ಬೆಂಗಳೂರು prajakiran. com : ಸ್ಯಾಂಡಲ್ ವುಡ್ ನಟಿ ಕಿರಿಕ್ ಪಾರ್ಟಿಯ ನಾಯಕಿ ಸಂಯುಕ್ತಾ ಹೆಗಡೆ ತಂದೆ ತಾಯಿಗೆ ಸೋಂಕು ತಗುಲಿತ್ತು.
ಇದೀಗ ನಟಿ ಸಂಯುಕ್ತಾರಿಗೂ ಕೊರೋನಾ ಸೋಂಕು ತಗುಲಿದೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಯುಕ್ತಾ, ಅಪ್ಪ ಅಮ್ಮನಿಗೂ ಕೊರೋನಾ ಸೋಂಕು ತಗುಲಿದೆ.
ಯಾವ ಆಸ್ಪತ್ರೆಯಲ್ಲಿಯೂ ಬೆಡ್ ಇಲ್ಲ.
ಹೀಗಾಗಿ ಮನೆಯಲ್ಲೇ ಆರೈಕೆ ಮಾಡುತ್ತಿದ್ದೇವೆ.ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಈ ನಡುವೆ ನನಗೂ ಸೋಂಕು ತಗುಲಿದೆ. ಸದ್ಯ ಅಪ್ಪ, ಅಮ್ಮನ ಆರೈಕೆ ಮುಖ್ಯವಾಗಿದೆ ಎಂದು ಸಂಯುಕ್ತಾ ಬರೆದುಕೊಂಡಿದ್ದಾರೆ.