ಅಂತಾರಾಷ್ಟ್ರೀಯ

ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಟಿ.ಬಿ.ಸೊಲಬಕ್ಕನವರ ಇನ್ನಿಲ್ಲ

  • ಹಾವೇರಿ prajakiran.com :
    ಉತ್ಸವ ರಾಕ್ ಗಾರ್ಡನ್ ರೂವಾರಿಯು ಆಗಿರುವ ಹಿರಿಯ ಕಲಾವಿದ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಟಿ.ಬಿ.ಸೊಲಬಕ್ಕನವರ ಗುರುವಾರ ಬೆಳಗ್ಗೆ ವಿಧಿವಶರಾದರು.

ಅವರ ಅಂತ್ಯಕ್ರಿಯೆ ಗೋಡಗೋಡಿಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

ಸೋಲಬಕ್ಕವರ ಪರಿಚಯ :
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹುಲಸೋಗಿ ಗ್ರಾಮದಲ್ಲಿ ಮಾರ್ಚ 3, 1947ರಲ್ಲಿ ಜನಿಸಿದ ಟಿ.ಬಿ. ಸೊಲಬಕ್ಕನವರ್‌ ಪ್ರಾಥಮಿಕ ಶಿಕ್ಷಣ ಹುಲಸೋಗಿಯಲ್ಲಿ, ಮಾಧ್ಯಮಿಕ ಶಿಕ್ಷ ಣ ಹಿರೇಬಂದಗೆರೆಯಲ್ಲಿ, ಪ್ರೌಢ ಶಿಕ್ಷಣ ಶಿಗ್ಗಾವಿಯಲ್ಲಿ ಪಡೆದು ನಂತರ ಧಾರವಾಡದ ಡಿ.ವಿ.ಹಾಲಬಾವಿ ಕಲಾಶಾಲೆಯಲ್ಲಿ ಕಲಾಶಿಕ್ಷ ಣ ಹಾಗೂ ದಾವಣಗೆರೆಯಲ್ಲಿ ಲಲಿತಕಲಾ ಡಿಪ್ಲೋಮಾ ಪಡೆದಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ದಾವಣಗೆರೆಯ ಲಲಿತಕಲಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಚಿತ್ರರಂಗದಲ್ಲಿ ಮೂರು ವರ್ಷಗಳ ಕಾಲ ಸಿನಿಮಾ ಸಹಾಯಕ ನಿರ್ದೇಶಕರಾಗಿ, ಜ್ಞಾನ ಗಂಗೋತ್ರಿ ಪತ್ರಿಕೆಯ ಮುಖ್ಯ ಪುಟವಿನ್ಯಾಸಕಾರರಾಗಿ, ಪ್ರಜಾಮತ ಪತ್ರಿಕೆಯಲ್ಲಿ ಕಲಾಕಾರರಾಗಿ ಸಾಧನೆ ಮಾಡಿದ್ದಾರೆ. ಇವರು ಚಾರ್‌ ಕೋಲ್‌, ಪೆನ್‌ ಮತ್ತು ಇಂಕ್‌ ಮೀಡಿಯಾದಲ್ಲಿ ನೈಪುಣ್ಯತೆ ಹೊಂದಿದ್ದಾರೆ.

ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಸೊಲಬಕ್ಕನವರ ದೇಸಿ ಸೊಗಡಿನ ದೊಡ್ಡಾಟಕ್ಕೆ ಮಾರು ಹೋಗಿ ಸರಕಾರಿ ಕಲಾ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು.

ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರ ಆರಂಭಿಸಿ ಉತ್ತರ ಕರ್ನಾಟಕದಲ್ಲಿ ದೊಡ್ಡಾಟ ಮ್ಯಾಳ ಪೋಷಿಸಿದಲ್ಲದೆ, ನಾಡಿನ ಮೂಲೆ ಮೂಲೆ ಸಂಚರಿಸಿ ಅದನ್ನು ಉಳಿಸಿ ಬೆಳೆಸಲು ಶ್ರಮಿಸಿದ್ದರು.

ಅವರು ಈ ಹಿಂದೆ ಅಣು ಶಕ್ತಿ ಯುದ್ಧ ನಿಲ್ಲಿಸಿ’ ಎಂಬ 120 ಅಡಿ ಉದ್ದದ ತೈಲ ವರ್ಣದ ಮೂಲಕ ನಾಡಿನ ಮನೆ ಮಾತಾಗಿದ್ದರು.
ಟಿ.ಬಿ. ಸೊಲಬಕ್ಕನವರ ಕಲೆ, ಸಾಹಿತ್ಯ ಜತೆ ಸಾಂಸ್ಕೃತಿಕ ಲೋಕದಲ್ಲಿ ತಮ್ನದೆ ಆದ ವಿಶಿಷ್ಟ ಛಾಪು ಮೂಡಿಸಿದ್ದರು.

ದೊಡ್ಡಾಟಕ್ಕೆ ಮತ್ತು ಶಿಲ್ಪ ಕಲಾಕೃತಿ ಗಳ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಸೃಜನಶೀಲ ಕಲಾಪ್ರತಿಭೆಯನ್ನು
ಉತ್ಸವ ರಾಕ್ ಗಾರ್ಡನ್ ಮೂಲಕ ನಗರದ ಜನರಿಗೆ ಹೊಸ ಲೋಕ ಅನಾವರಣಗೊಳಿಸಿದ್ದರು.

ಆಲಮಟ್ಟಿ ರಾಕ್‌ ಗಾರ್ಡನ್‌, ಕೃಷ್ಣಾ ಗಾರ್ಡನ್‌, ಲವಕುಶ ಗಾರ್ಡನ್‌, ಬಾಗಲಕೋಟೆಯ ಜಾನಪದ ವಸ್ತು ಸಂಗ್ರಹಾಲಯಗಳು ಟಿ. ಬಿ. ಸೊಲಬಕ್ಕನವರಿಂದ ರೂಪುಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

2002ರಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಸೊಲಬಕ್ಕನವರ್‌ ಅವರ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಅತ್ಯುತ್ತಮ ಕಲಾ ತರಬೇತಿ ಸಂಸ್ಥೆ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇವರಿಗೆ 2001ರಲ್ಲಿ ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ, 2002 ರಲ್ಲಿ ಸಂಘಟನಾ ಪ್ರಶಸ್ತಿ, 2005 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2006 ರಲ್ಲಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಸಂದಿವೆ. 

ಅವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿತ್ತು.ಜೊತೆಗೆ ಕಲಾ ಶಿಲ್ಪಗಳಿಗೆ ಎಂಟಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

ಇವುಗಳ ಜೊತೆಗೆ ಲಿಮ್ಕಾ ಬುಕ್‌ ಆಫ್‌ ರೆಕಾಡ್ರ್ಸ, ಇಂಡಿಯಾ ಬುಕ್‌ ಆಫ್‌ ರೆಕಾಡ್ರ್ಸ, ಅಮೆರಿಕಾದ ರೆಕಾರ್ಡ ಸೆಕ್ಟರ್‌, ಲಂಡನ್‌ನ ರೆಕಾರ್ಡ ಹೋಲ್ಡರ್ಸ ರಿಪಬ್ಲಿಕ್‌, ಯೂನಿಕ್‌ ವಲ್ರ್ಡ ರೆಕಾರ್ಡ, ಅಮೇಜಿಂಗ್‌ ವಲ್ರ್ಡ ರೆಕಾರ್ಡ ಹಾಗೂ ನೇಪಾಳದ ಎವರೆಸ್ಟ್‌ ವಲ್ರ್ಡ ರೆಕಾರ್ಡ ಪಡೆದಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *