ರಾಜ್ಯ

ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಕರಣ : ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆಗೆ ಆಗ್ರಹ

ಧಾರವಾಡ prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ರಾಜ್ಯದ ಪೊಲೀಸ್ ಇಲಾಖೆ ಹಾಗೂ ವಿಶೇಷವಾಗಿ ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಮಾಧ್ಯ‌ಮ ವಿಶ್ಲೇಷಕ ಪಿ‌. ಎಚ್. ನೀರಲಕೇರಿ ಒತ್ತಾಯಿಸಿದರು.

ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ನೇರವಾಗಿ ಸಿಎಂ, ಗೃಹ ಸಚಿವರ ವ್ಯಾಪ್ತಿಯಲ್ಲಿ ಬರುತ್ತದೆ.

ನಿರ್ಭಯ ಪ್ರಕರಣದ ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯದ ಬಿಜೆಪಿ ಸರಕಾರ
ಕಡಗಣನೆ ಮಾಡಿದೆ ಎಂದು ದೂರಿದರು‌‌.

ಕರ್ನಾಟಕ ಪೊಲೀಸ್ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ ಈ ಪ್ರಕರಣದಲ್ಲಿ ಸಂಪೂರ್ಣ ವಿಫಲವಾಗಿದೆ‌. ಇದರಿಂದಾಗಿ ಜನರ ವಿಶ್ವಾಸಕ್ಕೆ ಧಕ್ಕೆ ಆಗಿದೆ ಎಂದು ಆರೋಪಿಸಿದರು‌.

ಪೊಲೀಸ್ ಪೇದೆಯಿಂದ ಗೃಹ ಇಲಾಖೆ ಕಾರ್ಯದರ್ಶಿಯವರೆಗೆ ಪ್ರತಿಯೊಬ್ಬರು ಹೆದರುವ ವ್ಯವಸ್ಥೆ ಇದೆ. ಹಿರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು
ವಿಪಯಾರ್ಸದ ಸಂಗತಿ ಎಂದರು.

ಹಾಗಿದ್ದರೆ ನಮ್ಮ ರಕ್ಷಣೆ ಎಲ್ಲಿದೆ. ಕೆಪಿಸಿಸಿ ಅಧ್ಯಕ್ಷರ ಕಾರಿಗೆ ಚಪ್ಪಲಿ ತೂರಿರುವುದು ಪೊಲೀಸರ ವೈಪಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಬಸವರಾಜ ಬೊಮ್ನಾಯಿ ವಿಫಲತೆ ಎದ್ದು ಕಾಣುತ್ತಿದೆ‌. ಪೊಲೀಸರು ಮನಸಾರೆ ಕೆಲಸ ಮಾಡುತ್ತಿಲ್ಲ. ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅತ್ಯಾಚಾರದ ಪ್ರಕರಣದಲ್ಲಿ ಆರೋಪಿಯನ್ನು ಒಂದು ದಿನದಲ್ಲಿ ಬಂಧನ ಮಾಡುವುದು ವಾಡಿಕೆ. ಆದರೆ ಇಲ್ಲಿ ಸ್ವತಃ ಯುವತಿ ದೂರು ನೀಡಿ, ನ್ಯಾಯಾಧೀಶರ ಎ್ಉರು ಹಾಜರಾಗಿ ಹೇಳಿಕೆ ನೀಡಿ ಹಲವು ದಿನ ಕಳೆದರೂ ಬಂಧನ ಆಗಿಲ್ಲ ಎಂದರೆ ಎನರ್ಥ ಎಂದು ಕಿಡಿಕಾರಿದರು.

ಬದಲಿಗೆ ಅವರೇ ರಾಜ್ಯ ಸರಕಾರಕ್ಕೆ ಧಮ್ಕಿ ಕೊಡ್ತಾರೆ. ಸರಕಾರವೇ ಬುಡಮೇಲು ಮಾಡಲಾಗುತ್ತದೆ. ರಾಜೀನಾಮೆ ನೂರಾರು ಬರ್ತಾವೆ ಎಂದು ಹೇಳುವುದು ಪ್ರಚೋದನಾಕಾರಿ ಹೇಳಿಕೆಯಲಗಲವೇ ಎಂದು ಕುಟುಕಿದರು.

ಅವರು ಎನೇ ಬೆದರಿಿಕ ಕೊಟ್ಟರೂ ಕ್ರಮ ಗೊಂಡಿಲ್ಲ. ಬೊಮ್ಮಾಯಿ ಎನ್ ಮಾಡ್ತಾ ಇದ್ದಾರೆ. ಮಾನ ಮರ್ಯಾದೆ ಉಳಿಯಬೇಕಾದರೆ ತಕ್ಷಣ ರಾಜೀನಾಮೆ ಕೊಡಬೇಕು. ಒಬ್ಬ ಯುವತಿಯ ರಕ್ಷಣೆ ಮಾಡಲು ಆಗದ ಬೇಜವಾಬ್ದಾರಿ ಸರಕಾರ. ಇದು ನಿಮ್ಮ ದೌರ್ಬಲ್ಯ ತೋರಿಸುತ್ತದೆ ಎಂದು ಗುಡುಗಿದರು.

ಬೆತ್ತಲಾಗುವಾಗ ಕ್ಯಾಮರಾ ರೆಕಾರ್ಡ್ ಮಾಡಿದವರೂ ಯಾರು. ಈಗ ವಕೀಲರನ್ಬು ದೋಷಿಸುವುದು ಸರಿಯಲ್ಲ. ನಿಷ್ಪಕ್ಷಪಾತ ತನಿಖೆ ಆಗಬೇಕು. ಮಾಜಿ ಮಂತ್ರಿ ರಕ್ಷಣೆ ಮಾಡುವುದು ಸರಿಯಲ್ಲ.

ಎಸ್ ಐ ಟಿ ಅವಶ್ಯಕತೆ ಇಲ್ಲ. ಅತ್ಯಾಚಾರ ಪ್ರಕರಣದಲ್ಲಿ ರಮೇಶ ಜಾರಕಿಹೊಳಿಯನ್ನ ಅರೆಸ್ಟ ಮಾಡಿ ವಿಚಾರಣೆ ನಡೆಸಿ, ಪೊಲೀಸರನ್ನ ಮನೆ ಆಳುಗಳಂತೆ ದುಡಿಸಿಕೊಳ್ಳುವುದನ್ನು ಬಿಡಿ ಎಂದು ಕಿಡಿ ಕಾರಿದರು.

ಜಗತ್ತಿನ ಎದುರು ಬೆತ್ತಲೆ ಆದವರು ನೀವು ಈಗ ಕಾಂಗ್ರೆಸ್ ಪಕ್ಷದ ಕಡೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ತಿರುಗೇಟು ನೀಡಿದರು.

ಪೊಲೀಸರು ಈ ಪ್ರಕರಣದಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಖಾತೆಯಲ್ಲಿ ಸಿಎಂ ಹಸ್ತಕ್ಷೇಪ ನಡೆಸಿದ್ದಿದಾರೆ ಎಂದು ಸಚಿವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.ಇದರ ಅರ್ಥ ವ್ಯವಸ್ಥೆ ಸರಿಯಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ನೀರಲಕೇರಿ ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *