ನವದೆಹಲಿ prajakiran.com : ಮಧ್ಯಪ್ರದೇಶದ ಅನುಪ್ಪುರ್ ಬಳಿ ಕೋಚುಗಳ ಗೂಡ್ಸ್ ರೈಲೊಂದು ಹಳಿತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ಈ ಗೂಡ್ಸ್ ರೈಲು ಕಲ್ಲಿದ್ದಲನ್ನು ತುಂಬಿಕೊಂಡು ಛತ್ತೀಸ್ಗಢದ ಕೊರ್ಬಾದಿಂದ ಮಧ್ಯಪ್ರದೇಶದ ಕಾಟ್ನಿ ಪ್ರದೇಶಕ್ಕೆ ತೆರಳುತ್ತಿತ್ತು.
ಅಲಾನ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೇ ಮೇಲಿನ ಹಳಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಇದರಿಂದಾಗಿ ರೈಲು ಹಳಿ ತಪ್ಪಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.
ಇದುವರೆಗೆ ಯಾವು ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಟನ್ಗಟ್ಟಲೇ ಕಲ್ಲಿದ್ದಲು ನದಿಗೆ ಬಿದ್ದು ನಾಶವಾಗಿದೆ.
ಕೆಲವು ಕೋಚ್ ಗಳು ಸಹ ನದಿಗೆ ಬಿದ್ದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.