ರಾಜ್ಯ

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಹಲವು ಪೊಲೀಸ್ ಇನ್ಸಪೆಕ್ಟರ್ ವರ್ಗಾವಣೆ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ನೂರಾರು ಪೊಲೀಸ್ ಇನ್ಸಪೆಕ್ಟರುಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ‌.

ಹುಬ್ಬಳ್ಳಿ ಧಾರವಾಡ ಅವಳಿನಗರದ ಹಲವು ಪೊಲೀಸ್ ಇನ್ಸಪೆಕ್ಟರ್ ಗಳ ವರ್ಗಾವಣೆ ಯಾಗಿದೆ.

ಅದರಲ್ಲಿ, ಧಾರವಾಡದ ಉಪನಗರ ಠಾಣೆಯ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ಅವರನ್ನ ಬಾಗಲಕೋಟೆಗೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ
ಗದಗನ ಡಿಎಸ್ ಬಿ ಯಲ್ಲಿದ್ದ ಗಿರೀಶ ರೋಡಕರ ವರ್ಗಾವಣೆಗೊಂಡಿದ್ದಾರೆ‌.

ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿದ್ದ ಜೆ.ಎಂ.ಕಾಲಿಮಿರ್ಜಿ ಅವರನ್ನ ಹುಬ್ಬಳ್ಳಿ ಗೋಕುಲ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಅದೇ ರೀತಿ ಎಸಿಬಿಯಲ್ಲಿದ್ದ ಬಿ.ಎ. ಜಾಧವ ಅವರನ್ನ ಹುಬ್ಬಳ್ಳಿಯ
ಕಮರಿಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಧಾರವಾಡದ ಮಹಿಳಾ ಪೊಲೀಸ್ ಠಾಣೆಗೆ ಇದ್ದ ಕಾಮನ್ ಬೈಲ್ ಅವರ ಸ್ಥಾನಕ್ಕೆ ವೈ.ಡಿ.ಅಗಸಿಮನಿ ಅವರನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಅವರು ಈ ಹಿಂದೆ
ರಾಜ್ಯ ಗುಪ್ತವಾರ್ತೆಯಲ್ಲಿದ್ದು, ಅಲ್ಲಿಂದ ಅಗಸಿಮನಿ ಅವರು ಧಾರವಾಡದ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಹುಬ್ಬಳ್ಳಿಯ ನವನಗರದ ಎಪಿಎಂಸಿ ಪೊಲೀಸ್ ಠಾಣೆಗೆ ವಿಶ್ವನಾಥ ಚೌಗಲೆಯವರನ್ನ ವರ್ಗಾವಣೆ ಮಾಡಲಾಗಿದೆ‌.

ಹೀಗೆ ಅವಳಿ ನಗರದ ಹಲವು ಪೊಲೀಸ್ ಠಾಣೆಗೆ ಹೊಸಬರು ಬಂದಿದ್ದು, ಹಳಬರ ವರ್ಗಾವಣೆ ಮಾಡಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *