prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಇನ್ನಿಲ್ಲ

ಕೆ.ಆರ್. ಪೇಟೆ prajakiran.com : ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರು ಇಹಲೋಕ ತ್ಯಜಿಸಿದರು. ಅವರು ಚೆನ್ನೈ ನ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಚಿಕಿತ್ಸೆ ಫಲಿಸದೆ ವಿಧಿವಶರಾದರು. ಅವರು ಪತ್ನಿ ಇಂದ್ರಮ್ಮ, ಪುತ್ರಿ ಮಂಜುಳಾ, ಅಳಿಯ ಶ್ರೀಧರ್ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೃಷ್ಣ ಅವರ ಸ್ವಗ್ರಾಮ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೊತ್ತಮಾರನಹಳ್ಳಿ ಗ್ರಾಮದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ […]

ಸಿನಿಮಾ

ಕಿರಿಕ್ ಬೆಡಗಿ ಸಂಯುಕ್ತಾ ಹೆಗಡೆಗೂ ಒಕ್ಕರಿಸಿದ ಸೋಂಕು

ಬೆಂಗಳೂರು prajakiran. com : ಸ್ಯಾಂಡಲ್ ವುಡ್ ನಟಿ ಕಿರಿಕ್ ಪಾರ್ಟಿಯ ನಾಯಕಿ ಸಂಯುಕ್ತಾ ಹೆಗಡೆ ತಂದೆ ತಾಯಿಗೆ ಸೋಂಕು ತಗುಲಿತ್ತು. ಇದೀಗ ನಟಿ ಸಂಯುಕ್ತಾರಿಗೂ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಯುಕ್ತಾ, ಅಪ್ಪ ಅಮ್ಮನಿಗೂ ಕೊರೋನಾ ಸೋಂಕು ತಗುಲಿದೆ.  ಯಾವ ಆಸ್ಪತ್ರೆಯಲ್ಲಿಯೂ ಬೆಡ್ ಇಲ್ಲ. ಹೀಗಾಗಿ ಮನೆಯಲ್ಲೇ ಆರೈಕೆ ಮಾಡುತ್ತಿದ್ದೇವೆ.ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.  ಈ ನಡುವೆ ನನಗೂ ಸೋಂಕು ತಗುಲಿದೆ. ಸದ್ಯ ಅಪ್ಪ, ಅಮ್ಮನ ಆರೈಕೆ ಮುಖ್ಯವಾಗಿದೆ […]

ರಾಜ್ಯ

ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆಸುವುದರ ಕುರಿತು ನಾಳೆ ತೀರ್ಮಾನ: ಸಿಎಂ ಬಿ.ಎಸ್ ಯಡಿಯೂರಪ್ಪ

ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ತಗ್ಗಿಸಲು ಮೇ 24ರ ವರೆಗೆ ಲಾಕ್‌ಡೌನ್ ಜಾರಿಮಾಡಲಾಗಿತ್ತು. ಅದರಂತೆ ಹೊಸ ಸೋಂಕಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.‌ ಈ ಹಿನ್ನೆಲೆ ಈಗ ಜಾರಿಗೊಳಿಸಿದ ಲಾಕ್‌ಡೌನ್ ಮೇ.24ಕ್ಕೆ ಮುಕ್ತಾಯವಾಗಲಿದೆ. ಕೊರೋನಾ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಲಾಕ್‌ಡೌನ್ ವಿಸ್ತರಣೆ ಕುರಿತು ನಾಳೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಲಾಕ್‌ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. Share on: WhatsApp

ಸಿನಿಮಾ

ಮೆಗಾಸ್ಟಾರ್ ಮೋಹನ್ ಲಾಲ್‌ಗೆ 61ನೇ ಹುಟ್ಟುಹಬ್ಬ

ತಿರುವನಂತಪುರಂ Prajakiran.com : ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಟನಿಗೆ ಭರಪೂರ ಶುಭಾಶಯಗಳ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಐದು ಬಾರಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ಮೋಹನ್ ಲಾಲ್ ಗೆ ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಲಯಾಳಂ ಸಿನಿಮಾರಂಗದ ಜತೆಗೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ಲಾಲ್ ನಾಲ್ಕು ದಶಕಗಳನ್ನು ಸಿನಿಮಾರಂಗದಲ್ಲೇ ಕಳೆದಿದ್ದಾರೆ. ಇದುವರೆಗೂ 340ಕ್ಕೂ ಅಧಿಕ […]

