ರಾಜ್ಯ

ಬೆಳಗಾವಿಯ ನಾಲ್ಕು ತಿಂಗಳ ಗರ್ಭಿಣಿಗೆ ಸೊಂಕು ಧೃಡ..!

ಬೆಳಗಾವಿ prajakiran.com : ನಾಲ್ಕು ತಿಂಗಳ ಗರ್ಭಿಣಿಗೆ ಸೊಂಕು ದೃಢವಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ ಮಹಿಳೆ ಮೇ 17 ರಂದು ಮುಂಬೈನಿಂದ ಶಿವಪೇಟೆಗೆ ಮರಳಿದ್ದರು.

27 ವರ್ಷದ ಗರ್ಭಿಣಿಗೆ ಮುಂಬೈನಿಂದ ಮರಳಿದ ನಂತರ ರಾಮದುರ್ಗದಲ್ಲಿ ಗಂಟಲು ದ್ರವ ತಪಾಸಣೆ ನಡೆಸಲಾಗಿತ್ತು.

ನಂತರ ರಾಮದುರ್ಗ ಬಿಸಿಎಂ ಹಾಸ್ಟೆಲ್ ಕ್ವಾರಂಟೇನ್ ಮಾಡಲಾಗಿತ್ತು. ಸೊಂಕು ಧೃಡವಾದ ಹಿನ್ನಲೆಯಲ್ಲಿ ಗರ್ಭಿಣಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸೋಂಕಿತ ಗರ್ಭಿಣಿಯನ್ನು ಪಿ-1814ನೇ 27 ವರ್ಷದ ಮಹಿಳೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆ ಮೂಲಕ ಕುಂದಾನಗರಿ ಬೆಳಗಾವಿಗೆ ಮತ್ತೆ ಮುಂಬೈ ನಂಜಿನ ಆತಂಕ ತಂದಿದೆ. ಸೋಂಕಿತ ಮಹಿಳೆಯ ಸಂಪರ್ಕದಲ್ಲಿದ್ದ ಆರು ಜನರಿಗೆ ಜಿಲ್ಲಾಡಳಿತ ಕ್ವಾರೆಂಟನ್ ಮಾಡಿದೆ.

ವಿಜಯಪುರ ಜಿಲ್ಲೆಯ ಇಂಡಿ ಮಾರ್ಗವಾಗಿ ರಾಮದುರ್ಗದ ಶಿವಪೇಟ ಗ್ರಾಮಕ್ಕೆ ಗರ್ಭೀಣಿ ಆಗಮಿಸಿದ್ದರು.  ಆ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. ಅದರಲ್ಲಿ ಒಬ್ಬ ವೃದ್ಧೆ ಸಾವನ್ನಪ್ಪಿದ್ದಾರೆ.  

ಚಿಕ್ಕೋಡಿಯ ಇಂಗಳಿಯಲ್ಲಿ ಕರೋನಾ ಪಾಸಿಟಿವ್ :

ಜಾರ್ಖಂಡನಿಂದ ತವರಿಗೆ ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಕರೋನಾ ಪಾಸಿಟಿವ್ ಕೇಸ್ ಪತ್ತೆಯಾದ ಪ್ರಕರಣ ಚಿಕ್ಕೋಡಿ ತಾಲೂಕಿನ ಇಂಗಳಿಯಲ್ಲಿ ನಡೆದಿದೆ.

ಸ್ಥಳೀಯ ಶಾಲೆಯೊಂದರಲ್ಲಿ 6 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 75 ವಯಸ್ಸಿನ ಕೇಸ್ ನಂಬರ 1687 ರ ವ್ಯಕ್ತಿಗೆ ಸೋಂಕು ದೃಢವಾಗಿದೆ.

ಇಂಗಳಿ ಗ್ರಾಮದ ೬ ಜನರು ಶ್ರಾವಕಿಯರು,ಶ್ರಾವಕರು ಸಮ್ಮೇದ ಶಿಖರಜೀಗೆ ತೆರಳಿ ವಾಪಸ್ಸು ಆಗಿದ್ರು.ಎಲ್ಲರನೂ ಕ್ವಾರಂಟೈನ್ ಮಾಡಲಾಗಿತ್ತು.

ಅವರ ಗಂಟಲು ದ್ರವದ ತಪಾಸಣೆ ಮಾಡಿದಾಗ ಒಬ್ಬನಿಗೆ ಸೊಂಕು ಕಾಣಿಸಿಕೊಂಡಿದೆ. ನಂತರ ಆ್ಯಂಬುಲೆನ್ಸ್ ಮುಖಾಂತರ ಆ ವ್ಯಕ್ತಿಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.

ಸ್ಥಳಕ್ಕೆ ತಹಶೀಲ್ದಾರ ಎಸ ಎಸ್ ಸಂಪಗಾವಿ ,ತಾಲೂಕಾ ವೈದ್ಯಾಧಿಕಾರಿ ಡಾ. ವಿಠ್ಠಲ ಶಿಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *