ರಾಜ್ಯ

ಧಾರವಾಡದಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಒಳಗಾದವನಿಗೆ ಶಾಕ್.. !

ಧಾರವಾಡ prajakiran.com : ಧಾರವಾಡ ಜಿಲ್ಲಾಡಳಿತ ಕಳೆದ ಎರಡು ದಿನಗಳಿಂದ ಹುಬ್ಭಳ್ಳಿ-ಧಾರವಾಡದ ಮಾರುಕಟ್ಟೆ ಪ್ರದೇಶದಲ್ಲಿ ಕೊರೊನಾ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸುತ್ತಿದೆ.

ಈ ಟೆಸ್ಟ್ ಮಾಡಿಸಿಕೊಂಡ ಹುಬ್ಬಳ್ಳಿ ಧಾರವಾಡದ ಬಹುತೇಕ ವ್ಯಾಪಾರಸ್ಥರು ಹೌಹಾರುತ್ತಿದ್ದಾರೆ.

ಅಂತಹದೇ ಒಂದು ಪ್ರಕರಣ ಧಾರವಾಡ ನಗರದ  ಬಟ್ಟೆ ಅಂಗಡಿಯ ಕೆಲಸಗಾರನೊಬ್ಬನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. 

ಇದರಿಂದಾಗಿ ಅಂಗಡಿಯಲ್ಲಿದ್ದ ಕೆಲಸಗಾರರು ಎದ್ನೋ ಬಿದ್ನೋ ಅಂತಾ  ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಒಳಗಾಗಿದ್ದಾರೆ. 11 ಜನರಲ್ಲಿ 10 ಜನರ ವರದಿ ನೆಗೆಟಿವ್ ಎಂದು ಬಂದಿದ್ದು, ಒಬ್ಬ ವ್ಯಕ್ತಿಯ ವರದಿ ಮಾತ್ರ ಪಾಸಿಟಿವ್ ಎಂದು ಬಂದಿದೆ.

ಇದರಿಂದಾಗಿ ಅವರ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿದ್ದು, ಪಾಸಿಟಿವ್ ಬಂದಿರುವ ವ್ಯಕ್ತಿಯಿಂದ ಸೀರೆ ಪಡೆದುಕೊಂಡ ಗ್ರಾಹಕರಿಗೂ ಆತಂಕವುಂಟಾಗುತ್ತಿದೆ.

ಇದರಿಂದಾಗಿ ಬಹುತೇಕರು ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಆರಂಭವಾಗುತ್ತಿದ್ದಂತೆ ತಮ್ಮಅಂಗಡಿಗಳಿಗೆ ಬೀಗ ಹಾಕಿಕೊಂಡು ಮನೆಯತ್ತ ಮರಳುತ್ತಿದ್ದಾರೆ.

ಆದ್ಯಾಗೂ ಜಿಲ್ಲಾಡಳಿತ ನಿನ್ನೇ 250ಕ್ಕೂ ಹೆಚ್ಚು ಜನರನ್ನು ತಪಾಸಣೆ ನಡೆಸಿ 22 ಪಾಸಿಟಿವ್ ಪ್ರಕರಣಗಳನ್ನು ಭೇದಿಸಿ, 17 ಅಂಗಡಿಗಳನ್ನು ಸೀಲ್ ಡೌನ್ ಮಾಡಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *