ಸಿನಿಮಾ

ಸಿಸಿಬಿ ಖೆಡ್ಡಾಕ್ಕೆ ಬಿದ್ದ ರಾಗಿಣಿ ಇಬ್ಬರು ಬಾಯ್ ಫ್ರೆಂಡ್ಸ್ …!

ಬೆಂಗಳೂರು prajakiran.com : ಸ್ಯಾಂಡಲ್ ವುಡ್ ಲೋಕದ ಮಾದಕ ನಟಿ ರಾಗಿಣಿ ದ್ವಿವೇದಿ ಇಬ್ಬರು ಬಾಯ್ ಫ್ರೆಂಡ್ಸ್ ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಮೊದಲ ಬಾಯ್ ಫ್ರೆಂಡ್ ಸಿನಿಮಾ  ನಿರ್ಮಾಪಕನಾಗಿದ್ದ ಶಿವಪ್ರಕಾಶ ಚಪ್ಪಿ  ಡ್ರಗ್ಸ್ ಜಾಲದ ಕೇಸ್ ನಲ್ಲಿ ಎ 1 ಆಗಿದ್ದರೆ, ರಾಗಿಣಿ ದ್ವಿವೇದಿ ಎ 2, ದೆಹಲಿ ಮೂಲದ ವೀರೇನ್ ಖನ್ನಾ ಎ 3, ಪ್ರಶಾಂತ್ ರಂಕಾ ಎ 4, ವೈಭವ ಜೈನ್ ಎ 5 , ಆದಿತ್ಯ ಆಳ್ವಾ ಎ 6, ಲೂಮಾ ಪೆಪ್ಪರ್ ಎ 7  ಮಾಡಲಾಗಿದೆ.

ಒಟ್ಟು 12 ಜನರ ವಿರುದ್ದ ಡ್ರಗ್ಸ್ ಪಾರ್ಟಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ವೇಳೆ ಎಂಡಿ ಎಂ ಎ ಡ್ರಗ್ಸ್  ಸರಬರಾಜು ಆಗಿತ್ತು ಎನ್ನಲಾಗಿದೆ.

ಇವರ ವೇಲೆ ಸೆಕ್ಷನ್ 21, 27, ಅಪರಾಧ, ಒಳಸಂಚು ಆರೋಪ ಸೇರಿದಂತೆ ಹಲವು ಸೆಕ್ಷನ್ ಗಳಅಡಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಎಸಿಪಿ ಗೌತಮ್ ಕುಮಾರ ಈ ಕುರಿತು ದೂರು ದಾಖಲಿಸಿದ್ದಾರೆ.  

ಜು. 6ರಂದು ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದ ರೆಸಾರ್ಟ್ ನಲ್ಲಿ ಮಧ್ಯರಾತ್ರಿ ನಂತರ ಈ ಹೈ ಎಂಡ್ ಪಾರ್ಟಿ ನಡೆದಿತ್ತು.  ಅದರಲ್ಲಿ ನಟಿ ರಾಗಿಣಿ, ರವಿಶಂಕರ್, ರಾಹುಲ್ ಸಹ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *