ಚೆನ್ನೈ Prajakiran.com : ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಹಲವಾರು ಮಾತುಗಳು ಕೇಳಿಬಂದಿತ್ತು.
ಇದರಂತೆಯೇ ರಜನಿ ರಾಜಕೀಯಕ್ಕೆ ಬರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದರು.
ಆದರೆ ಇದೀಗ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲೇ ಅವರು ವಿದಾಯ ಹೇಳಿದ್ದಾರೆ.
ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಬಹುಕಾಲದ ಮಾತಿಗೆ ಖುದ್ದು ರಜನಿಕಾಂತ್ ಅವರೇ ರಾಜಕೀಯ ರಂಗಕ್ಕೆ ಬರುತ್ತಿರುವುದ್ದಾಗಿ ಹೇಳಿ ಈ ಎಲ್ಲ ಮಾತುಗಳಿಗೂ ತೆರೆ ಎಳೆದಿದ್ದರು.
ಆದರೆ ತದನಂತರ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಅವರು ಕಾಣಿಸಿಕೊಂಡಿದಿಲ್ಲ.
ಆದರೆ ಇದೀಗ ದಿಢೀರನೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿ. ತಮ್ಮ ರಾಜಕೀಯ ಪಕ್ಷವನ್ನು ಬರ್ಕಾಸ್ತುಗೊಳಿಸಿದ್ದಾರೆ.
ಇನ್ನೂ ರಜನಿ ರಾಜಕೀಯಕ್ಕೆ ಬರುತ್ತಾರೆ ಎಂದು ಕಾದು ಕುಳಿತ ಕೆಲವು ಅಭಿಮಾನಿಗಳಿಗೆ, ಈ ವಿಷಯ ತಿಳಿದು ಬೇಸರವನ್ನುಂಟು ಮಾಡಿದೆ.