ಮುಂಬೈ prajakiran.com : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದ ಎನ್ ಕೌಂಟರ್ ನಲ್ಲಿ 13 ನಕ್ಸಲರು ಪೊಲೀಸರು ಪೋಲಿಸರ ಗುಂಟಿಗೆ ಬಲಿಯಾಗಿದ್ದಾರೆ.
ಈ ಕುರಿತು ಗಡ್ಚೊಲಿ ಜಿಲ್ಲೆಯ ಡಿಐಜಿ ಸಂದೀಪ್ ಪಾಟೀಲ್ ಟ್ವಿಟ್ ಮಾಡಿದ್ದು, ಗಡ್ಚಿರೋಲಿ ಅರಣ್ಯ ಪ್ರದೇಶದ ಎಟಪಲ್ಲಿ ಎಂಬಲ್ಲಿ ಸಿ-60 ಕಮಾಂಡೊ ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ದಾಳಿ ನಡೆದಿತ್ತು.
ಇದರಲ್ಲಿ 13 ಮಂದಿ ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.