್ಲಾಧಿಕಾರಿಗಳು ಗ್ರಾಮದ ಸಿದ್ಧಾರೂಢ ಮಠದಲ್ಲಿ ಪಿಂಚಣಿ, ಕಂದಾಯ ಅದಾಲತ್ ಮತ್ತು […]

ಜಿಲ್ಲೆ

ಮುಳಮುತ್ತಲ ಕಾಮಣ್ಣ ಪ್ರತಿಷ್ಠಾಪನೆ : ಸಾಮೂಹಿಕ ಅನ್ನ ಪ್ರಸಾದ ವಿತರಣೆ, ಮೆರವಣಿಗೆ ಮಾಡದಂತೆ ಸೂಚನೆ

ಧಾರವಾಡ prajakiran.com : ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಪ್ರತಿವರ್ಷ ಕಾಮಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮೂರು ದಿನಗಳವರೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಸೇರಿ ವಿಜೃಂಭಣೆಯಿಂದ ಕಾಮಣ್ಣನ ಹಬ್ಬ ಆಚರಿಸುತ್ತಾರೆ.  ಕೋವಿಡ್-19 ರ 2ನೇ ಅಲೆ ಆರಂಭವಾಗಿರುವುದರಿಂದ ಗುರುವಾರ ಸಂಜೆ (ಮಾ.25) ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಸಂತೋಷ ಬಿರಾದಾರ ಅವರ ಅಧ್ಯಕ್ಷತೆಯಲ್ಲಿ ಹೋಳಿ ಹಬ್ಬದ ಆಚರಣೆ ಕುರಿತ ಪೂರ್ವಭಾವಿ ಸಭೆಯು ಮುಳಮುತ್ತಲ ಗ್ರಾಮಸ್ಥರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಜರುಗಿತು. ಪ್ರತಿ ವರ್ಷದಂತೆ ಮುಳಮುತ್ತಲ […]

ಜಿಲ್ಲೆ

ಧಾರವಾಡದ ಜಿಲ್ಲಾಧಿಕಾರಿ “ನಡೆ ಹಲವು ಹಳ್ಳಿಯ ಕಡೆ”

ಧಾರವಾಡದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಧಾರವಾಡ ತಾಲೂಕಿನ ದಡ್ಡಿಕಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ ಪಿಂಚಣಿ, ಕಂದಾಯ ಅದಾಲತ್ ಹಾಗೂ* *ಜನಸಂಪರ್ಕ ಸಭೆ ಜರುಗಿಸಿದರು. *ಗ್ರಾಮವಾರು ಅರ್ಜಿ ವಿಲೇವಾರಿ ವಿವರ* : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11 ಗಂಟೆಗೆ ನಿಗದಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಂದ ಸುಮಾರು 21 ಅರ್ಜಿಗಳನ್ನು ಸ್ವೀಕರಿಸಿ 15 ಕ್ಕೂ ಹೆಚ್ಚು ಪ್ರಕರಣಗಳನ್ನು […]

ಜಿಲ್ಲೆ

ಬಿ ಆರ್ ಟಿ ಎಸ್ ರಸ್ತೆಯಲ್ಲಿ ಸಂಚರಿಸುವ ಬೈಕ್, ಕಾರ್ ಚಾಲಕರ ಮೇಲೆ ಪ್ರಕರಣ…..!

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮಾಸಿಕ ಸಭೆ ಬಿಆರ್‍ಟಿಎಸ್ ರಸ್ತೆಯ ಪುಟ್‍ಪಾತ್ ಒತ್ತುವರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಧಾರವಾಡ prajakiran.com ; ಕಳೆದ ಮೂರು ತಿಂಗಳಿನಿಂದ ಪ್ರತಿ ತಿಂಗಳು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಮಾಸಿಕ ಸಭೆಯನ್ನು ಆಯೋಜಿಸಿ ರಸ್ತೆ ಸುರಕ್ಷತೆಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಿಆರ್ ಟಿಎಸ್ ರಸ್ತೆಯ ಪುಟ್‍ಪಾತ್ ಒತ್ತುವರಿ ತೆರವು ಹಾಗೂ ಪುಟ್‍ಪಾತ್ ಅತಿಕ್ರಮಿಸಿ ನಿರ್ಮಿಸಿರುವ ವಿವಿಧ ರೀತಿಯ ಗೋಡೆ, ಕಟ್ಟಡ, ಬೋರ್ಡ್‍ಗಳನ್ನು ತೆರವುಗೊಳಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಸ್ತೆ […]

ಜಿಲ್ಲೆ

ಭಕ್ತಿ ಭಾವದಿಂದ ಜರುಗಿದ ತುಳಜಾ ಭವಾನಿ ಜಾತ್ರಾ ಮಹೋತ್ಸವ

ಧಾರವಾಡ Prajakiran.com : ನಗರದ ಹೆಬ್ಬಳ್ಳಿ ರಸ್ತೆಯಲ್ಲಿರುವ ಲಾಡ ಹಾಗೂ ಯಲಿಗಾರ ಸಮಾಜದ ತುಳಜಾ ಭವಾನಿ ದೇವಸ್ಥಾನದ 11 ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಧಾರವಾಡ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದ ಜೋತೆ ಪೂಣ೯ ಕುಂಭದೂಂದಿಗೆ ಸುಮಂಗಲಿಯರು  ಭಕ್ತಿ ಭಾವ ಮೆರೆದರು. ಜಾತ್ರಾ ಮಹೋತ್ಸವ ಹಾಗೂ ವಾರ್ಷಿಕೋತ್ಸವದ ಮುಂದಾಳತ್ವವನ್ನು ದೇವಸ್ಥಾನ ಮಂಡಳಿ ಅಧ್ಯಕ್ಷ ಪ್ರಕಾಶ ಎಲಿಗಾರ, ವಾಸುದೇವ ಎಲಿಗಾರ, ರವಿ ಎಲಿಗಾರ, ಎಮ್ ಎಸ್ ಹೋಳೆಹೂಸೂರ, ಅಶೋಕ ಕೋಟಬಾಗಿ, ವೆಂಕಟೇಶ ಅಸುಂಡಿ ಸೇರಿದಂತೆ […]