ಕ್ರೀಡೆ

ಶೂಟಿಂಗ್ ಕೋಚ್ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್‌ಗೆ ಬಲಿ

ನವದೆಹಲಿ prajakiran.com : ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್‌ನಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದ ಅವರಿಗೆ ಬ್ಲಾಕ್‌ಫಂಗಸ್ ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು. ಮೊನಾಲಿ ಅವರ ನಿಧನದ ಕೆಲ ಗಂಟೆಗಳ ಹಿಂದೆಯಷ್ಟೇ ಅವರ ತಂದೆ ಮನೋಹರ್ ಗೊರ್ಹೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದರು. ಮೊನಾಲಿ ಪಿಸ್ತೂಲ್ ಕೋರ್ ಗುಂಪಿನ ತರಬೇತುದಾರರಾಗಿದ್ದರು.  ಶ್ರೀಲಂಕಾದ ಶೂಟಿಂಗ್ ತಂಡದ ರಾಷ್ಟ್ರೀಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು.  Share on: WhatsApp

ಅಂತಾರಾಷ್ಟ್ರೀಯ

ಮಹಾರಾಷ್ಟ್ರ: ಪೊಲೀಸರ ಗುಂಡಿಗೆ 13 ನಕ್ಸಲರು ಬಲಿ

ಮುಂಬೈ prajakiran.com : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದ ಎನ್ ಕೌಂಟರ್ ನಲ್ಲಿ 13 ನಕ್ಸಲರು ಪೊಲೀಸರು ಪೋಲಿಸರ ಗುಂಟಿಗೆ ಬಲಿಯಾಗಿದ್ದಾರೆ. ಈ ಕುರಿತು ಗಡ್ಚೊಲಿ ಜಿಲ್ಲೆಯ ಡಿಐಜಿ ಸಂದೀಪ್ ಪಾಟೀಲ್ ಟ್ವಿಟ್ ಮಾಡಿದ್ದು, ಗಡ್ಚಿರೋಲಿ ಅರಣ್ಯ ಪ್ರದೇಶದ ಎಟಪಲ್ಲಿ ಎಂಬಲ್ಲಿ ಸಿ-60 ಕಮಾಂಡೊ ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ 13 ಮಂದಿ ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ […]

ಅಂತಾರಾಷ್ಟ್ರೀಯ

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಇನ್ನು ನೆನಪು ಮಾತ್ರ

ಬೆಳಗಾವಿ prajakiran. com : ಕೇಂದ್ರದ ಮಾಜಿ ಸಚಿವರು, ಹಿರಿಯ ರೈತ ಹೋರಾಟಗಾರರು ಆದ ಬಾಬಾಗೌಡ ಪಾಟೀಲ (76) ಶುಕ್ರವಾರ ಬೆಳಗ್ಗೆ ವಿಧಿವಶರಾದರು. ಕಳೆದ ಕೆಲ ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು , ಅಪಾರ ಬಳಗ ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ. ನಾಡಿನ ರೈತ ಚಳುವಳಿಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ ಇನ್ನಿತರರ ಜೊತೆ […]

ಜಿಲ್ಲೆ

ಧಾರವಾಡದ ಹೆಬ್ಬಳ್ಳಿ ಗ್ರಾಮ 3 ದಿನ ಸಂಪೂರ್ಣ ಸ್ವಯಂ ಲಾಕಡೌನ್

ಧಾರವಾಡ : ಜಿಲ್ಲಾಧಿಕಾರಿ ಗಳ ಆದೇಶ ಮತ್ತು ಹೆಬ್ಬಳ್ಳಿ ಗ್ರಾಮದ ಕಾರ್ಯಪಡೆಯ ಸಭೆಯಲ್ಲಿ ಚರ್ಚೆ ಮಾಡಿ ಕೋವಿಡ್ ಪ್ರಕರಣಗಳನ್ನು ತಡೆಯಲು ಹೆಬ್ಬಳ್ಳಿ ಗ್ರಾಮ ಲಾಕ್ ಡೌನ್ ಮಾಡಲಾಗಿದೆ. ಸಾರ್ವಜನಿಕರ ಅರೋಗ್ಯದ ಹಿತ ದೃಷ್ಟಿ ಯಿಂದ ಹೆಬ್ಬಳ್ಳಿ ಗ್ರಾಮವನ್ನು ಮೇ  22 ರಿಂದ 24-05-2021ರ ವರೆಗೆ 3 ದಿನ ಸಂಪೂರ್ಣ ಸ್ವಯಂ ಲಾಕಡೌನ್ ಮಾಡಿಕೊಳ್ಳಲಾಗಿದೆ. ಈ ವಿಷಯವನ್ನು ಸಾರ್ವಜನಿಕರಿಗೆ ಆಟೋಮೂಲಕ ತಿಳಿಸಲಾಗಿದೆ. Share on: WhatsApp

ಅಂತಾರಾಷ್ಟ್ರೀಯ

ಮನೆಯಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಐಸಿಎಂಆರ್ ಒಪ್ಪಿಗೆ

ನವದೆಹಲಿ : ಮನೆಯಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಐಸಿಎಂಆರ್ ಒಪ್ಪಿಗೆ ಸೂಚಿಸಿದೆ. ಹೌದು, ಈಗ ನೀವು ಕೊರೋನಾ ಪರೀಕ್ಷೆಗಾಗಿ ಅಲೆದಾಡುವ ಅಗತ್ಯವಿಲ್ಲ, ನೀವು ನಿಮ್ಮ ಮನೆಯಲ್ಲಿಯೇ ಖುದ್ದಾಗಿ ಪರೀಕ್ಷೆ ಮಾಡಿಕೊಳ್ಳಬಹುದು. ಕೊವಿಸೆಲ್ಫ್ ಎಂಬ ಹೆಸರಿನ ಟೆಸ್ಟ್‌ ಕಿಟ್‌ಗೆ ಐಸಿಎಂಆರ್‌ ಅನುಮತಿ ನೀಡಿದ್ದು ಇದರ ವಿಧಾನದ ಮೂಲಕ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ತಮಗೆ ತಾವೇ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಹಿರಿಯರ ಸಹಾಯದಿಂದ ಈ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ. ಈ ಕಿಟ್ ಲಭ್ಯವಿದೆ ಎಂದು ಎಲ್ಲರೂ ಬೇಕಾಬಿಟ್ಟಿ ಈ […]

ರಾಜ್ಯ

ಶನಿವಾರ, ಭಾನುವಾರ ಧಾರವಾಡ ಜಿಲ್ಲೆಯಲ್ಲಿ ಸಂಪುರ್ಣ ಲಾಕಡೌನ್

ಧಾರವಾಡ prajakiran.com : ಬರುವ ಶನಿವಾರ ಮತ್ತು ಭಾನುವಾರದಂದು ಧಾರವಾಡ ಜಿಲ್ಲೆಯಲ್ಲಿ ಸಂಪುರ್ಣವಾಗಿ ಲಾಕಡೌನ್ ಜಾರಿಯಾಗಲಿದೆ. ಅಂದು ಎರಡು ದಿನವೂ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಹಾಲು, ಹಣ್ಣು, ತರಕಾರಿ ಖರೀದಿಸಲು ಮಾತ್ರ ಅವಕಾಶವಿದೆ. ಉಳಿದಂತೆ ಕಿರಾಣಿ, ಕೈಗಾರಿಕೆ ಸೇರಿದಂತೆ ಎಲ್ಲವೂ ಸಂಪೂರ್ಣ ಬಂದ್ ಆಗಲಿವೆ. ಅಗತ್ಯ ಆರೋಗ್ಯ ಸೇವೆ ಹಾಗೂ ಔಷಧಿ ಅಂಗಡಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈ ಕುರಿತು ಸಂಪೂರ್ಣ ವಿವರವಿರುವ ಆದೇಶವನ್ನು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೊರಡಿಸಿದ್ದಾರೆ. […]