ರಾಜ್ಯ

ಮುಂಬೈದಿಂದ ಹುಬ್ಬಳ್ಳಿಗೆ ಬಂದ ಕೋವಿಡ್ ಪಾಸಿಟಿವ್ ವ್ಯಕ್ತಿ ಕಿಮ್ಸ್ ಗೆ ದಾಖಲು

ಧಾರವಾಡ prajakiran.com : ಮೇ 28 ಗುರುವಾರದಂದು ಕೋವಿಡ್ 19 ದೃಢಪಟ್ಟಿರುವ ಧಾರವಾಡ ಜಿಲ್ಲೆಯ  ಪಿ – 2710 ಸೋಂಕಿತ ವ್ಯಕ್ತಿಯ ಪ್ರಯಾಣ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ. ಪಿ-2710 ನೇ ಸೋಂಕಿತ 65 ವರ್ಷದ ಪುರುಷ ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ. ಇವರು ಫೆಬ್ರುವರಿ 2020 ರ ತಿಂಗಳಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಮುಂಬೈಗೆ ಹೋಗಿದ್ದರು.  ಮೇ 25 ರಂದು ಸೋಮವಾರ ಅನಾರೋಗ್ಯದ ನಿಮಿತ್ಯ ಚಿಕಿತ್ಸೆಗಾಗಿ ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಾಗಿದ್ದರು.  ಮೇ 26 ರಂದು […]

ರಾಜ್ಯ

ಧಾರವಾಡದ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಗೆ ವಿಧಾನ ಪರಿಷತ್ ಗೆ  ನೇಮಿಸಲು ಒತ್ತಡ

ಧಾರವಾಡ prajakiran.com :  ಧಾರವಾಡದ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಯವರಿಗೆ ವಿಧಾನ ಪರಿಷತ್ ಗೆ  ನೇಮಿಸಲು ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೆ, ಕೆಲವರು ನೇರವಾಗಿ ಭೇಟಿಯಾಗಿ ಒತ್ತಡ ಹಾಕಲು ಆರಂಭಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಧಾರವಾಡ ಗ್ರಾಮೀಣ ವಿಧಾನ ಸಭಾಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಅವರನ್ನು ಜೂನ್ ನಲ್ಲಿ ತೆರವಾಗುವ ಹಲವು ವಿಧಾನ ಪರಿಷತ್ ಸ್ಥಾನಗಳ ಪೈಕಿ ಒಂದನ್ನು ಧಾರವಾಡ ಜಿಲ್ಲೆಗೆ ನೀಡಲೇಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಒತ್ತಡ […]

ಆಧ್ಯಾತ್ಮ

ಭಾನುವಾರದ ಕರ್ಫ್ಯೂ ತೆರವುಗೊಳಿಸಿ ಧಾರವಾಡ ಜಿಲ್ಲಾಧಿಕಾರಿ ಆದೇಶ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮೇ ೩೦ ರ ಸಂಜೆ.೭ ರಿಂದ ಜೂನ್ ೧ ರ ಬೆಳಿಗ್ಗೆ ೭ ಗಂಟೆಯವರೆಗೆ ಮುಂಜಾಗೃತ ಕ್ರಮವಾಗಿ ಕರ್ಫ್ಯೂ ಜಾರಿ ಮಾಡಿ ಆದೇಶಿಸಲಾಗಿತ್ತು. ಆದರೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ, ಭಾನುವಾರದಂದು ಪೂರ್ಣ ದಿನದ ಲಾಕ್‌ಡೌನ್ ಎಂದು ಆದೇಶಿಸಲಾಗಿರುವುದನ್ನು ಮಾರ್ಪಡಿಸಲಾಗಿದೆ. ಮೇ.೩೧ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೭ ರವರೆಗೆ ವಿಧಿಸಿದ್ದ ಕರ್ಫ್ಯೂವನ್ನು ತೆರವುಗೊಳಿಸಿ ವಿನಾಯಿತಿ ನೀಡಿ […]

ರಾಜ್ಯ

ವಿದ್ಯಾನಗರಿ ಧಾರವಾಡದ ಇಬ್ಬರು ಮಹಿಳೆಯರಿಗೆ ಕರೋನಾ ಸೊಂಕು ಪತ್ತೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಸಂಜೆ ಪ್ರಕಟವಾದ ಹೆಲ್ತ್ ಬುಲೇಟಿನ್ ನಲ್ಲಿ ಮತ್ತೇರಡು  ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರನ್ನು ಪಿ-2807 ನೇ 26 ವರ್ಷದ ಮಹಿಳೆ  ಹಾಗೂ ಪಿ-2808 27 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಇವರ ಪೈಕಿ  ಪಿ-2807 ನೇ 26 ವರ್ಷದ ಮಹಿಳೆ ಪಿ-1123ರ ಸೋಂಕಿತರ ಸಂಪರ್ಕದಿಂದ ಬಂದಿದ್ದರೆ, ಪಿ-2808 27 ವರ್ಷದ ಸೋಂಕಿತೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರಯಾಣ ಮಾಡಿದ ಹಿನ್ನೆಲೆ  ಹೊಂದಿದ್ದಾರೆ ಎಂದು ವಿವರಿಸಿದ್ದಾರೆ. […]

ಅಪರಾಧ

ಧಾರವಾಡದಲ್ಲಿ ಮಗನಿಗೆ ಕಾಡಿಸಬೇಡಿ ಎಂದ ತಂದೆಗೂ ಹಲ್ಲೆ ಮಾಡಿದ ಕಿರಾತಕರು ..!

ಧಾರವಾಡ prajakiran.com : ಮಗನಿಗೆ ಕಾಡಿಸಬೇಡಿ ಎಂದು ಬುದ್ದಿ ಹೇಳಲು ಹೋದ ತಂದೆಗೆ ಹಾಗೂ ಮಗನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಗುವೊಂದು ಸೈಕಲ್ ತೆಗೆದುಕೊಂಡು ಧಾರವಾಡದ ಶಿವಾನಂದ ನಗರದಲ್ಲಿ ಮುಕ್ತುಂ ಸೊಗಲದ ಮನೆಯ ಮುಂದೆ ಓಡಾಡಿದ್ದ. ಆಗ ಹುಡುಗನ ಸೈಕಲ್ ಚಾವಿ ಕಸೆದುಕೊಂಡು ಈ ಹುಡುಗರು ಕಪಾಳಕ್ಕೆ ಹೊಡೆದಿದ್ದರು. ಹಲ್ಲೆಗೊಳಗಾದ ಮಗು ಈ ವಿಷಯವನ್ನು ತನ್ನ ತಂದೆಯ ಗಮನಕ್ಕೆ ತಂದಿದ್ದ. ಇದನ್ನು ಪ್ರಶ್ನಿಸಿ ಬುದ್ದಿ ಹೇಳಲು ಹೋದ […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಮೇ 31ರಂದು ೧೪೪ ನೇ ಕಲಂ ಅಡಿ ನಿಷೇಧಾಜ್ಞೆ

ಧಾರವಾಡ prajakiran.com :  ಕರೊನಾ ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಭಾನುವಾರ ಮೇ.೩೧ ರಂದು ಜಿಲ್ಲೆಯಾದ್ಯಂತ ಸಿ ಆರ್ ಪಿ ಸಿ ೧೯೭೩ ರ ಕಲಂ ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶವು  ಮೇ ೩೦ ರ ಸಾಯಂಕಾಲ  ೭  ಗಂಟೆಯಿಂದ  ಜೂನ್ ೧ ರ ಬೆಳಿಗ್ಗೆ ೭  ಗಂಟೆಯವರೆಗೆ  ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ , ಕ್ರೀಡಾ […]

ರಾಜ್ಯ

ಧಾರವಾಡ ಜಿಲ್ಲೆಯ ಕಾರ್ಮಿಕರ ಕಿಟ್ ಬಿಜೆಪಿ ಕಾರ್ಯಕರ್ತರ ಪಾಲು …!

ಧಾರವಾಡ prajakiran.com : ರಾಜ್ಯದ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಇತರೆ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ ವಿತರಿಸಲು ಸರಬರಾಜು ಮಾಡಿದ ದವಸ ಧಾನ್ಯಗಳ ಕಿಟ್ ಬಿಜೆಪಿ ಕಾರ್ಯಕರ್ತರ ಪಾಲಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಧಾರವಾಡದ ವಿವಿಧ ಬಡಾವಣೆಗಳಲ್ಲಿ ವಾಸಿಸುವ ಕಟ್ಟಡ ಕಾರ್ಮಿಕರಿಗೆ ವಿತರಿಸಬೇಕಾದ ಕಿಟ್ ಗಳನ್ನು ಅಕ್ರಮವಾಗಿ ಅವರಿವರ ಮನೆಯಲ್ಲಿ ದಾಸ್ತಾನು ಮಾಡಲಾಗಿದೆ. ಈ ಪೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾರ್ಮಿಕ ಇಲಾಖೆ ನೀಡಿದ […]

ರಾಜ್ಯ

ಧಾರವಾಡದ ಮೆಣಸಿನಕಾಯಿ ವ್ಯಾಪಾರಿ ಗುಣಮುಖ : ಆಸ್ಪತ್ರೆಯಿಂದ ಬಿಡುಗಡೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಮೆಣಸಿನಕಾಯಿ ವ್ಯಾಪಾರಿ ಕೋವಿಡ್ ನಿಂದ ಗುಣಮುಖರಾಗಿ  ಬುಧವಾರ  ಹುಬ್ಬಳ್ಳಿಯ ಕಿಮ್ಸ್ ನಿಂದ  ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದಾಗಿ , ಮೇ  ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಧಾರವಾಡ ಹೊಸಯಲ್ಲಾಪುರದ ಕೋಳಿಕೆರೆ, ನವಲೂರ ಅಗಸಿ ಪ್ರದೇಶದ ಪಿ- 705 ( 35 ವರ್ಷ,ಪುರುಷ)  ಸಂಪೂರ್ಣ ಗುಣಮುಖರಾಗಿದ್ದಾರೆ. ಇವರಿಗೆ 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ […]

ರಾಜ್ಯ

ಧಾರವಾಡದಲ್ಲಿ ಲಾಕಡೌನ್  ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದ 22 ಜನರ ವಿರುದ್ದ ಪ್ರಕರಣ

ಧಾರವಾಡ prajakiran.com :  ಲಾಕಡೌನ್  ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ರಾಜನಗರ ಶಿವಳ್ಳಿ ಪ್ಲಾಟ್ ಮುಕ್ತಾಯ ಹಂತದಲ್ಲಿ ಇರುವ ಹಜರತ ನಿಜಾಮೋದ್ದೀನ್ ಮದರಸಾದಲ್ಲಿ ಲಾಕಡೌನ್ ನಿಯಮ‌ ಉಲ್ಲಂಘಿಸಿ ಸಾಮೂಹಿಕವಾಗಿ ನಮಾಜ್ ಮಾಡಿರುವ ಘಟನೆ ನಡೆದಿದೆ. ಕರೋನಾ ಹಿನ್ನಲೆಯಲ್ಲಿ ದೇಶದ್ಯಾಂತ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನಿರಾಕರಿಸಿ, ನಿರ್ಬಂಧ ಹೇರಲಾಗಿದೆ. ಈ ಸಂಬಂಧ ಕಟ್ಟು ನಿಟ್ಟಿನ ಸೂಚನೆ ಇದ್ದರೂ ಸಹ ಜಿಲ್ಲಾಡಳಿತ ಹಾಗೂ […]

ರಾಜ್ಯ

ಧಾರವಾಡದಿಂದ ರಾಯಗಡ್ ಗೆ ಮರಳಲು ಆದಿವಾಸಿ ವಲಸೆ ಕಾರ್ಮಿಕರಿಗೆ ವಿಶೇಷ ಬಸ್  

ಧಾರವಾಡ prajakiran.com : ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಪಟ್ಟಣದಲ್ಲಿ ವಿವಿಧ ಕೂಲಿ ಕೆಲಸ ಮಾಡುತ್ತಿದ್ದ  ಮಹಾರಾಷ್ಟ್ರ ರಾಜ್ಯದ ರಾಯಗಡ್ ಜಿಲ್ಲೆಯ ವಲಸೆ ಕಾರ್ಮಿಕರು ಲಾರಿ ಮೂಲಕ ಅನಧಿಕೃತವಾಗಿ ಸಂಚರಿಸುತ್ತಿದ್ದಾಗ ಮಂಗಳವಾರ ಬೆಳಿಗ್ಗೆ ಜಿಲ್ಲೆಯ ತೇಗೂರ ಚೆಕ್‌ಪೋಸ್ಟ್ ನಲ್ಲಿ ಅವರನ್ನು ತಡೆದು  ನಗರದ ಕಲ್ಯಾಣ ಮಂಟಪದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಮಹಾರಾಷ್ಟ್ರ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ರಾಯಗಡ ಜಿಲ್ಲಾಧಿಕಾರಿಯೊಂದಿಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ವಲಸೆ ಕಾರ್ಮಿಕರನ್ನು ಮರಳಿ ಅವರ ತವರು ಜಿಲ್ಲೆ ರಾಯಗಡಕ್ಕೆ ಕಳುಹಿಸಲು […]