ರಾಜ್ಯ

ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಕೈ ಮುಖಂಡರು : ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ ಕುಲಕರ್ಣಿಯವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅವರ ಬೆಂಬಲಿಗರು ಧಾರವಾಡದ ಉಪನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸುತ್ತಿದ್ದಾರೆ. ಅವರ ವಿರುದ್ದ ಬಿಜೆಪಿ ಕುತಂತ್ರ ಮಾಡುತ್ತಿದೆ. ಕೊಲೆ ಪ್ರಕರಣದಲ್ಲಿ ಅನಗತ್ಯವಾಗಿ ಅವರನ್ನು ಎಳೆದು ತರಲಾಗುತ್ತಿದೆ. ಇದರ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ,  ಧಾರವಾಡ ಜಿಲ್ಲಾ […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ : ಮಾಜಿ ಸಚಿವ ವಿನಯ ಕುಲಕರ್ಣಿ, ವಿಜಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಗುರುವಾರ ಬೆಳ್ಳಂ ಬೆಳಗ್ಗೆ  ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಾರಾಕೋಟ್ರಿ ನಿವಾಸದ ಕದವನ್ನು ತಟ್ಟಿದೆ. ಹಲವು ಅಧಿಕಾರಿಗಳ ತಂಡ ಏಕಾಎಕಿ ಅವರ ಮನೆಗೆ ತೆರಳಿ ಅವರನ್ನು ಕರೆದುಕೊಂಡು ಉಪನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಂತೆ ಸೂಚಿಸಿದರು. ಆಗ ಅವರ ಪುತ್ರಿ ತಮ್ಮ ಕಾರಿನಲ್ಲಿಯೇ ಅವರನ್ನು ಕರೆದುಕೊಂಡು ಬಂದು ಪೊಲೀಸ್ ಠಾಣೆಗೆ ಬಿಟ್ಟರು. ಇದೇ […]

ರಾಜ್ಯ

ಧಾರವಾಡದ ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ….!

ಧಾರವಾಡ prajakiran.com : ಧಾರವಾಡದ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸಮತಾ ಸೇನೆ ಸದಸ್ಯರು ಮಂಗಳವಾರ ಧಾರವಾಡದ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಎದುರು ಆಹಾರ ಧಾನ್ಯಗಳನ್ನು ಇಟ್ಟು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಅಂಗನವಾಡಿ ಕೇಂದ್ರಗಳಿಂದ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ನೀಡುವ ರವೆ, ಹಿಟ್ಟು, ಧಾನ್ಯಗಳು ಸಂಪೂರ್ಣ ಕಳಪೆಮಟ್ಟದ್ದಾಗಿವೆ. ಅವುಗಳನ್ನು ದನಗಳೂ ಸಹ ತಿನ್ನುವುದಿಲ್ಲ. ಅಂತಹ ಆಹಾರ ಧಾನ್ಯಗಳನ್ನು […]

ಅಪರಾಧ

ಧಾರವಾಡದ ಲೋಕೂರ ಶಾಲೆ ಬಾಗಿಲು, ಕಿಡಕಿ ಧ್ವಂಸ ಮಾಡಿದ ಕಿಡಿಗೇಡಿಗಳು…..!

ಧಾರವಾಡ prajakiran.com : ಯಾರೋ ಕಿಡಿಗೇಡಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್.ಎಂಎಸ್.ಎ. ಅಪ್ ಗ್ರೇಡೆಡ ಶಾಲೆಯ ಕೊಠಡಿ ಬಾಗಿಲ ಹಾಗೂ ಹಿಂದಿನ ಕಿಡಕಿಯನ್ನು ಧ್ವಂಸ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ತಾಲೂಕಿನ ಲೋಕೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಧ್ವಂಸಗೊಂಡಿದೆ. ಈ ಬಗ್ಗೆ  ಶಾಲೆಯ ಹೆಡ್ ಮಾಸ್ತರ ಶ್ರೀಮತಿ ಸುಚೇತಾ ಹೂಗಾರ ಗರಗ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು […]

ಅಪರಾಧ

ಧಾರವಾಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ : ಚೀನಿ ಬಸು, ಕಿರಣ ಅಂದರ್

ಧಾರವಾಡ prajakiran.com : ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಹೆಸರಿನಲ್ಲಿ ಧಾರವಾಡದಲ್ಲಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಮಾಜಿ ಸಚಿವರ ಆಪ್ತನೊಬ್ಬ ಸೇರಿ ಇಬ್ಬರು ಹುಬ್ಬಳ್ಳಿ-ಧಾರವಾಡ ಪೊಲೀಸರ ಬಲೆಗೆ ಭಾನುವಾರ ರಾತ್ರಿ ಬಿದ್ದಿದ್ದಾರೆ. ಧಾರವಾಡದ ಕಮಲಾಪುರದಲ್ಲಿ ಕಳೆದ ಹಲವು ದಿನಗಳಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿರುವ ಮಾಹಿತಿಯ ಆಧಾರದ ಮೇಲೆ ಅದರ  ಬೆನ್ನು ಹತ್ತಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಪಿ. ಕೃಷ್ಣಕಾಂತ,  ಆರ್.ಬಿ. ಬಸರಗಿ, ಎಸಿಪಿ ಅನುಷಾ ಜಿ., ಸಿಸಿಬಿ ಇನ್ಸಪೆಕ್ಟರ್ ಗಳಾದ […]

ಅಪರಾಧ

ಧಾರವಾಡದಲ್ಲಿ ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕ್ರಿಸ್ಟಾ ಕಾರ್ ಕಳವು….!

ಧಾರವಾಡ prajakiran.com : ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ಕಳವು ಮಾಡಿ ತಮ್ಮ ಕೈ ಚಳಕ ತೋರಿದ ಘಟನೆ ಧಾರವಾಡದಲ್ಲಿ ಶುಕ್ರವಾರ ನಡೆದಿದೆ. ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ ಮಾಲೀಕರನ್ನು ಬೆಚ್ಚಿಬೀಳಿಸಿದೆ. ಧಾರವಾಡದ ಕೆಲಗೇರಿ ನಿವಾಸಿ ಪ್ರವೀಣ ಹುಯಿಲಗೋಳ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಈ ಕಾರ್  ಬಿಜೆಪಿ ಮುಖಂಡನಿಗೆ ಸೇರಿದ್ದು ಎಂದು ವಿದ್ಯಾಗಿರಿ ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಜಿಲ್ಲೆ

ಧಾರವಾಡದ ನಿವೃತ್ತ ಶಿಕ್ಷಕ ಬಾಬುಲಾಲ್ ಎಚ್ ಪಾಗೆ ಇನ್ನಿಲ್ಲ

ಧಾರವಾಡ prajakiran.com : ಇಲ್ಲಿಯ ಗಾಂಧಿ ನಗರದ ಮದಿನಾ ಕಾಲೋನಿ ನಿವಾಸಿ ಹಾಗೂ ಅಂಜುಮನ್ ಸಂಸ್ಥೆಯ ನಿವೃತ್ತ ಶಿಕ್ಷಕರಾದ ಬಾಬುಲಾಲ್ ಎಚ್ ಪಾಗೆ (71) ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ ಗುರುವಾರ ಸಂಜೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದರು. ಅವರು ಇಬ್ಬರು ಪುತ್ರಿಯರು ಹಾಗೂ ಬಿಲ್ಡರ್ ಸಮೀರ್ ಪಾಗೆ ಸೇರಿ ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತಿಮ ಯಾತ್ರೆ […]

