ಜಿಲ್ಲೆ ರಾಜ್ಯ

ಯತ್ನಾಳ ಬಗ್ಗೆ ಉತ್ತರಿಸಲು ಸಚಿವ ಜಗದೀಶ್ ಶೆಟ್ಟರ್ ಹಿಂದೇಟು

ಧಾರವಾಡ Prajakiran.com : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಚಿವ ಜಗದೀಶ್ ಶೆಟ್ಟರ್ ಹಿಂದೇಟು ಹಾಕಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನನಗೆ ಏನು ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅವರು ರಾಷ್ಟ್ರದ ರಾಜಧಾನಿ ನವದೆಹಲಿಗೆ ಏಕೆ ಹೋಗಿದ್ದಾರೆ ಎಂಬುದು ನನಗೆ ತಿಳಿದಿಲ್ಲ  ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬಗ್ಗೆ ಸಚಿವ ಜಗದೀಶ್ ಶೆಟ್ಟರ್  ಹೆಚ್ಚಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. […]

ಜಿಲ್ಲೆ ರಾಜ್ಯ

ರಾಮ ಮಂದಿರ ನಿರ್ಮಾಣ ಅನುಮಾನಬೇಡ ಎಂದ ಸಚಿವ

ಧಾರವಾಡ Prajakiran.com ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದಿದ್ದರೇನಂತೆ ಶ್ರೀ ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣ ಆಗೇ ಆಗುತ್ತದೆ ಇದು ಜನರ ಬಯಕೆ ಎಂದು ಧಾರವಾಡದಲ್ಲಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಮಮಂದಿರಕ್ಕೆ ದೇಣಿಗೆ ನೀಡೋದಿಲ್ಲ ಎಂಬ ಹೇಳಿಕೆ ನೀಡಬಾರದು. ಅವರ ಹೇಳಿಕೆ ಸಿದ್ದರಾಮಯ್ಯ ಹೆಸರಿಗೆ ಕಪ್ಪು ಚುಕ್ಕೆ ಎಂದು ಕುಟುಕಿದರು. ಪಿಎಫ್ಐ […]

ಜಿಲ್ಲೆ ರಾಜ್ಯ

ಧಾರವಾಡ ರೈತರ 21 ದಿನಗಳ ಸರಣಿ ಸತ್ಯಾಗ್ರಹಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬೆಂಬಲ

ಧಾರವಾಡ Prajakiran.com : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ರೈತ ಹಿತರಕ್ಷಣಾ ಪರಿವಾರದವರು ನಿರಂತರ 21 ದಿನಗಳಿಂದ ನಡೆಸುತ್ತಿರುವ ಧರಣಿಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬೆಂಬಲ ಸೂಚಿಸಿದರು. ಭೂ ಸುಧಾರಣಾ ತಿದ್ದುಪಡಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಧರಣಿಗೆ ಸರ್ಕಾರ ಸ್ಪಂದಿಸದೇ ಇರುವುದು ದುರದೃಷ್ಟಕರ. ಈ ಕಾಯ್ದೆಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. […]

ಜಿಲ್ಲೆ

ಫೆ.20 ರಂದು ಧಾರವಾಡದ ಕೋಗಿಲಗೇರಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಫೆ.20 ರಂದು ಕೋಗಿಲಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ವಾಸ್ತವ್ಯ ಸಾರ್ವಜನಿಕರ ಅಹವಾಲುಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲು ಆಧ್ಯತೆ ಧಾರವಾಡ prajakiran.com : ಫೆ.20 ರಂದು ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗ್ರಾಮದ ವೀಕ್ಷಣೆ, ಸಾರ್ವಜನಿಕ ಅಹವಾಲುಗಳ ಸ್ವೀಕಾರ, ಪರಿಹಾರ, ವಿವಿಧ ಇಲಾಖೆಗಳ ಮಾಹಿತಿ ವಿನಿಮಯ, ಯೋಜನೆಗಳ ಜಾಗೃತಿ ಕುರಿತು ಉಪನ್ಯಾಸಗಳೊಂದಿಗೆ ಸರ್ಕಾರದ ನಿರ್ದೇಶನದಂತೆ ಗ್ರಾಮ ವಾಸ್ತವ್ಯ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಅವರು ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ […]

