ಜಿಲ್ಲೆ

ಹಡಪದ ಅಪ್ಪಣ್ಣ ಸಮಾಜದ ಸಂಘಟನೆಯಿಂದ ವಿವಿಧ ಸಾಧಕರಿಗೆ ಸನ್ಮಾನ

ಧಾರವಾಡ: prajakiran.com : ಶಕ್ತಿಶಾಲಿ ಸಮಾಜ ಸಂಘಟನೆಯಿಂದ ಮಾತ್ರ ಸರಕಾರದ ಕಣ್ತೆರೆಸಲು ಸಾಧ್ಯ ಎಂದು ಶಾಸಕ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದವತಿಯಿಂದ ಬುಧವಾರ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಸಮಾಜದ ಸಂಘಟನೆ ಕುರಿತು ಚಿಂತನೆ, ನೂತನ ಗ್ರಾಮ ಪಂಚಾಯತ ಸದಸ್ಯರ ಹಾಗೂ ವಿವಿಧ ರಂಗದಲ್ಲಿನ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

೧೨ ನೇ ಶತಮಾನದಲ್ಲಿ ಗುರು ಬಸವಣ್ಣನವರ ಅನುಯಾಯಿ ಹಾಗೂ ಮೆಚ್ಚಿನ ಆಪ್ತರಾಗಿದ್ದ ಆಗಿದ್ದ ಹಡಪದ ಅಪ್ಪಣ್ಣನವರು ಶರಣಗಣದಲ್ಲಿ ಪ್ರಮುಖ ಎನಿಸಿಕೊಂಡವರು. ಎಲ್ಲ ವರ್ಗದವರೊಂದಿಗೆ ಅನ್ಯೋನ್ಯತೆಯಿಂದ ಬದುಕಬೇಕು ಎಂಬ ಶರಣರ ಆಶಯವನ್ನು ಅಪ್ಪಣ್ಣನವರ ಅನುಯಾಯಿಗಳಾದ ಹಡಪದ ಸಮಾಜದವರು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.

ಹಡಪದ ಸಮಾಜದವರು ಶರಣ ತತ್ವದಂತೆ ತಮ್ಮ ಕಾಯಕದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಆದರೆ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದಾರೆ.

ಪ್ರಸ್ತುತ ಸರಕಾರ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದ ಶಾಸಕರು, ಸಮಾಜದ ಬೇಡಿಕೆಗಳನ್ನು ಸರಕಾರದ ಮಟ್ಟದಲ್ಲಿ ಚರ್ಚಿಸುವ ಮೂಲಕ ಸಮಾಜಕ್ಕೆ ನ್ಯಾಯ ಕೊಡಿಸುವ ಭರವಸೆಯನ್ನು ಶಾಸಕರು ಇದೇ ಸಂದರ್ಭದಲ್ಲಿ ನೀಡಿದರು.

ಶಾಸಕರಾದ ಸಿ.ಎಂ.ನಿಂಬಣ್ಣವರ, ಅಮೃತ ದೇಸಾಯಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಸಮಾಜದ ಬೇಡಿಕೆಗಳನನ್ನು ಈಡೇರಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.

ಮನಗುಂಡಿ ಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಮಹಾಸ್ವಾಮೀಜಿ ಮತ್ತು ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ಸಂಸ್ಥಾನಮಠದ ಶ್ರೀ ಅನ್ನದಾನಿ ಭಾರತಿ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ, ಸಮಾಜವನ್ನು ಪ್ರವರ್ಗ-೧ ಕ್ಕೆ ಸೇರಿಸುವುದು ಮತ್ತು ಜಿಲ್ಲೆಯಲ್ಲಿ ಸಂಘದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿವೇಶನ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನೂತನ ಗ್ರಾಮ ಪಂಚಾಯತ ಸದಸ್ಯರು, ವಿವಿಧ ರಂಗದಲ್ಲಿನ ಸಾಧಕರು ಮತ್ತು ನಿಕಟಪೂರ್ವ ಅಧ್ಯಕ್ಷ ಉಳವಪ್ಪ ಹಡಪದ ಮತ್ತಿತರರನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ಮಹಾರುದ್ರಪ್ಪ ಪಡೇಸೂರ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಸಂಘದ ಕಾರ್ಯಾಧ್ಯಕ್ಷ ಎಚ್.ಡಿ.ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಈರಣ್ಣ ಚಿಕ್ಕಬೆಳ್ಳಿಕಟ್ಟಿ ಸ್ವಾಗತಿಸಿದರು. ಸಂಗಮೇಶ ಹಡಪದ ಮತ್ತು ರುದ್ರೇಶ ಹಡಪದ ನಿರೂಪಿಸಿದರು. ಸುರೇಶ ಹಡಪದ ವಂದಿಸಿದರು.

ಸಮಾಜದ ಪ್ರಮುಖರಾದ ಸಂಗಮೇಶ ಹಡಪದ, ರಾಜು ಹುಬ್ಬಳ್ಳಿ, ರಾಮಣ್ಣ ತಂಬೂರಿ, ಪರಶುರಾಮ ಹಡಪದ, ಬಸವರಾಜ ಬಿಡನಾಳ, ಅರ್ಜುನ ಹಡಪದ, ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *