ಜಿಲ್ಲೆ

ಧಾರವಾಡದ ನವಲೂರ ಬಳಿ ಮತ್ತೆ ಕುಸಿತಕಂಡ ಬಿಆರ್ ಟಿ ಎಸ್ ಕಳಪೆ ಕಾಮಗಾರಿ  

ಧಾರವಾಡ prajakiran.com : ಇತ್ತೀಚಿಗಷ್ಟೇ ಕುಸಿತ ಕಂಡು ಹುಬ್ಬಳ್ಳಿ-ಧಾರವಾಡದ ಜನತೆಯಿಂದ ಹಿಗ್ಗಾಮುಗ್ಗಾ ಛೀಮಾರಿ ಹಾಕಿಸಿಕೊಂಡು ಅಪಮಾನಗೊಂಡಿದ್ದ ಬಿ ಆರ್ ಟಿ ಎಸ್ ಕಳಪೆ ಕಾಮಗಾರಿ ಅವಾಂತರ ಮತ್ತೆ ಮುಂದುವರೆದಿದೆ. ಈ ಬಾರಿಯೂ ನವಲೂರು ಬಳಿಯಿಂದ ಜೋಗೆಲ್ಲಾಪುರ ಹೋಗುವ ರಸ್ತೆಯಲ್ಲಿ ಸಿಮೆಂಟ್ ಬ್ಲ್ಯಾಕ್ ಗಳು ಕುಸಿದುಬಿದ್ದಿವೆ. ಅದನ್ನು ನೋಡಿದರೆ ಬಿ ಆರ್ ಟಿ ಎಸ್ ಕಾಮಗಾರಿ ಬಗ್ಗೆ ಮತ್ತೆ ಅನುಮಾನ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೆ, ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹೇಳಿದ್ದು ಸತ್ಯ ಎಂಬುದು ಸಾಬೀತಾಗಿದೆ. […]

ಅಪರಾಧ

ಮಹಿಳೆ ನೇಣಿಗೆ ಶರಣು, ಗರಿಗೆದರಿದ ಹಲವು ಅನುಮಾನ : ಹುಬ್ಬಳ್ಳಿ ಬಿಜೆಪಿ ಮುಖಂಡನಿಗೆ ಸಂಕಷ್ಟ

ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ಗೋಕುಲ್  ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಸವರಾಜ ಕೆಲಗೇರಿ ಎಂಬುವವರ ಪತ್ನಿ ನಾನು ಎಂದು ಹೇಳಿಕೊಳ್ಳುತ್ತಿದ್ದ ಅನಿತಾ ರೇವಣಕರ್  ಎಂಬ ಮಹಿಳೆ ಶಾಂತಿನಗರದ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಶನಿವಾರ ನಡೆದಿದೆ. ಇದರಿಂದಾಗಿ ಬಿಜೆಪಿ ಮುಖಂಡ ಬಸವರಾಜ್ ಕೆಲಗೇರಿ ಎಂಬಾತನಿಗೆ ಇದೀಗ ಸಂಕಷ್ಟ ಎದುರಾಗಿದೆ. ಈ ಮಹಿಳೆ ಮೇಲೆ ಈ ಹಿಂದೆ ಈತ ನಡು ಬೀದಿಯಲ್ಲಿಯೇ ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಲ್ಲದೆ, ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲೂ ಸಹ ಮಾರಣಾಂತಿಕ ನಡೆಸಿದ್ದ ಆರೋಪಗಳಿವೆ. […]

ಜಿಲ್ಲೆ

ಧಾರವಾಡದಲ್ಲಿ ಸೆ.೨೫ ರಿಂದ ಮಾಸ್ಕ್ ಬಳಕೆ ಉಲ್ಲಂಘಿಸುವವರಿಗೆ ದಂಡ

ವಿಶೇಷ ಕಾರ್ಯಾಚರಣೆಗೆ ಧಾರವಾಡ ಜಿಲ್ಲಾಡಳಿತ ನಿರ್ಧಾರ ಇದುವರೆಗೆ ೩೦ ಲಕ್ಷ ರೂ. ದಂಡ ಆಕರ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಧಾರವಾಡ prajakiran.com : ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಮಾಸ್ಕ್ ಬಳಕೆ ಮಾಡದವರಿಂದ ಜಿಲ್ಲೆಯಲ್ಲಿ ಈಗಾಗಲೇ ೩೦ ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ದಂಡ ವಿಧಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸಲು  ನಾಳೆ ಸೆ.೨೫ ರಿಂದ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಬೆಳೆ ಹಾನಿ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಅಪಾರ ಪ್ರಮಾಣದ ಮಳೆಯಿಂದಾಗಿ ಸಾಕಷ್ಟು ಬೆಳೆಹಾನಿಯಾಗಿದೆ. ಕಷ್ಟಪಟ್ಟು ರೈತ ಬೆಳೆದ ಬೆಳೆಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು, ಗದ್ದೆಗಳು ಕೆರೆಗಳಂತಾಗಿವೆ. ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತನಿಗೆ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ‌ ಜಿಲ್ಲೆಯ ರೈತನ ಬದುಕುಮೂರಾಬಟ್ಟೆಯಾಗಿದ್ದು, ಶೇಂಗಾ, ಹೆಸರು, ಸೋಯಾಬಿನ್ ಸೇರಿದಂತೆ […]

ಅಪರಾಧ

ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಇಬ್ಬರು ಚಾಲಕಿ ಕಳ್ಳರು

ಹುಬ್ಬಳ್ಳಿ prajakiran.com : ಗ್ರಾಹಕರ ಸೋಗಿನಲ್ಲಿ ಪ್ರತಿಷ್ಠಿತ ಚಿನ್ನದ ಮಳಿಗೆಗಳಿಗೆ ಭೇಟಿ ನೀಡಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭವರಣಗಳನ್ನು ಎಗರಿಸುತ್ತಿದ್ದ ಇಬ್ಬರು ಚಾಲಕಿ ಕಳ್ಳರನ್ನ ಹುಬ್ಬಳ್ಳಿಯ ಶಹರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಧಾರವಾಡದ ವಿರಕ್ತಾನ ಕಟಗಿ ಹಾಗೂ ಗದಗನ ಶರತ ಶ್ರೀಕಾಂತ ಕಾರಂತ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 3.98 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತ ಮಾಡಲಾಗಿದೆ. ಮೂರು ದಿನದ ಹಿಂದೆ ಈ ಇಬ್ಬರು ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ ಕಲ್ಯಾಣ ಜುವೇಲರ್ಸಗೆ ಭೇಟಿ ನೀಡಿದ್ದರು. ಮುಖಕ್ಕೆ‌ಮಾಸ್ಕ್ ಧರಿಸಿ […]

ಅಂತಾರಾಷ್ಟ್ರೀಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಇನ್ನು ಸಿದ್ಧಾರೂಢ ರೈಲ್ವೆ ಸ್ಟೇಷನ್

ಹುಬ್ಬಳ್ಳಿ prajakiran.com : ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲು ನಿಲ್ದಾಣವಾದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮಿಗಳ ಹೆಸರನ್ನು ಇಡಬೇಕು ಎಂಬ ಹುಬ್ಬಳ್ಳಿಗರ ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರದ ಎನ್​ಡಿಎ ಸರ್ಕಾರ ಕೊನೆಗು ಮಾನ್ಯ ಮಾಡಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಟಿ. ಹೆದಾವೂ ಅವರು ಈ ಕುರಿತು ಕರ್ನಾಟಕದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದು, ಹುಬ್ಬಳ್ಳಿ ರೈಲು ನಿಲ್ದಾಣವನ್ನು ಶ್ರೀ ಸಿದ್ಧಾರೂಢ ರೈಲು ನಿಲ್ದಾಣ […]

ಅಪರಾಧ

ಮಾಜಿ ಶಾಸಕ ಹಾಲಹರವಿ ಪುತ್ರ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ prajakiran.com : ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಪುತ್ರ ಸೂರಜ್ (18) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಸೂರಜ್ ತನ್ನ ಕೋಣೆಯಲ್ಲಿ  ಆತ್ಮಹತ್ಯೆಗೆ ಶರಣಾಗಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸದಾ ಲವಲವಿಕೆಯಿಂದ ಓಡಾಡಿಕೊಂಡಿದ್ದ ಸೂರಜ್ ಸಾವು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಂಗಳವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಬಿಜೆಪಿ ಮುಖಂಡರಿಗೆ ಹಾಗೂ ಸ್ಥಳೀಯರಿಗೆ ಆಘಾತ […]

dist hospital dharwad
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶನಿವಾರ 227 ಪಾಸಿಟಿವ್, 8 ಸಾವು

12684 ಕೋವಿಡ್  ಪ್ರಕರಣಗಳು : 9693 ಜನ ಗುಣಮುಖ ಬಿಡುಗಡೆ* ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ  227 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 12684 ಕ್ಕೆ ಏರಿದೆ. ಇದುವರೆಗೆ 9693 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2627 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 364 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. *ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:* *ಧಾರವಾಡ ತಾಲೂಕು:*  ಕವಲಗೇರಿ, ರವಿವಾರಪೇಟೆ ,ಮರಾಠಾ […]

ರಾಜ್ಯ

ಧಾರವಾಡದಲ್ಲಿ ಗುರುವಾರ 342 ಕರೋನಾ, 9 ಸಾವು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ 342  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 12,195ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.  ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರ ಸಂಖ್ಯೆ 346ಕ್ಕೆ ಏರಿದಂತಾಗಿದೆ.  ಗುರುವಾರ ಜಿಲ್ಲೆಯಲ್ಲಿ 203 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಈವರೆಗೆ 9222 ಜನರು ಬಿಡುಗಡೆಗೊಂಡತಾಗಿದೆ. ಇನ್ನೂ ಸಕ್ರಿಯ ಕರೋನಾ ಸೋಂಕಿತರು 2627 […]

ರಾಜ್ಯ

ಶಿಕ್ಷಕರ ದಿನಾಚರಣೆಗಾದರೂ ನೂತನ ತಾಲೂಕುಗಳಿಗೆ ನ್ಯಾಯ ನೀಡಿ

ನೂತನ ತಾಲೂಕು ರಚನೆ ಆಟಕ್ಕುಂಟು ಲೆಕ್ಕಕ್ಕಿಲ್ಲ  ಹುಬ್ಬಳ್ಳಿ prajakiran.com : ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ್ದ ನೂತನ ತಾಲೂಕು ಘೋಷಣೆ ಕೇವಲ ಕಾಗದದ ಕುದುರೆಯಾಗಿದೆ ಎಂದರೆ ತಪ್ಪಾಗಲಾರದು. ಕಳೆದ ಮೂರು ವರ್ಷಗಳ ಹಿಂದೆಯೇ ಘೋಷಣೆಯಾದ ತಾಲೂಕುಗಳಿಗೆ ಈವರೆಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಈಗ ಶಿಕ್ಷಕರ ದಿನಾಚರಣೆ ಆಚರಣೆ ವೇಳೆಯಾದರೂ ನೂತನ ತಾಲೂಕುಗಳಿಗೆ ಆಡಳಿತಾತ್ಮಕ ಶೈಕ್ಷಣಿಕ ಹಿತದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಂಜೂರು ಮಾಡಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ಆದೇಶಕ್ಕೆ ಕವೆಡೆ ಕಾಸಿನ ಕಿಮ್ಮತ್ತು […]