ಸಿನಿಮಾ

ನಟ ದರ್ಶನ್‌ ಹೆಸರಿನಲ್ಲಿ ವಂಚನೆ : ಮೂವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು prajakiran.com : ನಟ ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ 25 ಕೋಟಿ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ವಂಚನೆಗೆ ಯತ್ನಿಸಿದ ನಕಲಿ ಮಹಿಳಾ ಅಧಿಕಾರಿ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.

ಈ ಬಗ್ಗೆ ನಟ ದರ್ಶನ್ ಮಾತನಾಡಿ, ಈ  ಫೋರ್ಜರಿ ಬಗ್ಗೆ ನನಗೂ ಒಂದು ತಿಂಗಳ ಹಿಂದಷ್ಟೇ ಮಾಹಿತಿ ಸಿಕ್ಕಿದೆ.

ಫೋರ್ಜರಿ ಮಾಡಿದವರೇ ಎಲ್ಲ ವಿಷಯ ಬಾಯ್ಬಿಡಬೇಕು ಎಂದು ಹೇಳಿದ್ದಾರೆ.

ಇನ್ನೂ ಈ ಪ್ರಕರಣದಲ್ಲಿ ದರ್ಶನ್ ಆಪ್ತರ ಕೈವಾಡವೇ ಇರಬಹುದು ಎಂದ ಅನುಮಾನ ವ್ಯಕ್ತವಾಗಿದೆ.

ಈ ಎಲ್ಲ ಊಹಾಪೋಹಗಳಿಗೂ ಉತ್ತರ ಸಿಗಬೇಕಾಗಿದೆ.

ರಾಬರ್ಟ್ ಸಿನಿಮಾ ನಿರ್ಮಾಣದ ನಿರ್ಮಾಪಕ ಉಮಾಪತಿ ವಿರುದ್ದ ಅನುಮಾನ ಮೂಡಿಸಿದ್ದು, ನಟ್ ದರ್ಶನ ಆಪ್ತ ಹರ್ಷ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ‌

ಆದರೆ ನಿರ್ಮಾಪಕ ಉಮಾಪತಿ ನಟ ದರ್ಶನ್ ಗೆ ಈ ಬಗ್ಗೆ ಮಾಹಿತಿ ನೀಡಿದ್ದು ನಾನೆ, ನಾನು ಜೂನ್ ತಿಂಗಳಲ್ಲಿಯೇ ಈ ಕುರಿತು ಪ್ರಕರಣ ದಾಖಲಿಸಿದ್ದೇನೆ.

ಜೊತೆಗೆ ನಟ ದರ್ಶನ್ ಗೆ ವಾಟ್ಸ್ ಅಪ್ ಚಾಟ್  ಮೊಬೈಲ್ ಕರೆ ಮಾಹಿತಿ ನೀಡಿದ್ದು, ಈ ಬಗ್ಗೆ ನಾನು ಈಗಲೇ ಎನೂ ಹೇಳಲ್ಲ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *