prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮುಂದೂಡಲು ಆಗ್ರಹ

ಧಾರವಾಡ Prajakiran.com : ರಾಜ್ಯದ  ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜು.15 ರಿಂದ ತರಬೇತಿ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿರುವುದು ಸರಿಯಾದ ಬೆಳವಣಿಗೆಯಲ್ಲ. ಒಂದೊಂದು ತರಬೇತಿ ಕೇಂದ್ರದಲ್ಲಿ 20 ಶಿಕ್ಷಕರು ಇರುತ್ತಾರೆ. ಜೊತೆಗೆ  ಶಿಕ್ಷಕರೇ ಸಾನಿಟೈಸರ್ ಮತ್ತು ಊಟವನ್ನು ತರಬೇಕು ಎಂದು ಅಧಿಕಾರಿಗಳು  ಸೂಚಿಸಿರುವುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. 5 ದಿನ ನಲಿಕಲಿ, 5 ದಿನ ಜೀವನ ಕೌಶಲ್ಯ, 5 ದಿನ ವಿಷಯ ಆಧಾರಿತ ತರಬೇತಿ ನೀಡಲಿದ್ದು,ಒಬ್ಬ ಶಿಕ್ಷಕರಿಗೆ 10 ದಿನ ತರಬೇತಿ ನೀಡಿದರೆ ಪ್ರತಿದಿನ ಕೊಠಡಿಯನ್ನು […]

ಜಿಲ್ಲೆ

ಧಾರವಾಡ ತಾಲೂಕಿನ ಹಲವು ಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ದೊಡ್ಡ ತಗ್ಗು ಗುಂಡಿ

ಮಂಜುನಾಥ ಕವಳಿ ಧಾರವಾಡ prajakiran.com : ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಗ್ರಾಮಗಳನ್ನು ಸಂರ್ಪಕಿಸುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದಾಗಿ ದಿನನಿತ್ಯ ನೂರಾರು ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವಂತಾಗಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಎಲ್ಲಿ ಅವು ತಮ್ಮ ಬಲಿ ತೆಗೆದುಕೊಳ್ಳುತ್ತವಯೋ ಎಂಬ ಭಯ ಆವರಿಸಿದೆ.   ಧಾರವಾಡದಿಂದ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆ ಹದಗೆಟ್ಟಿದ್ದರಿಂದ […]

ಜಿಲ್ಲೆ

ಧಾರವಾಡ ದಲಾಲ್ ವ್ಯಾಪಾರಸ್ಥರ ಸಂಘದಿಂದಲೂ ಸ್ವಯಂ ನಿರ್ಬಂಧ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗೂ ಮಹಾಮಾರಿ ಕರೋನಾ ವ್ಯಾಪಸುತ್ತಿರುವುದರಿಂದ ಧಾರವಾಡ ದಲಾಲ್ ವ್ಯಾಪಾರಸ್ಥರ ಸಂಘವು ಸ್ವಯಂ ಪ್ರೇರಿತವಾಗಿನಿರ್ಬಂಧ ಹೇರಲು ನಿರ್ಧರಿಸಿದೆ ಎಂದು ಸಂಘದಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ. ಜು. 13 ರಿಂದ ಜು. 31ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆಗೆ ಖರೀದಿ ಹಾಗೂ ಮಾರಾಟದ ವ್ಯಾಪಾರ ವಹಿವಾಟು ನಡೆಸಲಾಗುವುದು. ಹೀಗಾಗಿ ಧಾರವಾಡ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ರೈತರು ಮಧ್ಯಾಹ್ನ 3 ಗಂಟೆಗೆ ಒಳಗೆ ಧಾರವಾಡ ಎಪಿಎಂಸಿಗೆ ಆವರಣಕ್ಕೆ ಆಗಮಿಸಬೇಕು ಎಂದು […]

ರಾಜ್ಯ

ಧಾರವಾಡದ ಕೆಲಗೇರಿ ಸ್ವಯಂ ಪ್ರೇರಿತ ಲಾಕಡೌನ್ …!

ಧಾರವಾಡ prajakiran.com : ಧಾರವಾಡದಲ್ಲಿ ದಿನದಿಂದ ದಿನಕ್ಕೆ ಕರೊನಾ ಅಟ್ಟಹಾಸ ಮುಂದುವರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಹೊಂದಿಕೊಂಡಿರುವ ಕೆಲಗೇರಿ ಗ್ರಾಮವನ್ನು ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ಲಾಕಡೌನ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರೆಲ್ಲ ಸೇರಿಕೊಂಡು ಇಂತಹದೊಂದು ನಿರ್ಧಾರ ಕೈಗೊಂಡಿದ್ದು, ಗ್ರಾಮದ ಹಿರಿಯರು ಹಾಗೂ ಯುವಕರು ತಾವೇ ಸುತ್ತಾಡಿ ಎಲ್ಲವನ್ನೂ ಬಂದ್ ಮಾಡಿಸಿದ್ದಾರೆ. ಅಲ್ಲದೆ, ಈ ಕುರಿತು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿ, ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವಾರದ ಮಟ್ಟಿಗೆ ಗ್ರಾಮವನ್ನು […]

ಅಪರಾಧ

ಧಾರವಾಡದಲ್ಲಿ ಕೆಲ ಕಾಲ ಭಯ ಹುಟ್ಟಿಸಿದ ಅನಾಥ ಶವ….!

ಧಾರವಾಡ prajakiran.com : ಧಾರವಾಡದ ಸುಭಾಸ ರಸ್ತೆಯ ಕೆಸಿಸಿ ಬ್ಯಾಂಕ್ ಪಕ್ಕದ ಹೋಟೆಲ್ ಎದುರು ಪತ್ತೆಯಾದ‌ ವ್ಯಕ್ತಿಯ ಶವ ಶುಕ್ರವಾರ ಕೆಲ ಕಾಲ ಸ್ಥಳೀಯರಿಗೆ ಭಯ ಹುಟ್ಟಿಸಿತ್ತು. ಸುಮಾರು ೪೫ ವರ್ಷದ ವ್ಯಕ್ತಿ ಬೆಳ್ಳಂ ಬೆಳಗ್ಗೆ ಹೋಟೆಲ್ ಮುಂದೆ ಶವವಾಗಿ ಪತ್ತೆಯಾಗಿದ್ದ. ಬೆಳಗ್ಗೆ ಅಂಗಡಿ ಮಾಲೀಕ ಬಂದಾಗ ಈ ಮಾಹಿತಿ ತಿಳಿದು ಬೆಚ್ಚಿಬಿದ್ದಿದ್ದ. ತಕ್ಷಣ ಸ್ಥಳೀಯರು ಅಕ್ಕ ಪಕ್ಕದ ಅಂಗಡಿಯವರು ಕೂಡಲೇ ಜಿಲ್ಲಾಡಳಿತದ ಕಂಟ್ರೋಲ್ ರೂಂ.ಗೆ, ೧೦೮ ಸಿಬ್ಬಂದಿಗೆ ಸಹ ಮಾಹಿತಿ ನೀಡಿದ್ದರು.  ಆನಂತರ ಸ್ಥಳಕ್ಕೆ ಬಂದಅಂಬುಲೈನ್ಸ್ […]

ರಾಜ್ಯ

ಯಾದಗಿರಿ ಜಿಲ್ಲಾ ಪಂಚಾಯತ್ : ಕಾಂಗ್ರೆಸನ ಬಂಡಾಯ ಅಭ್ಯರ್ಥಿ ಗೆ ಬಿಜೆಪಿಯ10 ಸದಸ್ಯರ ಬೆಂಬಲ….!

ಯಾದಗಿರಿ prajakiran.com : ಕಳೆದ ದಿನಗಳ ಹಿಂದೆ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವು ತೆರವಾದ ಹಿನ್ನೆಲೆಯಲ್ಲಿ ನಡೆದ ಜುಲೈ 10 ರಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು. ಕರೋನ ವೈರಸ್ ನಿಂದ ಸ್ವಲ್ಪ ತಡೆ : ಯಾದಗಿರಿ ಜಿಲ್ಲಾಡಳಿತದ ಸಿಬ್ಬಂದಿಗಳಿಗೆ ಕರೋನಾವೈರಸ್  ಬಂದಿರುವ ಹಿನ್ನೆಲೆ ಜಿಲ್ಲಾಡಳಿತದ ಭವನಕ್ಕೆ ಸಂಪೂರ್ಣ ಸ್ಯಾನಿಟೇಜಿಂಗ್ ಸಿಂಪರಣೆ ಮಾಡಲಾಗುತ್ತಿತ್ತು. ಹೀಗಾಗಿ ಬೆಳಿಗ್ಗೆ ಪ್ರಾರಂಭವಾಗಬೇಕಿದ್ದ  ಜಿಲ್ಲಾ ಪಂಚಾಯತ್ ಅಧ್ಯಕ್ಷರ  ಚುನಾವಣೆ    ಮಧ್ಯಾಹ್ನ ಪ್ರಾರಂಭವಾಯಿತು. ಮಧ್ಯಾಹ್ನ 3 ಗಂಟೆಗೆ 22 ಜಿಲ್ಲಾ […]

ರಾಜ್ಯ

ಧಾರವಾಡದ ವ್ಯಾಪಾರಸ್ಥರಿಂದಲೂ ಸ್ವಯಂ ಪ್ರೇರಿತ ನಿರ್ಬಂಧ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಧಾರವಾಡದ ವಿವಿಧ ವ್ಯಾಪಾರಸ್ಥರು ಸ್ವಯಂಪ್ರೇರಿತ ನಿರ್ಬಂಧವಿಧಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಧಾರವಾಡದ ಗ್ರಾಹಕ ವಸ್ತುಗಳ ವಿತರಕರ ಸಂಘ, ಕಿರಾಣಿ ವರ್ತಕರ ಸಂಘ, ಜ್ಯುವೆಲರಿ ವರ್ತಕರ ಸಂಘ, ಬಟ್ಟೆ ವ್ಯಾಪಾರಿ ವರ್ತಕರ ಸಂಘ, ಹೋಲ್ ಸೇಲ್ ವ್ಯಾಪಾರಸ್ಥರ ಸಂಘ, ಹೂ ವ್ಯಾಪಾರಸ್ಥರ ಸಂಘ, ಎಲಿ ಅಡಿಕೆ ವರ್ತಕರ ಸಂಘ ಸೇರಿದಂತೆ ಇನ್ನಿತರ ಎಲ್ಲಾ ವ್ಯಾಪಾರಿ ಸಂಘಗಳು ಧಾರವಾಡದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ […]

ರಾಜ್ಯ

ಧಾರವಾಡದಲ್ಲಿ ಎರಡನೇ ದಿನ 5 ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ

ಧಾರವಾಡ prajakiran.com : ಕೋವಿಡ್ ಸೋಂಕು ಇದ್ದರೂ ಕೂಡ ರೋಗ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣವುಳ್ಳ ಜನರಿಗೆ ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇದ್ದು ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ಪಡೆಯುವ  ಅವಕಾಶ ಕಲ್ಪಿಸಲಾಗಿದೆ. ಮೋದಲ ದಿನ 12 ಜನರು ಮನೆಯಲ್ಲಿಯೇ ಚಿಕಿತ್ಸೆಗೆ ಸಮ್ಮತಿ ಪಡೆದಿದ್ದರೆ, ಎರಡನೇ  ದಿನ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ 5  ಜನ ಸ್ವಯಂ ಪ್ರೇರಣೆಯಿಂದ ಈ ಮಾದರಿಯ ಚಿಕಿತ್ಸೆ ಆಯ್ದುಕೊಂಡಿದ್ದಾರೆ. ದೇಶದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ , ಕೋವಿಡ್ ಸೋಂಕು ಇದ್ದರೂ ರೋಗ […]

ರಾಜ್ಯ

ಧಾರವಾಡ 17, ಹುಬ್ಬಳ್ಳಿ 24, ಕುಂದಗೋಳ 5, ನವಲಗುಂದ 3 ಸೇರಿ 50 ಜನರಿಗೆ ಪಾಸಿಟಿವ್  

*ಒಟ್ಟು 882 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 332 ಜನ ಗುಣಮುಖ ಬಿಡುಗಡೆ* *521 ಸಕ್ರಿಯ ಪ್ರಕರಣಗಳು* ಇದುವರೆಗೆ 29  ಮರಣ ಧಾರವಾಡ prajakiran.com : ಜಿಲ್ಲೆಯಲ್ಲಿ ಶುಕ್ರವಾರ ಮತ್ತೇ ಹೊಸದಾಗಿ 50 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 882 ಕ್ಕೆ ಏರಿದೆ. ಇದುವರೆಗೆ 332 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 521 ಪ್ರಕರಣಗಳು ಸಕ್ರಿಯವಾಗಿವೆ.ಅಲ್ಲದೆ, ಈವರೆಗೆ ಚಿಕಿತ್ಸೆ ಫಲಿಸದೆ ಒಟ್ಟು 29 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ […]

ರಾಜ್ಯ

ವಿಜಯಪುರ  ಎಸ್ಪಿ ಕಚೇರಿ, ಗ್ರಾಮೀಣ ಪೊಲೀಸ್ ಠಾಣೆ ಸೀಲ್ ಡೌನ್

ವಿಜಯಪುರ prajakiran.com : ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯ ಎ ಎಸ್ ಐ ಒಬ್ಬರಿಗೆ ಕರೋನಾ ಬಂದ ಹಿನ್ನಲೆಯಲ್ಲಿ ಎಸ್ಪಿ ಕಚೇರಿಯನ್ನೇ ಸೀಲ್ ಡೌನ್ ಮಾಡಲಾಗಿದೆ. ಅದೇರೀತಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಕಾನ್ಸಟೇಬಲ್ ಒಬ್ಬರಿಗೆ ಕರೋನಾ ಪಾಸಿಟಿವ್ ಇರುವುದು ದೃಢಪಟ್ಟ ಹಿನ್ನಲೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಕರೋನಾ ರಣಕೇಕೆ ಹಾಕುತ್ತಿದ್ದು, ಕೊರೊನಾ ವಾರಿಯರ್ಸ್ ಆಗಿರುವ ಪೊಲಿಸ್ ಇಲಾಖೆಗೂ ಇದೀಗ ಕೊರೊನಾ ಭಯ ಶುರುವಾಗಿದೆ.  ಈಗಾಗಲೇ ಎಸ್ಪಿ […]