ಅಪರಾಧ ಜಿಲ್ಲೆ

ಧಾರವಾಡದ ಎಸ್ ಡಿ ಎಂ ಬಳಿ ಆಟೋ ಪಲ್ಟಿ : ನಾಲ್ಕು ಜನರಿಗೆ ಗಾಯ

ಧಾರವಾಡ Prajakiran.com : ಆಟೋವೊಂದು ಪಲ್ಟಿಯಾಗಿ ನಾಲ್ಕು ಜನರಿಗೆ ಗಾಯವಾದ ಘಟನೆ ಹುಬ್ಬಳ್ಳಿ-ಧಾರವಾಡ ರಸ್ತೆಯ ಡೆಂಟಲ್ ಕಾಲೇಜು ಬಳಿ ತಡರಾತ್ರಿ ನಡೆದಿದೆ.               ನಿಧಾನವಾಗಿ ಬರುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿ ನಾಲ್ಕು ಜನರಿಗೆ ಗಾಯವಾಗಿದೆ. ಇದರಿಂದಾಗಿ ಆಟೋ ರಿಕ್ಷಾ ಸಹ ಜಖಂಗೊಂಡಿದೆ. ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಘಟನಾ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಪೊಲೀಸರು ಘಟನೆ ಕುರಿತು ಪರಿಶೀಲನೆ […]

ಜಿಲ್ಲೆ ರಾಜ್ಯ

ಧಾರವಾಡದಲ್ಲಿ ರೈಲು ತಡೆ ನಡೆಸಲು ಮುಂದಾದ ಹೋರಾಟಗಾರರ ಬಂಧನ

ಧಾರವಾಡ Prajakiran.com : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಧಾರವಾಡ ರೈಲ್ವೆ ನಿಲ್ದಾಣದ ಬಳಿ ರೈಲು ತಡೆಗೆ ಮುಂದಾದ ಹೋರಾಟಗಾರರನ್ನು ಧಾರವಾಡ ರೈಲ್ವೆ ಪೊಲೀಸರು ಬಂಧಿ‌ಸಿದ ಘಟನೆ ಗುರುವಾರ ನಡೆಯಿತು.  ಆರ್ ಕೆ ಎಸ್, ಎಐಟಿಯುಸಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ  ರೈಲು ತಡೆಯಲು ಮುಂದಾಗಿದ್ದರು. ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ […]

ಜಿಲ್ಲೆ ರಾಜ್ಯ

ಧಾರವಾಡದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ : ಸೂಕ್ತ ಭದ್ರತೆ ಕಲ್ಪಿಸಲು ಆಗ್ರಹ

ಧಾರವಾಡ Prajakiran.com : ಧಾರವಾಡದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸಲು ಮದಿಹಾಳದ ಶಿವಗಂಗಾ ನಗರ, ಕಮತಿ ಪ್ಲಾಟ್ ನಿವಾಸಿಗಳು ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮದಿಹಾಳ ಸೇರಿದಂತೆ ಧಾರವಾಡ ನಗರದಾದ್ಯಂತ ವಿವಿಧ ಕಡೆಗಳಲ್ಲಿ ಕಳ್ಳತನ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಕಮತಿ ಪ್ಲಾಟ್ ಹಾಗೂ ಶಿವಗಂಗಾ ನಗರದ ನಿವಾಸಿಗಳು ಭಯಗೊಂಡಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಭದ್ರತೆ ಕಲ್ಪಿಸಬೇಕು. ನಮ್ಮ ಮನೆಗಳಿಗೆ ಭದ್ರತೆ ಒದಗಿಸಬೇಕು ಹಾಗೂ ಸಿಸಿ […]

