ಜಿಲ್ಲೆ

ಧಾರವಾಡದ ಕೆಲಗೇರಿ ಕೆರೆ ಸ್ವಚ್ಛತೆಗೆ ಟೋಂಕ ಕಟ್ಟಿ ನಿಂತ ಬಸವರಾಜ ಕೊರವರ ನೇತೃತ್ವದ ಯುವಪಡೆ

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಸಾರಥ್ಯ

ಧಾರವಾಡ ಕೃಷಿ ವಿವಿಯ ಸಾಥ್

ಧಾರವಾಡ prajakiran.com : ಧಾರವಾಡದ ಹೃದಯ ಭಾಗದಲ್ಲಿ ಇರುವ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿ ಆವರಿಸಿಕೊಂಡಿರುವ ಅಂತರಗಂಗೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಶುಕ್ರವಾರ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಸಾರಥ್ಯದಲ್ಲಿ ಯುವ ಪಡೆ ಚಾಲನೆ ನೀಡಿತು.

ಸ್ವತಃ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರೇ ಕೆರೆಯಲ್ಲಿ ಇಳಿದು ಅಂತರಗಂಗೆಯನ್ನು ತೆರವುಗೊಳಿಸುವುದರ ಮೂಲಕ ತಮ್ಮ ಬದ್ಧತೆ ಮತ್ತು ಇಚ್ಚಾಶಕ್ತಿಯನ್ನು ವ್ಯಕ್ತಪಡಿಸಿದರು.

ಜೊತೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿಬ್ಬಂದಿ ಹಾಗೂ ಹಲವಾರು ಯುವಕರು ಇದಕ್ಕೆ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಬಸವರಾಜ ಕೊರವರ, ಕೆಲಗೇರಿ ಕೆಲಗೇರಿ ಕೆರೆ ಒಂದು ಪುರಾತನ ಕೆರೆಯಾಗಿದ್ದು, ಅದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿ ಉಳಿಸಿ ಉಡುಗೊರೆಯಾಗಿ ನೀಡಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಧಾರವಾಡದ ಹೆಮ್ಮೆಯ ಪುರಾತನ ಕೆರೆಗಳಲ್ಲಿ ಒಂದಾದ ನಗರದ ಕೆಲಗೇರಿ ಕೆರೆ ಇಂದು ಅಂತರಗಂಗೆ ಎಂಬ ಕಸದ ಬಳ್ಳಿಯಿಂದ ಆವರಿಸಿದ್ದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜಾಣಕುರುಡು ನೋವು ತರಿಸಿದೆ‌.

ಇದು ಕೆಲಗೇರಿ ಕೆರೆಯ ಸೌಂದರ್ಯಕ್ಕೆ ಧಕ್ಕೆ ತಂದಂತೆ ಕಾಣುತ್ತಿದೆ. ಅಂತರಗಂಗೆ ಎಂಬ ಬಳ್ಳಿಯೂ ಕೆಲಗೇರಿಯ ದಂಡೆಯ ಬಹುತೇಕ ಭಾಗವನ್ನು ಆವರಿಸಿದ್ದರಿಂದ ಕೆರೆಯ ಸೌಂದರ್ಯವೇ ಕಳೆಗಟ್ಟಿದಂತಾಗಿದ್ದು ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು ಹುಬ್ಬಳ್ಳಿಯ ಉಣಕಲ್ ಕೆರೆಗೆಚತೋರಿಸಿದಷ್ಟೇ ಕಾಳಜಿ ಹಾಗೂ ಇಚ್ಛಾಶಕ್ತಿ ತೋರಿಸಬೇಕು ಎಂದು ಆಗ್ರಹಿಸಿದರು.

ವಿಶೇಷ ಮುತುವರ್ಜಿ ವಹಿಸಿ ಅಂತರಗಂಗೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದು ಬಸವರಾಜ ಕೊರವರ ಆಗ್ರಹಿಸಿದರು.

ಈಗಾಗಲೇ ಕೃಷಿ ವಿವಿ
ಕೆರೆಯ ವಸ್ತುಸ್ಥಿತಿಯನ್ನು ವೀಕ್ಷಿಸಿ,
ಸಕಾರಾತ್ಮಕವಾಗಿ ಸ್ಪಂದಿಸಿ
ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ತಮ್ಮ ಸಿಬ್ಬಂದಿ ನೀಡಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ: ವಾಲಿ, ಡಾ: ಹಂಡೆಕರ್, ಡಾ: ರಾಜು ಚವ್ಹಾಣ ಹಾಗೂ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ, ಜನ ಜಾಗೃತಿ ಸಂಘದ ಸದಸ್ಯರಾದ ಕುಮಾರ ಅಗಸಿಮನಿ. ಪ್ರಮೊದ ಹರಕುಣಿ, ನಿಂಗಪ್ಪ ಶೀರಬಡಗಿ, ಬಸವರಾಜ ನರೆಂದ್ರ, ಹಾಗು ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು

ಶನಿವಾರ ಮತ್ತು ರವಿವಾರದ ವರೆಗೂ ಸ್ವಚ್ಚತಾ ಕಾರ್ಯ ಮುಂದುವರೆಯುತ್ತದೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *