ಸಿನಿಮಾ

ನಟ ಲೂಸ್ ಮಾದ, ಗಟ್ಟಿಮೇಳ ನಟ ಅಭಿಷೇಕ್ ದಾಸ್, ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್ ವಿಚಾರಣೆ ನಡೆಸಿದ ಐ ಎಸ್ ಡಿ

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿದ ಆರೋಪಿಗಳ ಜೊತೆಗೆ ದೂರವಾಣಿ ಸಂಪರ್ಕ ಹೊಂದಿರುವ ಕುರಿತು ಸ್ಯಾಂಡಲ್ ವುಡ್ ನಟ ಲೂಸ್ ಮಾದ ಖ್ಯಾತಿಯ ಯೋಗಿಯನ್ನು ಐ ಎಸ್ ಡಿ ಅಧಿಕಾರಿಗಳು ವಿಚಾರಣೆ ನಡೆಸಿದರು.

ನಟ ಯೋಗಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನು  ಯಾವುದೇ ತಪ್ಪು ಮಾಡಿಲ್ಲ. ಭಯ ಪಡುವಂತಹದ್ದು ಏನೂ ಇಲ್ಲ. ರಾಗಿಣಿ ಸಂಬಂಧ ಪೋನ್ ಕಾಲ್ ಇಲ್ಲ. ಪೋನ್ ಕಾಲ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕಿರುತೆರೆ ಗಟ್ಟಿಮೇಳ ನಟ ಅಭಿಷೇಕ್ ದಾಸ್, ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್, ಇನ್ನೊಬ್ಬ ನಟಿ ರಶ್ಮಿತಾ ಚೆಂಗಪ್ಪ ಅವರನ್ನು ಹಲವು  ಗಂಟೆಗಳ ಕಾಲ ಐ ಎಸ್ ಡಿ ಅಧಿಕಾರಿಗಳು ವಿಚಾರಣೆ ನಡೆಸಿದರು.

ಗೀತಾ ಭಾರತಿ ಭಟ್ ಗೆ ಬರೋಬ್ಬರಿ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಐ ಎಸ್ ಡಿ ಅಧಿಕಾರಿಗಳು 40 ಪ್ರಶ್ನೆಗಳನ್ನು ಕೇಳಿದ್ದಾರೆ.

ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಿದ್ದು, ಮತ್ತೆ ಕರೆದರೆ ಬರುತ್ತೇನೆ. ನನಗೆ ಯಾವುದೇ ಆರೋಪಿಗಳ ಜೊತೆಗೆ ನಂಟು ಇಲ್ಲ. ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇನೆ ಎಂದು ವಿವರಿಸಿದರು.

ಇದೇ ವೇಳೆ ನಟಅಭಿಷೇಕ್ ದಾಸ್ ಕೂಡ ತಮ್ಮ ಸ್ಪಷ್ಟನೆ ನೀಡಿದ್ದು, ನನಗೆ ಬಂದ ದೂರವಾಣಿ ಕರೆಗಳ ಆಧಾರದ ಮೇಲೆ ವಿಚಾರಣೆ ನಡೆಸಿದ್ದಾರೆ.

ನನಗೆ ಯಾರೊಂದಿಗೂ ಯಾವುದೇ ನಂಟಿಲ್ಲ. ಕಿರುತೆರೆಗೂ ಡ್ರಗ್ಸ್ ನಂಟು ಎಂಬುದು ಕೇವಲ ಊಹಾಪೋಹ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *