ಜಿಲ್ಲೆ

ಧಾರವಾಡದ ಜಿಲ್ಲಾಧಿಕಾರಿ “ನಡೆ ಹಲವು ಹಳ್ಳಿಯ ಕಡೆ”

ಧಾರವಾಡದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಧಾರವಾಡ ತಾಲೂಕಿನ ದಡ್ಡಿಕಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ ಪಿಂಚಣಿ, ಕಂದಾಯ ಅದಾಲತ್ ಹಾಗೂ* *ಜನಸಂಪರ್ಕ ಸಭೆ ಜರುಗಿಸಿದರು.

*ಗ್ರಾಮವಾರು ಅರ್ಜಿ ವಿಲೇವಾರಿ ವಿವರ* :

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11 ಗಂಟೆಗೆ ನಿಗದಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಂದ ಸುಮಾರು 21 ಅರ್ಜಿಗಳನ್ನು ಸ್ವೀಕರಿಸಿ 15 ಕ್ಕೂ ಹೆಚ್ಚು ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದರು.

ಮತ್ತು ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸುಮಾರು 12 ಆದೇಶ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಮಧ್ಯಾಹ್ನ 12 ಗಂಟೆಗೆ ಹಳ್ಳಿಗೇರಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು 10 ಅರ್ಜಿಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಿ 3 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು.

ಮತ್ತು ಬಾಕಿ ಅರ್ಜಿಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಿ ಅನುಮತಿ ಪಡೆಯುವಂತೆ ಸೂಚಿಸಿದರು.

ಹಳ್ಳಿಗೇರಿ ಗ್ರಾಮದ 18 ಜನ ಕಂದಾಯ ಇಲಾಖೆಯ ಯೋಜನಾ ಫಲಾನುಭವಿಗಳಿಗೆ ಆದೇಶ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಮಧ್ಯಾಹ್ನ 1 ಗಂಟೆಗೆ ಮುರಕಟ್ಟಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಭೆ ಜರುಗಿಸಿ ಸುಮಾರು 18 ಅರ್ಜಿಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಿ 6 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು.

ಮತ್ತು ಬಾಕಿ ಅರ್ಜಿಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಿ ಸಂಬಂಧಿಸಿದ ಇಲಾಖೆಗಳಿಂದ ಮಾಹಿತಿ ಪಡೆಯುವಂತೆ ಸೂಚಿಸಿದರು.

ಮುರಕಟ್ಟಿ ಗ್ರಾಮದ 4 ಜನ ಕಂದಾಯ ಇಲಾಖೆಯ ಯೋಜನಾ ಫಲಾನುಭವಿಗಳಿಗೆ ಆದೇಶ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಮಧ್ಯಾಹ್ನ 3 ಗಂಟೆಗೆ ದೇವಗಿರಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಭೆ ಜರುಗಿಸಿ ಸುಮಾರು 14 ಅರ್ಜಿಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಿ 8 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು.

ಮತ್ತು ಬಾಕಿ ಅರ್ಜಿಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಿ ಅನುಮತಿ ಪಡೆಯುವಂತೆ ಸೂಚಿಸಿದರು.

ನಂತರ ಮಧ್ಯಾಹ್ನ 3-45 ಗಂಟೆಗೆ ಕಲಕೇರಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಕಲಕೇರಿ ಹುಣಸಿಕುಮರಿ ರಸ್ತೆಯ ಪರಿಶೀಲನೆ ನಡೆಸಿ ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಂಜೆ 4 ಗಂಟೆಗೆ ಮುಗದ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಭೆ ಜರುಗಿಸಿ ಸುಮಾರು 20 ಅರ್ಜಿಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಿ 15 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು.

ಮತ್ತು ಬಾಕಿ ಅರ್ಜಿಗಳ ಕುರಿತು ಶೀಘ್ರದಲ್ಲಿ ಕ್ರಮ ಜರುಗಿಸುವುದಾಗಿ ಗ್ರಾಮಸ್ಥರಿಗೆ ಅವರು ತಿಳಿಸಿದರು.

ಮುಗದ ಗ್ರಾಮದ 15 ಜನ ಕಂದಾಯ ಇಲಾಖೆಯ ಯೋಜನಾ ಫಲಾನುಭವಿಗಳಿಗೆ ಆದೇಶ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಮತ್ತು ಕೊನೆಯದಾಗಿ ದಡ್ಡಿಕಮಲಾಪುರ ಗ್ರಾಮಕ್ಕೆ ಸಂಜೆ 5 ಗಂಟೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಪಿಂಚಣಿ, ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಸಭೆ ಜರುಗಿಸಿ ಗ್ರಾಮಸ್ಥರಿಂದ 10 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದರು.

ಮತ್ತು ದಡ್ಡಿಕಮಲಾಪುರ ಹಾಗೂ ನಾಗಲಾವಿ ಗ್ರಾಮಗಳಿಗೆ ಅಗತ್ಯವಿರುವ ಸ್ಮಶಾನ ಜಾಗೆಗಾಗಿ ಪ್ರತಿ ಗ್ರಾಮಕ್ಕೆ ಒಂದು ಎಕರೆ ಜಮೀನು ಮಂಜೂರು ಮಾಡುವುದಾಗಿ ತಿಳಿಸಿದರು.

ವಸತಿ ರಹಿತರು ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿ ಗ್ರಾಮ ಪಂಚಾಯತಿಗೆ ಶೀಘ್ರ ಕ್ರಮ ವಹಿಸುವಂತೆ ಸೂಚಿಸಿದರು.

ಮಂಡಿಹಾಳ ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ 20 ಗುಂಟೆ ಜಮೀನು ಮಂಜೂರು ಮಾಡಿರುವುದಾಗಿ ಮತ್ತು ಮಂಡಿಹಾಳ ಗ್ರಾಮದ ನಿವೇಶನ ಮತ್ತು ವಸತಿ ರಹಿತರ ಬೇಡಿಕೆಯಂತೆ ಸುಮಾರು 4 ಎಕರೆ ಜಮೀನನ್ನು ಜನತಾ ನಿವೇಶನಕ್ಕೆ ನೀಡಿದ್ದು, ಸಧ್ಯದಲ್ಲಿಯೇ ಅದನ್ನು ಪೋಡಿ ಮಾಡಿ ಹಸ್ತಾಂತರಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಒಟ್ಟಾರೆಯಾಗಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ನಿಮಿತ್ಯ ಗ್ರಾಮಭೇಟಿಯಲ್ಲಿ ಇಂದು ಏಳು ಹಳ್ಳಿಗಳಿಗೆ ಭೇಟಿ ನೀಡಿ ಸಭೆ ಜರುಗಿಸಿದ್ದು, 7 ಗ್ರಾಮಗಳ ಸುಮಾರು 77 ಅರ್ಜಿಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಿ, ಬಾಕಿ ಇರುವ ಹಾಗೂ ಸ್ಥಳದಲ್ಲಿಯೇ ಸ್ವೀಕರಿಸಿದ ಅರ್ಜಿಗಳ ಪೈಕಿ ಸುಮಾರು 50 ಕ್ಕಿಂತಲೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿ ವಿಲೇವಾರಿ ಮಾಡಿದ್ದಾರೆ.

ಮತ್ತು ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಬೇಕು ಬೇಡಿಕೆಗಳನ್ನು ಹತ್ತಿರದಿಂದ ತಿಳಿಯುವ ಮತ್ತು ಸರ್ಕಾರದ ಯೋಜನೆಗಳನ್ನು ನೇರವಾಗಿ ತಲುಪಿಸುವ ಕಾರ್ಯದಲ್ಲಿ ತೃಪ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *