ಧಾರವಾಡ Prajakiran.com : ಆಟೋವೊಂದು ಪಲ್ಟಿಯಾಗಿ ನಾಲ್ಕು ಜನರಿಗೆ ಗಾಯವಾದ ಘಟನೆ ಹುಬ್ಬಳ್ಳಿ-ಧಾರವಾಡ ರಸ್ತೆಯ ಡೆಂಟಲ್ ಕಾಲೇಜು ಬಳಿ ತಡರಾತ್ರಿ ನಡೆದಿದೆ.
ನಿಧಾನವಾಗಿ ಬರುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿ ನಾಲ್ಕು ಜನರಿಗೆ ಗಾಯವಾಗಿದೆ.
ಇದರಿಂದಾಗಿ ಆಟೋ ರಿಕ್ಷಾ ಸಹ ಜಖಂಗೊಂಡಿದೆ.
ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸಿದ್ದಾರೆ.