ನವದೆಹಲಿ prajakiran.com : ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್ನಿಂದ ಮೃತಪಟ್ಟಿದ್ದಾರೆ.
ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದ ಅವರಿಗೆ ಬ್ಲಾಕ್ಫಂಗಸ್ ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು.
ಮೊನಾಲಿ ಅವರ ನಿಧನದ ಕೆಲ ಗಂಟೆಗಳ ಹಿಂದೆಯಷ್ಟೇ ಅವರ ತಂದೆ ಮನೋಹರ್ ಗೊರ್ಹೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದರು.
ಮೊನಾಲಿ ಪಿಸ್ತೂಲ್ ಕೋರ್ ಗುಂಪಿನ ತರಬೇತುದಾರರಾಗಿದ್ದರು.
ಶ್ರೀಲಂಕಾದ ಶೂಟಿಂಗ್ ತಂಡದ ರಾಷ್ಟ್ರೀಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು.