ಜಿಲ್ಲೆ

ಡಾ. ಎಸ್ ರಾಧಾಕೃಷ್ಣನ್ ಸ್ಮರಣೋತ್ಸವ ಆನ್ ಲೈನ್ ಸ್ಪರ್ಧೆ

ಧಾರವಾಡ prajakiran.com : ಶಿಕ್ಷಕರ ದಿನಾಚರಣೆ ಪ್ರಯುಕ್ತ ಡಾ. ಎಸ್ ರಾಧಾಕೃಷ್ಣನ್ ಸ್ಮರಣೋತ್ಸವ ವಿಚಾರ ಮಂಥನ ಸ್ಪರ್ಧೆ 2020 ಆಯೋಜಿಸಲಾಗಿದೆ.

 ಡಾ. ಎಸ್ ರಾಧಾಕೃಷ್ಣನ್ ಅವರ ಜೀವನ ಸಾಧನೆ ಇಂದಿನ ಯುವ ಜನತೆ, ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಮಾಗ೯ದಶ೯ನವಾಗಬೇಕಾಗಿದೆ.

ಆದ್ದರಿಂದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಧಾರವಾಡ ಹಾಗೂ ಇತರರ ಸಂಯುಕ್ತಾಶ್ರಯದಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಇದರ ಮೂಲ ಉದ್ದೇಶ ಪ್ರತಿಭಾನ್ವಿತ ಶಿಕ್ಷಕರಿಗೆ ವೇದಿಕೆ ಹಾಗೂ ಸ್ಪರ್ಧೆಯ ಮೂಲಕ ಡಾ. ರಾಧಾಕೃಷ್ಣನ್ ರವರ ಜೀವನ ಚರಿತ್ರೆ ಪ್ರಚಾರಾಂದೋಲನ ನಡೆಸುವುದಾಗಿದೆ.

ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯನ್ನು ನಾವು ಶಿಕ್ಷಕರಾಗಿ ಮನೆ ಮನೆಗೆ ತಲುಪಿಸುವಂತಹ ಕಾಯ೯ಮಾಡೋಣ ಎಂಬ ಉದ್ದೇಶದಿಂದ ಈ ಕಾಯ೯ಕ್ರಮವನ್ನು ಆನ್ ಲೈನ್ ಮೂಲಕ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ 15000 ರೂ 10 ಬಹುಮಾನಗಳನ್ನು ನೀಡಲಾಗುವುದು.ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಸೆ. 15 ಕೊನೆಯ ದಿನಾಂಕವಾಗಿದೆ.

ಭಾಗವಹಿಸಿದ ಶಿಕ್ಷಕರಿಗೆ ಅಭಿನಂದನಾ ಪತ್ರ, 1ರಿಂದ 5 ಸ್ಥಾನಗಳಿಸಿದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು  ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ  ಮುಳ್ಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳ. ಬಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *