ರಾಜ್ಯ

ಧಾರವಾಡದಲ್ಲಿ ಯೂರಿಯಾ ಗೊಬ್ಬರ ಪಡೆಯಲು ರೈತರ ಹರಸಾಹಸ….!

ಧಾರವಾಡ prajakiran.com :  ಧಾರವಾಡ ಜಿಲ್ಲೆಯಾದ್ಯಂತ  ಕಳೆದ ಹಲವು ದಿನಗಳಿಂದ ಯೂರಿಯಾ ಗೊಬ್ಬರ ಪಡೆಯಲು ರೈತರು ಪರದಾಡುತ್ತಿರುವ ಹಾಗೂ ಹರ ಸಾಹಸಪಡುತ್ತಿರುವ  ಘಟನೆಗಳು ಪದೇ ಪದೇ ಮರುಕಳುಸುತ್ತಿವೆ.

ಅದರಲ್ಲೂ ನಿನ್ನೇ ಧಾರವಾಡ ತಾಲೂಕಿನ ಮರೇವಾಡ ಹಾಗೂ ಮಾಧನಭಾವಿ ಗ್ರಾಮಗಳಲ್ಲಿ ಲಾರಿ ಬಳಿಯೇ ರೈತರು ಮುಗಿಬಿದ್ದು ಖರೀದಿಸುತ್ತಿರುವುದು ನೋಡಿದರೆ ರೈತರ ಆತಂಕ ಸ್ಪಷ್ಟವಾಗುತ್ತದೆ.

ಗೊಬ್ಬರ ಲೋಡ್ ಇಳಿಸಲು ಬಂದ ಲಾರಿಗೇ ಮುಗಿ ಬಿದ್ದ ನೂರಾರು ರೈತರು, ಅಲ್ಲೇ ಆಧಾರ್ ಕಾರ್ಡ ಹಾಗೂ ಹಣ ಕೊಟ್ಟು ಗೊಬ್ಬರದ ಚೀಲ ಪಡೆದುಕೊಂಡರು.

ಗೋಬ್ಬರ ಸಾಕಷ್ಟು ಪ್ರಮಾಣದಲ್ಲಿ ರೈತರಿಗೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದರೂ ಜಿಲ್ಲಾಡಳಿತ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ರೈತರ ಗೋಳು ಹೇಳತೀರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮಾಧನಭಾವಿ ಗ್ರಾಮದಲ್ಲಿ  ಇಂತಹದ್ದೆ ಘಟನೆ ನಡೆದಿದ್ದರೆ, ನಿನ್ನೇ ಶುಕ್ರವಾರ ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲೂ ಇದೇ ರೀತಿ ರೈತರು ಗೊಬ್ಬರ ಚೀಲ ಪಡೆದುಕೊಳ್ಳಲು ಮುಗಿಬಿದ್ದಿದ್ದರು.

ಈಗಲಾದರೂ ಧಾರವಾಡ ಜಿಲ್ಲಾಡಳಿತ ರೈತರಿಗೆ ಅಭಯ ನೀಡುತ್ತಾ, ಅವರ ಯೂರಿಯಾ ಕೊರತೆ ನಿವಾರಣೆ ಮಾಡುತ್ತಾ ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *