prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಹುಕ್ಕೇರಿ ಹಿರೇಮಠದಿಂದ ಬೆಳಗಾವಿ ಜಿಲ್ಲಾಧಿಕಾರಿಗೆ 150 ಕೋವಿಡ್ ಕಿಟ್ ಹಸ್ತಾಂತರ

ಬೆಳಗಾವಿ prajakiran.com : ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸದಿಂದ ದೀನೆ ದೀನೆ ಜನರು ಭಯಭೀತರಾಗಿದ್ದಾರೆ.ತ ಇಂತಹ ಸಂದರ್ಭದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಈ ದೀನ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರಿಗೆ 150 ಕೋವಿಡ್ ಕಿಟ್ಟನ್ನು ಹಸ್ತಾಂತರ ಮಾಡಿದರು. ಜಿಲ್ಲೆಯ ತುಂಬಾ 1000 ಕೋವಿಡ್ ಕಿಟ್ಟನ್ನು ನೀಡುವುದಾಗಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಹುಕ್ಕೇರಿ ಹಿರೇಮಠದ […]

ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಪ್ರತಿ ದಿನ 1330 ಜನರಿಗೆ ಕೋವಿಡ್ ಪರೀಕ್ಷೆ ….!

ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ….! ಧಾರವಾಡ prajakiran.com : ಕೋವಿಡ್-19 ರ ಎರಡನೇ ಅಲೆ ಆರಂಭವಾದಾಗ ಕೋರೊನಾ ಸೋಂಕು ನಗರ ಪ್ರದೇಶದಲ್ಲಿ ಹೆಚ್ಚಿಗೆ ಇದ್ದು, ಗ್ರಾಮೀಣ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿತ್ತು. ಆದರೆ ಈಗ ದಿನದಿಂದ ದಿನಕ್ಕೆ ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ ತಕ್ಷಣವೇ ಕೋವಿಡ್ ಪ್ರಕರಣಗಳನ್ನು ಗುರುತಿಸಲು ಅನುಕೂಲವಾಗಲು ಜಿಲ್ಲೆಯ ಎಲ್ಲ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಟ್(RAT) (RAPID ಆ್ಯಂಟಿಜನ್ ಟೆಸ್ಟ್) ಟೆಸ್ಟ್ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. […]

ರಾಜ್ಯ

ಮದುವೆಗಳು ಸೋಂಕು ಹೆಚ್ಚಳಕ್ಕೆ ಕಾರಣ….!

ಧಾರವಾಡ prajakiran.com : ರಾಜ್ಯ ಸರಕಾರದ ನಿರ್ದೇಶನದ‌ ಮೇರೆಗೆ ಜಿಲ್ಲೆಯಲ್ಲಿ ಮದುವೆಗಳ ಆಯೋಜನೆಗೆ ಕಠೀಣ ನಿಯಮಗಳನ್ನು ವಿಧಿಸಿ, ಅವರ ಆರೋಗ್ಯ ಸುರಕ್ಷತೆಗಾಗಿ ಜಿಲ್ಲಾಡಳಿತದಿಂದ ಉಚಿತವಾಗಿ ಪಾಸ್, ಕೈಗೆ ಬ್ಯಾಂಡ್ ನೀಡಿದರೂ ಜನ ಸರಿಯಾಗಿ ಪಾಲಿಸದೇ ಕೋವಿಡ್ ಸೋಂಕು ಹೆಚ್ಚಳಕ್ಜೆ ಕಾರಣವಾಗುತ್ತಿದ್ದಾರೆ. ಮೇ 9 ರಿಂದ ಜಿಲ್ಲಾಡಳಿತ ಮದುವೆಗಳ ಆಯೋಜನೆಗೆ ಅನುಮತಿ ಪ್ರ ನೀಡುತ್ತಿದೆ. ಮೇ.15 ರ ವರೆಗೆ 1509 ಅರ್ಜಿಗಳು ಸಲ್ಲಿಕೆಯಾಗಿವೆ. ಬರುವ ಮೇ 23 ರವರೆಗೂ ಸೇರಿ, ಒಟ್ಟು 584 ಮದುವೆಗಳಿಗೆ ಅನುಮತಿ ನೀಡಲಾಗಿದೆ. ಮತ್ತು […]

dist hospital dharwad
ಜಿಲ್ಲೆ

ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ 50 ಆಕ್ಸಿಜನ್ ಸಹಿತ ಬೆಡ್ 

ಕೋವಿಡ್ ಕಾಳಜಿ ಕೇಂದ್ರಗಳ ಸ್ಥಾಪನೆ ಧಾರವಾಡ prajakiran.com : ಜಿಲ್ಲಾ ಆಸ್ಪತ್ರೆ, ಕಿಮ್ಸ್ ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಾ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಕ್ಸಿಜನ್ ಸೌಲಭ್ಯವಿರುವ 50 ಬೆಡ್ ವ್ಯವಸ್ಥೆ ಮಾಡಲಾಗಿದೆ. ಕುಂದಗೋಳ, ನವಲಗುಂದದಲ್ಲಿ 3 ವೆಂಟಿಲೇಟರ್ ಗಳ ಸೌಲಭ್ಯ ನೀಡಲಾಗಿದೆ. ಮತ್ತು ಜಿಲ್ಲೆಯ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ತಲಾ 6 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿಯೂ ಕೋವಿಡ್ ಕಾಳಜಿ (ಕೆರ್) […]

ಅಂತಾರಾಷ್ಟ್ರೀಯ

ತೌಕ್ತೆ ಚಂಡಮಾರುತ : ಕರಾವಳಿ ಜಿಲ್ಲೆಗಳ ಮಾಹಿತಿ ಪಡೆದ ಜೆ.ಪಿ ನಡ್ಡಾ

ಬೆಂಗಳೂರು prajakiran.com : ತೌಕ್ತೆ ಚಂಡಮಾರುತಕ್ಕೆ ಕರಾವಳಿ ಜಿಲ್ಲೆ ತತ್ತರಿಸುತ್ತಿದೆ. ತೌಕ್ತೆ ಅಬ್ಬರಕ್ಕೆ ಸಿಲುಕಿದ್ದ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದು, ಎನ್‍ಡಿಆರ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತ ಎಫೆಕ್ಟ್ ಹೆಚ್ಚಾಗಿದ್ದು, ಈ ಹಿನ್ನೆಲ್ಲೆ ರಾಜ್ಯ ಸರ್ಕಾರ ಚಂಡಮಾರುತ ಎದುರಿಸಲು ಎಲ್ಲ ರೀತಿಯಲ್ಲಿ […]

ರಾಜ್ಯ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಕೋವಿಡ್ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ…..!

ಧಾರವಾಡ prajakiran.com : ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಭಾನುವಾರ ಸಂಜೆ ಜರುಗಿದ ಜಿಲ್ಲಾಧಿಕಾರಿಗಳ ವರ್ಚುವಲ್ ಸಭೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ. ಈ ಕುರಿತು ಮಾದ್ಯಮ ಮಾಹಿತಿ ನೀಡಿರುವ ಅವರು, ಜಿಲ್ಕೆಯ ಎಲ್ಲ ಸರಕಾರಿ ಹಾಗೂ ಖಾಸಗಿ‌ ಆಸ್ಪತ್ರೆಗಳಲ್ಲಿ ಆಯಾ ದಿನದ ಕೋವಿಡ್ ಚಿಕಿತ್ಸೆ, ಆಕ್ಸಿಜನ್, ಬೆಡ್ ಸೇರಿದಂತೆ ಆಸ್ಪತ್ರೆಗಳ ಅಗತ್ಯತೆ ತಿಳಿಯಲು‌ ಪ್ರತಿ ದಿನ ಸಂಜೆ […]

ರಾಜ್ಯ

ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಲಭ್ಯ….!

ಚಿಕ್ಮಮಗಳೂರು Prajakiran.com : ಬಿ.ಎಂ.ಟಿ.ಸಿ ಯಿಂದ ಪ್ರಾರಂಭಿಸಿದ್ದ ಆಕ್ಸಿಜನ್ ಬಸ್ ಸೇವೆ ಇದೀಗ ಚಿಕ್ಕಮಗಳೂರಿನಲ್ಲಿಯೂ ಕೆ.ಎಸ್.ಆರ್.ಟಿ.ಸಿ.ಯ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೋಮವಾರದಿಂದ ಬಸ್ಸಿನಲ್ಲಿಯೇ ಆಕ್ಸಿಜನ್ ಒದಗಿಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗುತ್ತಿದೆ. ಡಢಇದನ್ನು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಉಚಿತವಾಗಿ […]

ಅಂತಾರಾಷ್ಟ್ರೀಯ

ಕೇಂದ್ರದಿಂದ ರಾಜ್ಯಕ್ಕೆ ‘4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್’ ಹಂಚಿಕೆ

ಸಚಿವ ಡಿ.ವಿ. ಸದಾನಂದಗೌಡ ಬೆಂಗಳೂರು prajakiran.com : ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಮೇ 17 ರಿಂದ ಮೇ 23ರ ವರೆಗಿನ ಬಳಕೆಗಾಗಿ ರೆಮ್ಡೆಸಿವಿರ್ ಚುಚ್ಚುಮದ್ದಿನ 23 ಲಕ್ಷ ವಯಲ್ಸ್ ಹಂಚಿಕೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ಮೇ 17 ರಿಂದ ಮೇ 23ರ ವರೆಗಿನ ಬಳಕೆಗಾಗಿ 23 […]

ರಾಜ್ಯ

ಬೆಳಗಾವಿ ಜಿಲ್ಲೆಯಲ್ಲಿ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

ಬೆಳಗಾವಿ prajakiran.com : ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಗೋಡೆ ಕುಸಿದು ಬಿದ್ದು ಅಜ್ಜಿ ಹಾಗೂ ಮೊಮ್ಮಗ ಮೃತಪಟ್ಟ ಘಟನೆ ಇಲ್ಲಿನ ಖಾನಾಪೂರ ತಾಲೂಕಿನ ಇಟಗಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ದೊಡ್ಡವ್ವ ಪಟ್ಟೇದ(60) ಹಾಗೂ ಮೊಮ್ಮಗ ಅಭಿಷೇಕ(3) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದಂಪತಿಗಳಾದ ಸುರೇಶ ಪಟ್ಟೇದ ಹಾಗೂ ಮಂಗಳಾ ಪಟ್ಟೇದ ಗಾಯಗೊಂಡಿದ್ದಾರೆ. ಮನೆಯಲ್ಲಿ ಇದ್ದಾಗ ಗೋಡೆ ಕುಸಿದು, ಅಜ್ಜಿ ಹಾಗೂ ಮೊಮ್ಮಗ ಅಸುನೀಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ […]

ಅಂತಾರಾಷ್ಟ್ರೀಯ

ದೇಶದಲ್ಲಿ ಒಂದೇ ದಿನ 4,077 ಜನ ಕರೋನಾಗೆ ಬಲಿ

ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ನವದೆಹೆಲಿ prajakiran.com : ದೇಶದ ಹಲವಾರು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ 3,11,170 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಇಲಾಖೆ ವರದಿ ಪ್ರಕಾರ, ಶನಿವಾರ 3,11,170 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,46,84,077ಕ್ಕೆ ಏರಿಕೆಯಾಗಿದೆ. ಇನ್ನೂ ನಿನ್ನೆ ಒಂದೇ ದಿನ 3,62,437 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2,07,95,335ಕ್ಕೆ ಏರಿಕೆಯಾಗಿದೆ. 36,18,458 […]