ಜಿಲ್ಲೆ

ಧಾರವಾಡ ಜಿಲ್ಲೆಯ ವಿವಿಧ ಗ್ರಾ.ಪಂ.ಉಪಚುನಾವಣೆ ಮತದಾನ ಶಾಂತಿಯುತ

ಗ್ರಾ.ಪಂ.ಉಪಚುನಾವಣೆ; ಶೇ.80 ರಷ್ಟು ಮತದಾನ

ಧಾರವಾಡ prajakiran.com : ಜಿಲ್ಲೆಯ ವಿವಿಧ ತಾಲೂಕಿನ ಮೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೆರವಾಗಿದ್ದ 13 ಸದಸ್ಯ ಸ್ಥಾನಗಳಿಗೆ ಇಂದು ಶಾಂತಿಯುತವಾಗಿ ಮತದಾನ ಜರುಗಿತು.

ಶೇ.80.01 ರಷ್ಟು ಮತದಾನ ದಾಖಲಾಗಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ನವಲಗುಂದ ತಾಲೂಕಿನ ಬೆಳವಟಗಿ ಗ್ರಾ.ಪಂ.ನ ಅಮರಗೋಳದ ಎರಡು ಮತಕ್ಷೇತ್ರಗಳ ಏಳು ಸ್ಥಾನಗಳಿಗೆ ಜರುಗಿದ ಮತದಾನದಲ್ಲಿ 2357 ಮತದಾರರ ಪೈಕಿ 1843 ಜನ ಮತ ಚಲಾಯಿಸಿ ಶೇ.78.19 ಮತದಾನ ದಾಖಲಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕಟ್ನೂರ ಗ್ರಾ.ಪಂ.ನ ಕಟ್ನೂರಿನ ಎರಡು ಮತಕ್ಷೇತ್ರಗಳ ಐದು ಸ್ಥಾನಗಳಿಗೆ ಜರುಗಿದ ಮತದಾನದಲ್ಲಿ 1485 ಮತದಾರರ ಪೈಕಿ 1252 ಜನ ಮತ ಚಲಾಯಿಸಿದ್ದಾರೆ. ಶೇ.84.31 ಮತದಾನವಾಗಿದೆ.

ಕುಂದಗೋಳ ತಾಲೂಕಿನ ಮಳಲಿ ಗ್ರಾ.ಪಂ.ನ ತೀರ್ಥ ಗ್ರಾಮದ ಒಂದು ಮತಕ್ಷೇತ್ರದ ಒಂದು ಸ್ಥಾನಕ್ಕೆ ಜರುಗಿದ ಮತದಾನದಲ್ಲಿ 651 ಮತದಾರರ ಪೈಕಿ 545 ಜನ ಮತ ಚಲಾಯಿಸಿದ್ದಾರೆ. ಶೇ.83.72 ರಷ್ಟು ಮತದಾನವಾಗಿದೆ.

ಜಿಲ್ಲೆಯ ವಿವಿಧೆಡೆ ಗ್ರಾ.ಪಂ.ಉಪಚುನಾವಣೆಯ ಮತದಾನವು ಶಾಂತಿಯುಗಿತವಾಗಿತ್ತು,

ಇವುಗಳ ಮತ ಎಣಿಕೆ ಕಾರ್ಯವು ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಗಳಲ್ಲಿ ಮಾರ್ಚ 31 ರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *