ರಾಜ್ಯ

ವಿದ್ಯಾನಗರಿ ಧಾರವಾಡದಲ್ಲಿ ಒಂದೇ ದಿನ ಐದು ಪ್ರಕರಣ ಪತ್ತೇ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಶನಿವಾರ ಬೆಳಗ್ಗೆಯಷ್ಟೇ ಒಂದು ಕರೋನಾ ಪ್ರಕರಣ ದೃಢಪಟ್ಟಿತ್ತು.

ಸಂಜೆ ವೇಳೆಗೆ ಮತ್ತೇ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಪಿ-1913 ನೇ ಸೋಂಕಿತ 51 ವರ್ಷದ ಪುರುಷ ಮಹಾರಾಷ್ಟ್ರ ರಾಜ್ಯದಿಂದ ಧಾರವಾಡಕ್ಕೆ ಹಿಂದಿರುಗಿರುವ  ಪ್ರಯಾಣ ಹಿನ್ನೆಲೆ ಹೊಂದಿದ್ದರು.

ಅದೇ ರೀತಿ ಸಂಜೆಯ ವೇಳೆಗೆ ಬಂದ ಸೋಂಕಿತರನ್ನು ಪಿ-1942 (29 ವರ್ಷ ದ ಮಹಿಳೆ), ಪಿ- 1943 ( 58 ವರ್ಷದ ಪುರುಷ), ಪಿ-1944 ( 2 ವರ್ಷದ ಗಂಡು ಮಗು), ಪಿ- 1945 ( 49 ವರ್ಷದ ಮಹಿಳೆ) ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಧಾರವಾಡಕ್ಕೆ ಹಿಂದಿರುಗಿರುವ  ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಒಂದೇ ಕುಟುಂಬದ ಸದಸ್ಯರಿದ್ದಾರೆ ಎಂದು ಧಾರವಾಡ ಜಿಲ್ಲಾಡಳಿತ ತಿಳಿಸಿದೆ. 

ಇವರು ಮಹಾರಾಷ್ಟ್ರದಿಂದ ಧಾರವಾಡ ಜಿಲ್ಲೆಗೆ ಬಂದ ಕೂಡಲೇಅವರ ಗಂಟಲು ದ್ರವ ಪರೀಕ್ಷೆಗೊಳಪಡಿಸಿ,ಅವರನ್ನು ಮುಂಜಾಗ್ರತ ಕ್ರಮವಾಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  38 ಕ್ಕೆ ಏರಿಕೆಯಾಗಿದೆ. 

ಈಗಾಗಲೇ  ಜಿಲ್ಲೆಯ 10  ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ . ಉಳಿದ 28 ಜನರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ವಿವರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *