ಸಿನಿಮಾ

ದಿ ಕಾಶ್ಮೀರ ಫೈಲ್ಸ್ ಚಿತ್ರ ಪ್ರದರ್ಶನಕ್ಕೆ ಶೇ.9 ರಾಜ್ಯ ಜಿಎಸ್‌ಟಿ ವಿನಾಯಿತಿ

ಧಾರವಾಡ prajakiran. com ಮಾ.14 :

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರವು ತನ್ನ ಪಾಲಿನ ರಾಜ್ಯ ಜಿಎಸ್‌ಟಿಯನ್ನು ವೀಕ್ಷಕರಿಗೆ ವಿಧಿಸದಿರಲು ಸಿನೆಮಾ ಪ್ರದರ್ಶಕರಿಗರ ಸೂಚಿಸಿದೆ.

ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.ಜಿಲ್ಲೆಯ ಸಿನೆಮಾ,ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ಟಿಕೇಟ್‌ನಲ್ಲಿ ಶೇ.9 ರಿಯಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಸಿನೆಮಾ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳ ನೊಂದಾಯಿತ ತೆರಿಗೆ ಪಾವತಿದಾರರು ವೀಕ್ಷಕರು/ಗ್ರಾಹಕರಿಗೆ ರಾಜ್ಯದ ಪಾಲಿನ ಶೇ.9 ಜಿಎಸ್‌ಟಿ ವಿಧಿಸಬಾರದು.

ಈ ಹಣವನ್ನು ಸರ್ಕಾರ ಭರಿಸಲಿದೆ. ಟಿಕೆಟ್ ಮೇಲೆ “ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಸಂಗ್ರಹಿಸಿರುವುದಿಲ್ಲ” ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿಸಿರಬೇಕು.

ಈ ಆದೇಶವು ಮಾರ್ಚ್ 14 ರಿಂದ ಮುಂದಿನ ಆರು ತಿಂಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ.

ಸಿನೆಮಾ ,ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ರಾಜ್ಯ ಜಿಎಸ್‌ಟಿ ಮರುಪಾವತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರ್ಕಾರ ಪ್ರಕಟಿಸಲಿದೆ.

ಜಿಎಸ್‌ಟಿ ಅಧಿಕಾರಿಗಳು ಈ ಆದೇಶ ಜಾರಿಗೊಳಿಸಿ ವರದಿ ನೀಡಲು ಸೂಚಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *