ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಧಾರವಾಡದ ವಿವಿಧ ವ್ಯಾಪಾರಸ್ಥರು ಸ್ವಯಂಪ್ರೇರಿತ ನಿರ್ಬಂಧವಿಧಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಧಾರವಾಡದ ಗ್ರಾಹಕ ವಸ್ತುಗಳ ವಿತರಕರ ಸಂಘ, ಕಿರಾಣಿ ವರ್ತಕರ ಸಂಘ, ಜ್ಯುವೆಲರಿ ವರ್ತಕರ ಸಂಘ, ಬಟ್ಟೆ ವ್ಯಾಪಾರಿ ವರ್ತಕರ ಸಂಘ, ಹೋಲ್ ಸೇಲ್ ವ್ಯಾಪಾರಸ್ಥರ ಸಂಘ, ಹೂ ವ್ಯಾಪಾರಸ್ಥರ ಸಂಘ, ಎಲಿ ಅಡಿಕೆ ವರ್ತಕರ ಸಂಘ ಸೇರಿದಂತೆ ಇನ್ನಿತರ ಎಲ್ಲಾ ವ್ಯಾಪಾರಿ ಸಂಘಗಳು ಧಾರವಾಡದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ಸೋಮವಾರದಿಂದ ಜು.13 ರಿಂದ ಜು. 31 ವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಾಯಂಕಾಲ 4 ಗಂಟೆಯವರೆಗೆ ಮಾತ್ರ ವ್ಯಾಪಾರ, ವಹಿವಾಟು ಮಾಡಲು ನಿರ್ಧರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಧಾರವಾಡ ಸಮಸ್ತ ನಾಗರಿಕರಿರು ಸಹಕರಿಸುವ ಮೂಲಕ ಕರೋನಾ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ವಿನಂತಿಸಿದ್ದಾರೆ.