ರಾಜ್ಯ

ಧಾರವಾಡದಲ್ಲಿ ಚುನಾವಣೆ ಕರ್ತವ್ಯಲೋಪ ತೋರಿದ ಮೂವರ ಅಮಾನತು

ಧಾರವಾಡ prajakiran.com : ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯಲೋಪ ಮಾಡಿದ ಮೂವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಆಗಿರುವ ನಿತೇಶ್ ಕೆ . ಪಾಟೀಲ ಆದೇಶ ಹೊರಡಿಸಿದ್ದಾರೆ. ವಿ. ಎಂ ಸಾಳುಂಕೆ , ಶಿರಸ್ತೇದಾರರು , ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ , ಧಾರವಾಡ, ಜಿ ಬಿ ಚಂದನಕರ , ದ್ವಿ.ದ.ಸ. ತಹಶೀಲದಾರ ಕಚೇರಿ , ಧಾರವಾಡ ಹಾಗೂ ಅಡಿವೇಶ ಪರ್ವತಿ , […]

ರಾಜ್ಯ

ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡಿ

ಧಾರವಾಡ prajakiran.com : ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಆಗ್ರಹಿಸಿ ವಿವಿಧ ಕೇಂದ್ರಗಳ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೋವಿಡ್-೧೯ ರ ಹಿನ್ನಲೆಯಲ್ಲಿ ಕಳೆದ ಮಾರ್ಚ್ ೨೪ ರಿಂದ ಸರಕಾರದ ಆದೇಶದಂತೆ ನಗರದಲ್ಲಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡುವ ಕೇಂದ್ರಗಳ ಕಾರ್ಯಚಟುವಟಿಕೆಗಳನ್ನು ಸ್ಥಗಿರಗೊಳಿಸಲಾಗಿತ್ತು. ಈ ಮಧ್ಯೆ ಹಲವಾರು ಸ್ಪರ್ಧಾತ್ಮಕ ಪರೀಕ್ಷಗೆಳು ನಡೆದಿವೆ. ಅಲ್ಲದೇ, ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಈ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ವಿದ್ಯಾರ್ಥಿ […]

ಜಿಲ್ಲೆ

ಧಾರವಾಡದ ಕೆಲಗೇರಿ ಕೆರೆಯಲ್ಲಿ ಗರಿಷ್ಠಮಟ್ಟಕ್ಕಿಂತ ಹೆಚ್ಚಿನ ನೀರು ಸಂಗ್ರಹ : ಗಾಯತ್ರಿಪುರಂ ಬಳಿ 15 ಅಡಿ ಮಣ್ಣು ಕುಸಿತ

ಧಾರವಾಡ Prajakiran.com : ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿ ಗರಿಷ್ಠಮಟ್ಟಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿದೆ. ಇದು ಸಹಜವಾಗಿಯೇ ಪಕ್ಕದ ಗಾಯತ್ರಿಪುರಂ ನಿವಾಸಿಗಳು ಆತಂಕದಲ್ಲಿ ದಿನ ದೂಡುವಂತೆ ಮಾಡಿದೆ. ಇದರಿಂದಾಗಿ ಕೆಲಗೇರಿ ಕೆರೆಯ ಕೆಳಭಾಗದಲ್ಲಿ ಇರುವ ಗಾಯತ್ರಿಪುರಂ ಗೆ ಹೊಂದಿಕೊಂಡ ರಸ್ತೆಯ ಕೆಳಗಡೆಯ ಮಣ್ಣು ತಂಪಾಗಿ ಈಗಾಗಲೇ 15 ಅಡಿಗಳಷ್ಟು ಕುಸಿದಿದೆ. ಅಲ್ಲದೆ, 6*6 ಅಡಿಗಳಷ್ಟು ಕಂದಕ ನಿರ್ಮಾಣವಾಗಿದೆ. ಜೊತೆಗೆ ಕೆಳಗಡೆಯ ಜಲಮಂಡಳಿಯ ಪೈಪೂ ಒಡೆದಿದೆ. ಹೀಗಾಗಿ ಕೆಲಗೇರಿ ರಸ್ತೆ ಮೇಲೆ ಭಾರೀ ವಾಹನಗಳು ಸಂಚರಿಸಿದಲ್ಲಿ ಅದರಲ್ಲೂ ನಾವು […]