ಸಿನಿಮಾ

ನಟಿ ರಾಗಿಣಿ ವಶಕ್ಕೆ ಪಡೆದ ಸಿಸಿಬಿ

ಬೆಂಗಳೂರು prajakiran.com : ಶುಕ್ರವಾರ ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಬೆಳಗ್ಗೆ 6.30ಕ್ಕೆ ದಾಳಿ ನಡೆಸಿದ ಪೊಲೀಸರು 9 ಗಂಟೆಯವರೆಗೆ ಮನೆಯ ಇಂಚು ಇಂಚು ಶೋಧನೆ ನಡೆಸಿದರು.

ಮಹಿಳಾ ಪೊಲೀಸ್ ಇನ್ಸಪೆಕ್ಟರ್ ಅಂಜುಮಾಲಾ ನಾಯಕ್ ನೇತೃತ್ವದಲ್ಲಿ ನಾಲ್ವರು ಮಹಿಳಾ ಪೊಲೀಸರು ಕಾರ್ಯಚರಣೆ ನಡೆಸಿದರು.

ಮನೆಯಲ್ಲಿ ರಾಗಿಣಿ ಒಬ್ಬರೇ ಇರುವುದರಿಂದ ಪುರುಷ ಪೊಲೀಸರು ಹೊರಗಡೆ ನಿಂತಿದ್ದರು. ಈ ಕ್ರಮ ಅನುಸರಿಸಿದ ಪೊಲೀಸರು ಕಾರಿನಲ್ಲಿ ಒಂದಿಷ್ಟು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮನೆಯ ಒಳಗೆ ಕೂಡ ಎರಡು ಮೊಬೈಲ್ ಸೇರಿದಂತೆ ಅನೇಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಇನ್ನಷ್ಟು ಮಹತ್ವದ ವಿವರಗಳನ್ನು ಕಲೆ ಹಾಕಲು ರಾಗಿಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.

ಈಗಾಗಲೇ ನಟಿ ರಾಗಿಣಿ ಆಪ್ತ ರವಿ ಶಂಕರ್ ನನ್ನು ಐದು ದಿನಗಳ ಕಾಲ ವಿಚಾರಣೆಗಾಗಿ ಸಿಸಿಬಿ ಪೊಲೀಸರ ವಶದಲ್ಲಿರುವುದರಿಂದ ಮೊದಲು ಇಬ್ಬರನ್ನು ಪ್ರತ್ಯೇಕ ವಿಚಾರಣೆ ನಡೆಸಲಿದ್ದಾರೆ.

ಅಗತ್ಯಬಿದ್ದರೆ ಇಬ್ಬರನ್ನು ಒಟ್ಟಿಗೆ ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ ಹಾಗೂ ಅವರನ್ನು ವಶಕ್ಕೆ ಪಡೆದಿರುವುದು ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ದೊಡ್ಡ ದೊಡ್ಡ ಕುಳಗಳು ಬಲೆಗೆ ಬೀಳುತ್ತವಾ ಎಂಬುದನ್ನು ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *