ಜಿಲ್ಲೆ

ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ 11 ವರ್ಷಗಳ ಸಂಭ್ರಮ

ಧಾರವಾಡ prajakiran.com : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಸ್ತಿತ್ವಕ್ಕೆ ಬಂದು ಇಂದಿಗೆ 02.04.2021 ಕ್ಕೆ ಬರೋಬ್ಬರಿ 11 ವಸಂತಗಳು ತುಂಬಿವೆ‌.

ಶಿಕ್ಷಣ ಕಾಶಿ ಎಂದು ಪ್ರಸಿದ್ಧಿ ಪಡೆದ ಧಾರವಾಡ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಧಾರವಾಡ ಶಹರ ವ್ಯಾಪ್ತಿಯಲ್ಲಿ ಕಚೇರಿ ಆಗಿರಲಿಲ್ಲ ಹಾಗಾಗಿ ಧಾರವಾಡ ಶಹರ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಪ್ರತಿಯೊಂದು ಕಚೇರಿ ಕೆಲಸಕ್ಕೆ ಹುಬ್ಬಳ್ಳಿಗೆ ತೆರಳಬೇಕಾಗಿತ್ತು.

ವಾರ್ಷಿಕ ಬಡ್ತಿ ಸ್ವಯಂ ಚಾಲಿತ ಬಡ್ತಿ, ವೈದ್ಯಕೀಯ ರಜೆ ಗಳಿಕೆ ರಜೆ ಇನ್ನಿತರ ಕೆಲಸಗಳಿಗೆ ಹುಬ್ಬಳ್ಳಿಗೆ ಅಲೆದಾಡಬೇಕಾಗಿತ್ತು.
ಇದು ಧಾರವಾಡ ಶಹರ ವ್ಯಾಪ್ತಿಯ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಸಮಸ್ಯೆಯಾಗಿತ್ತು.. ಈ ಕಾರಣದಿಂದ ಇಲ್ಲಿಯ ಸಮಸ್ತರು ಪ್ರತ್ಯೇಕ ಬಿ ಇ ಒ ಕಚೇರಿಗಾಗಿ ದಶಕಗಳಿಂದಲೂ ಮನವಿ ಮಾಡುತ್ತಲೇ ಇತ್ತು.

ಆದರೆ ಅದು ಕಾರ್ಯಗತವಾಗಿರಲಿಲ್ಲ 2010ರಲ್ಲಿ ಆಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿ ಎಲ್ಲರು ಮನವಿ ಮಾಡಿಕೊಂಡ ಪರಿಣಾಮವಾಗಿ ಶಿಕ್ಷಣ ಮಂತ್ರಿಗಳು ಈ ಭಾಗಕ್ಕೆ ಪ್ರತ್ಯೇಕ ಬಿಇಒ ಕಾರ್ಯಾಲಯ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು.

ದಿನಾಂಕ 02- 04 2010ರಂದು ನೂತನ ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಕಟ್ಟಡದ ಉದ್ಘಾಟನೆಯನ್ನು ಅಂದಿನ ಶಿಕ್ಷಣ ಮಂತ್ರಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನೆರವೇರಿಸಿದ್ದರು.

ವಿಧಾನಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಿಕ್ಷಣ ಮಂತ್ರಿ ಬಸವರಾಜ್ ಹೊರಟ್ಟಿ, ಸಂಸದರಾದ ಪ್ರಹ್ಲಾದ್ ಜೋಶಿ . ಶಾಸಕಿ ಸೀಮಾ ಮಸೂತಿ ರಾಜ್ಯ ಅಧ್ಯಕ್ಷರಾದ ಬಸವರಾಜ್ ಗುರಿಕಾರ್ ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ ಸಾಕ್ಷಿಯಾಗಿದ್ದರು‌.

ಇಂದಿಗೆ ನಮ್ಮ ಧಾರವಾಡ ಶಹರವಲಯದ ನೂತನ ಕಚೇರಿಯು ಪ್ರಾರಂಭಗೊಂಡು 11ವರ್ಷಗಳನ್ನು ಪೂರೈಸಿದ್ದು, ಈ ಕಚೇರಿಗೆ ಅಡಿಗಲ್ಲು ಹಾಕಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಗಿರೀಶ ಪದಕಿ ಅವರು ಕಾರ್ಯನಿರ್ವಹಿಸುತ್ತಿರುವದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಅಂದು ಶಿಕ್ಷಣ ಸಚಿವರಾಗಿದ್ದ ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿಶೇಷ ಕಾಳಜಿಯಿಂದ ಪ್ರಾರಂಭಗೊಂಡ ಈ ಕಚೇರಿ ಇಂದು ಶಿಕ್ಷಕರಿಗೆ ಸೇವಾ ಸೌಲಭ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.

ಮೊದಲನೆಯವರಾಗಿ ಗಿರೀಶ ಪದಕಿ ಸರ್ ಅವರು,, ನಂತರ ಎಸ್ ಎಂ ಹುಡೇದಮನಿ ಮತ್ತು ಎ ಎ ಖಾಜಿ BE0 ಆಗಿ ಕಾರ್ಯನಿರ್ವಹಿಸಿದ್ದು ಶಿಕ್ಷಕರ ಮೆಚ್ಚಿನ ಅಧಿಕಾರಿಗಳಾಗಿದ್ದಾರೆ.

ಗಿರೀಶ್ ಪದಕಿ ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು & ಸುಂದರ ಗುರುಭವನ ಹಾಗೂ ನೂತನ ಸುಸಜ್ಜಿತ ಕ್ಷೇತ್ರಸಂಪನ್ಮೂಲ ಕೇಂದ್ರದ ಕಾರ್ಯಗಳು ಈಡೇರುವಂತಾಗಲಿ ಎಂದು ಶುಭ ಹಾರೈಸುತ್ತೇವೆ‌ ಎಂದು
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಾಧ್ಯಕ್ಷೆ
ಲತಾ. ಎಸ್. ಮುಳ್ಳೂರ,
ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ. H. ಶುಭ ಹಾರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *