ಅಪರಾಧ

ಧಾರವಾಡದಲ್ಲಿ ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕ್ರಿಸ್ಟಾ ಕಾರ್ ಕಳವು….!

ಧಾರವಾಡ prajakiran.com : ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ನ್ನೋವಾ ಕ್ರಿಸ್ಟಾ ಕಾರನ್ನು ಕಳವು ಮಾಡಿ ತಮ್ಮ ಕೈ ಚಳಕ ತೋರಿದ ಘಟನೆ ಧಾರವಾಡದಲ್ಲಿ ಶುಕ್ರವಾರ ನಡೆದಿದೆ.

ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ ಮಾಲೀಕರನ್ನು ಬೆಚ್ಚಿಬೀಳಿಸಿದೆ.

ಧಾರವಾಡದ ಕೆಲಗೇರಿ ನಿವಾಸಿ
ಪ್ರವೀಣ ಹುಯಿಲಗೋಳ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಈ ಕಾರ್ 
ಬಿಜೆಪಿ ಮುಖಂಡನಿಗೆ ಸೇರಿದ್ದು ಎಂದು ವಿದ್ಯಾಗಿರಿ ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.

ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ವಿದ್ಯಾಗಿರಿ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.

ಕಾರ್ ನ ಯಾವುದೇ ಗ್ಲಾಸ್ ಒಡೆಯದೆ, ಬೇರೆ ಯಾವುದೆ ರೀತಿಯ ಹಾನಿ ಮಾಡದೆ
ಬಾಗಿಲು ತೆಗೆದು ಕಾರ್ ತೆಗೆದುಕೊಂಡು ಹೋಗಿದ್ದು ಹೇಗೆ ಎಂಬುದನ್ನು ಪೊಲೀಸರಿಗೆ ಪ್ರಕರಣ ಭೇದಿಸುವುದು ಸವಾಲಾಗಿದೆ.

ಅಲ್ಲದೆ, ಧಾರವಾಡದಲ್ಲಿ ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕ್ರಿಸ್ಟಾ ಕಾರ್ ಕಳವು ಆಗಿರುವುದು ಇದೆ ಮೊದಲು ಎಂದು ಹೇಳಲಾಗುತ್ತಿದ್ದು, ಹೈ ಫೈ ಕಳ್ಳತನ ನಡೆದಿರುವುದು ಅವಳಿ ನಗರದ ಕಾರ್ ಮಾಲೀಕರಿಗೆ  ಆತಂಕ ಮೂಡಿಸಿರುವುದು ಸುಳ್ಳಲ್ಲ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *