prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ವಿದ್ಯಾನಗರಿ ಧಾರವಾಡದಲ್ಲಿ ಒಂದೇ ದಿನ ಐದು ಪ್ರಕರಣ ಪತ್ತೇ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಶನಿವಾರ ಬೆಳಗ್ಗೆಯಷ್ಟೇ ಒಂದು ಕರೋನಾ ಪ್ರಕರಣ ದೃಢಪಟ್ಟಿತ್ತು. ಸಂಜೆ ವೇಳೆಗೆ ಮತ್ತೇ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಪಿ-1913 ನೇ ಸೋಂಕಿತ 51 ವರ್ಷದ ಪುರುಷ ಮಹಾರಾಷ್ಟ್ರ ರಾಜ್ಯದಿಂದ ಧಾರವಾಡಕ್ಕೆ ಹಿಂದಿರುಗಿರುವ  ಪ್ರಯಾಣ ಹಿನ್ನೆಲೆ ಹೊಂದಿದ್ದರು. ಅದೇ ರೀತಿ ಸಂಜೆಯ ವೇಳೆಗೆ ಬಂದ ಸೋಂಕಿತರನ್ನು ಪಿ-1942 (29 ವರ್ಷ ದ ಮಹಿಳೆ), […]

ರಾಜ್ಯ

ರಾಜ್ಯದಲ್ಲಿ ಬೆಳಗ್ಗೆ196, ಸಂಜೆ 20 ಪಾಸಿಟಿವ್ ಕೇಸ್ ಪತ್ತೆ : 1959ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರ ಒಂದೇ ದಿನ 216 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿದೆ. ಆ ಮೂಲಕ  ರಾಜ್ಯದ ಸೋಂಕಿತರ ಸಂಖ್ಯೆ1959ಕ್ಕೆ ಏರಿಕೆಯಾಗಿದೆ. ಇವತ್ತು 15 ಜಿಲ್ಲೆಗಳಲ್ಲಿ ಡೆಡ್ಲಿ ವೈರಸ್ ವಕ್ಕರಿಸಿಕೊಂಡಿದೆ. ರಾಜ್ಯದಲ್ಲಿಸಾವನ್ನಪ್ಪಿದ್ದವರ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ. ಈವರೆಗೆ 608 ಜನ ಗುಣಮುಖರಾಗಿದ್ದು, 1307 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಅತಿ ಹೆಚ್ಚು ಪ್ರಕರಣಗಳು ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದ್ದು, ಬರೋಬ್ಬರಿ  72 ಜನರಿಗೆ ಡೆಡ್ಲಿ ಕರೋನಾ […]

ರಾಜ್ಯ

ಪೊಲೀಸ್ ಜೀಪ್ ದುರ್ಬಳಕೆ ಮಾಡಿದ ಹುಬ್ಬಳ್ಳಿಯ ಪಿಎಸ್‌ಐ ಅಮಾನತು

ಹುಬ್ಬಳ್ಳಿ prajakiran.com : ಲಾಕ್ ಡೌನ್ ಅವಧಿಯಲ್ಲಿ ಪೊಲೀಸ್ ಜೀಪ್ ದುರ್ಬಳಕೆ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯ ಪಿಎಸ್‌ಐ ಅಮಾನತುಗೊಂಡಿದ್ದಾರೆ. ಹುಬ್ಬಳ್ಳಿಯ ಪೊಲೀಸ್ ಅರಣ್ಯ ಘಟಕದ ಪಿಎಸ್‌ಐ ಶಿವಾನಂದ ಅರೆನಾಡ್ ಅಮಾನತು ಆದ ಪಿಎಸ್‌ಐ ಆಗಿದ್ದಾರೆ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಏ-17 ರಂದು ಅರಣ್ಯ ಘಟಕಕ್ಕೆ ಸೇರಿದ KA-25 G-303 ಸಾರ್ವಜನಿಕರು ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದ ಪಿಎಸ್‌ಐ  ಶಿವಾನಂದಅವರ ಆಡಿಯೋ ಹಾಗೂ ಅವರು ತೆಗೆದುಕೊಂಡು ಹೋಗಿದ್ದ ವಾಹನದ […]

ರಾಜ್ಯ

ಬೆಳಗಾವಿಯ ನಾಲ್ಕು ತಿಂಗಳ ಗರ್ಭಿಣಿಗೆ ಸೊಂಕು ಧೃಡ..!

ಬೆಳಗಾವಿ prajakiran.com : ನಾಲ್ಕು ತಿಂಗಳ ಗರ್ಭಿಣಿಗೆ ಸೊಂಕು ದೃಢವಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ ಮಹಿಳೆ ಮೇ 17 ರಂದು ಮುಂಬೈನಿಂದ ಶಿವಪೇಟೆಗೆ ಮರಳಿದ್ದರು. 27 ವರ್ಷದ ಗರ್ಭಿಣಿಗೆ ಮುಂಬೈನಿಂದ ಮರಳಿದ ನಂತರ ರಾಮದುರ್ಗದಲ್ಲಿ ಗಂಟಲು ದ್ರವ ತಪಾಸಣೆ ನಡೆಸಲಾಗಿತ್ತು. ನಂತರ ರಾಮದುರ್ಗ ಬಿಸಿಎಂ ಹಾಸ್ಟೆಲ್ ಕ್ವಾರಂಟೇನ್ ಮಾಡಲಾಗಿತ್ತು. ಸೊಂಕು ಧೃಡವಾದ ಹಿನ್ನಲೆಯಲ್ಲಿ ಗರ್ಭಿಣಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೋಂಕಿತ ಗರ್ಭಿಣಿಯನ್ನು ಪಿ-1814ನೇ 27 ವರ್ಷದ ಮಹಿಳೆ ಎಂದು ಆರೋಗ್ಯ ಇಲಾಖೆ […]

ರಾಜ್ಯ

ಸಾಂಸ್ಥಿಕ ಕ್ವಾರಂಟೈನ್ ಅವಧಿ  ಏಳು ದಿನಗಳಿಗೆ ಇಳಿಸಿದ ಸರಕಾರ

ಧಾರವಾಡ prajakiran.com  : ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಅತಿ ಹೆಚ್ಚು ಪ್ರಕರಣಗಳಿರುವ ರಾಜ್ಯಗಳಿಂದ ಆಗಮಿಸುವ ಜನರನ್ನು ಕೇವಲ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ ನಂತರ ಏಳು ದಿನಗಳ ಹೋಂ ಕ್ವಾರಂಟೈನ್ ನಲ್ಲಿರಿಸಲಾಗುವುದು. ಇತರ ರಾಜ್ಯಗಳಿಂದ ಬರುವ ಜನರನ್ನು ನೇರವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗುವುದು. ಜಿಲ್ಲೆಯ ಸಾಂಸ್ಥಿಕ ಹಾಗೂ ಹೋಟೆಲ್ ಕ್ವಾರಂಟೈನ್ ನಲ್ಲಿ ಏಳುದಿನಗಳ ಅವಧಿ ಪೂರ್ಣಗೊಳಿಸಿರುವ ವ್ಯಕ್ತಿಗಳನ್ನು ಮತ್ತೊಂದು ಬಾರಿ ಕೋವಿಡ್ ತಪಾಸಣೆಗೊಳಪಡಿಸಿ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ […]

ರಾಜ್ಯ

ಧಾರವಾಡದಲ್ಲಿ ಮತ್ತೊಂದು  ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ prajakiran.com : ಧಾರವಾಡದ ಜಿಲ್ಲೆಯಲ್ಲಿ ಶನಿವಾರ ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-1913 ನೇ ಸೋಂಕಿತ 51 ವರ್ಷದ ಪುರುಷ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿರುವ  ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಇವರು ಧಾರವಾಡ ಜಿಲ್ಲೆಗೆ ಬಂದ ಕೂಡಲೇಅವರ ಗಂಟಲು ದ್ರವ ಪರೀಕ್ಷೆಗೊಳಪಡಿಸಿ, ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಆ ಮೂಲಕ ಧಾರವಾಡ  ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  34 ಕ್ಕೆ ಏರಿಕೆಯಾಗಿದೆ.  ಈಗಾಗಲೇ  ಜಿಲ್ಲೆಯ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ […]

ರಾಜ್ಯ

ರಾಜ್ಯದಲ್ಲಿ ಒಂದೇ ದಿನ  196 ಪಾಸಿಟಿವ್ ಕೇಸ್ : 1939ಕ್ಕೆ ಏರಿಕೆ ರಾಜ್ಯದ ಸೋಂಕಿತರ ಸಂಖ್ಯೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರ ಒಂದೇ ದಿನ 196 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಅದರಲ್ಲೂ 184 ಕೇಸ್ ಗಳಿಗೆ ಅಂದರೆ ಶೇ 95ರಷ್ಟು ಮಹಾರಾಷ್ಟ್ರ ಹಾಗೂ ಮುಂಬಯಿ ಸೋಂಕಿನ ಮೂಲ ಹೊಂದಿವೆ. ಆ ಮೂಲಕ  ರಾಜ್ಯದ ಸೋಂಕಿತರ ಸಂಖ್ಯೆ1939ಕ್ಕೆ ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿಸಾವನ್ನಪ್ಪಿದ್ದವರ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ. ಈವರೆಗೆ 598 ಜನ ಗುಣಮುಖರಾಗಿದ್ದು, 1297 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿ ಹೆಚ್ಚು ಪ್ರಕರಣಗಳು ಯಾದಗಿರಿ ಜಿಲ್ಲೆಯಲ್ಲಿ […]

ಅಪರಾಧ

ಹುಬ್ಬಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಬಲಿ

ಹುಬ್ಬಳ್ಳಿ prajakiran.com :  ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಹುಬ್ಬಳ್ಳಿ ತಾಲೂಕು ಕುಸುಗಲ್ಲ ಗ್ರಾಮದ ಇಂಗಳಹಳ್ಳಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮೃತರನ್ನು ಕುಸುಗಲ್ ಗ್ರಾಮದ ಉಸ್ಮಾನಸಾಬ ಖಾದರಸಾಬ ಡಂಬಳ (30) ಹಾಗೂ ಅಭಿಷೇಕ ಸಿದ್ದಪ್ಪ ಈರಣ್ಣವರ (16) ಎಂದು ಗುರುತಿಸಲಾಗಿದೆ. ಅಬ್ದುಲ್ ಕಡೇಮನಿ (69) ಎಂಬುವರೇ ಗಾಯಗೊಂಡಿದ್ದಾರೆ. ಕುಸುಗಲ್ ಗ್ರಾ.ಪಂ ವಾರ್ಡ್ ನಂ4 ರ ಸದಸ್ಯೆ ಲಕ್ಷ್ಮೀಭಾಯಿ ಈರಣ್ಣವರ ಏಕೈಕ ಪುತ್ರನಾಗಿದ್ದ ಅಭಿಷೇಕ್, ಬೆಳಿಗ್ಗೆ […]