ಜಿಲ್ಲೆ ರಾಜ್ಯ

ಭಕ್ತಿ ಭಾವದಿಂದ ಜರುಗಿದ ಧಾರವಾಡ ಮುರುಘಾಮಠದ ರಥೋತ್ಸವ

ಧಾರವಾಡ Prajakiran.com : ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳ ಪೈಕಿ ಒಂದಾಗಿರುವ ಧಾರವಾಡ ಮುರುಘಾಮಠದ  ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ  ಭಕ್ತಿ ಭಾವದಿಂದ ಜರುಗಿತು.  ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ನಾಡಿನ ಎಲ್ಲ ಜಾತ್ರಾ ಮಹೋತ್ಸವಗಳು ತಮ್ಮ ಕಳೆ ಕಳೆದುಕೊಂಡಿದ್ದವು. ಇದೀಗ ಕೊರೊನಾ ಹಾವಳಿ ಕಡಿಮೆಯಾಗಿರುವುದರಿಂದ ಸರ್ಕಾರವು ಕೂಡ ಜಾತ್ರೆಗಳನ್ನು ನಡೆಸಲು ಪರವಾನಿಗಿ ನೀಡಿದೆ. ಅದರಂತೆ ಸರ್ಕಾರ ಪರವಾನಿಗೆ ನೀಡಿದ ನಂತರ ಧಾರವಾಡದ ಪ್ರಸಿದ್ಧ ಜಾತ್ರಾ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.  ಕಳೆದ ಎಂಟು ಹತ್ತು […]

ಜಿಲ್ಲೆ

ರೈತ ವಿರೋಧಿ ಕಾನೂನು ವಾಪಸ್ ಪಡೆಯಲು ಆಗ್ರಹಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

ಧಾರವಾಡ Prajakiran.com : ಕೇಂದ್ರ ಸರ್ಕಾರ ರೈತ ಸಮುದಾಯದ ವಿರೋಧದ ನಡುವೆ ಕೃಷಿ ಕಾನೂನು ಜಾರಿಗೆ ತಂದಿರುವುದು ಸರಿಯಲ್ಲ. ಕೂಡಲೇ ರೈತ ವಿರೋಧಿ ಕಾನೂನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ಧಾರವಾಡದಲ್ಲಿ ಪ್ರತಿಭಟನೆ ನಡೆಯಿತು. ಕೃಷಿಗೆ ಮಾರಕವಾದಂತಹ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಮೂಲಕ ರೈತರ ಮರಣ ಶಾಸನ ಬರೆಯಲು ಹೊರಟಿದೆ. ರೈತರಿಗೆ ಅನುಕೂಲ ಆಗಿರುವ ಕಾನೂನು ಹಿಂಪಡೆಯಬೇಕು ಹಾಗೂ ರೈತರ ಜೋತೆಗೆ ಚರ್ಚಿಸಿ ರೈತರ […]

ಜಿಲ್ಲೆ

ಸಂಚಾರಿ ಸುರಕ್ಷತೆಗಾಗಿ ನಗರದ ಪ್ರಮುಖ ರಸ್ತೆಯಲ್ಲಿ ಟ್ಯೂಬ್ಲರ್ ಕಾನ್ ಅಳವಡಿಕೆ ಕಾರ್ಯ

ಧಾರವಾಡ Prajakiran.com : ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆಯ ಸಂಚಾರ ಸುರಕ್ಷತೆಗಾಗಿ ಅಳವಡಿಸಿದ ಟ್ಯೂಬ್ಲರ್ ಕಾನ್ ಗಳು ಕಿತ್ತು ಹಾಳಾಗಿದ್ದವು . ಅವುಗಳನ್ನು ಧಾರವಾಡ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಮಲ್ಲನಗೌಡ ನಾಯಕ ಅವರ ಸಲಹೆ ಮೇರೆಗೆ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಇಂದು ನಗರದ ಸಪ್ತಾಪುರ, ಕೆಸಿಡಿ, ಶ್ರೀನಗರ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಿತ್ತು ಹಾಳಾಗಿದ್ದ ಟ್ಯೂಬ್ಲರ್ ಕಾನ್ ಗಳನ್ನು ಹೊಸದಾಗಿ ಅಳವಡಿಸುವ ಕೆಲಸ ಮಾಡಿದರು.  ಸ್ವತಃ ಧಾರವಾಡ ಸಂಚಾರಿ ಪೊಲೀಸ್ ಠಾಣೆ […]